Saturday, February 8, 2014

!!! ... ನೀ ... !!!

ನಾ ನೆನೇವ ನೆನಪಿನ ಸಾಗರದಲಿ
ಕನಸಿನಾ ಅಲೆಯಾಗಿ ನೀ ಬಂದೆ
ಬಾಳ ನೌಕೆಯ ನಾನೇರಲು
ಭಾವನೆಯ ನಾವಿಕ ನೀನಾದೆ

ಮಾಸಿದಾ  ಮನದಂಗಳದಲ್ಲಿ
ರಂಗಿನಾ ಚಿತ್ತಾರ ನೀ ಗೀಚಿದೆ
ಬತ್ತಿದಾ ಕಂಗಳಲಿ
ಒಲವಿನ ತುಂತುರು ಹನಿ ನೀನಾದೆ  

ನನ್ನೊಳಗಿನ ಭಾವ ನೀನು
ಭಾವನೆಯ ಭಾವಾಂತರ ನೀನು
ನನ್ನೆದೆಯ ಬಡಿತ ಮಿಡಿಯುತಿದೆ ನೆನೆದು
ಬಾ ಬಾಳ ಒಡತಿ ಹಂಬಲಿಸಿದೆ ಈ ಮನ

ನೀನಿಲ್ಲದಾ ಈ ಬಾಳ ಪಯಣ
ಸಾರಥಿ ಇಲ್ಲದಾ ರಥದಂತೆ
ನಾವಿಕನಿಲ್ಲದಾ ನಾವೇಯಂತೆ ..!!

Sunday, January 19, 2014

!!.. ನಿವೇದನೆ ...!!


ಮನದಾಳದಲಿ ಮುಡಿದಾ
ಆಸೆಯ ನೆನೆಯುತ
ಕತ್ತಲೆಯ ಹಾದಿಯಲಿ ನಡೆದು ನಾ
ಕನಸಿನಲಿ ಬೆಳಕಿನ ಹಾದಿ ತುಳಿದೆ.

ಮನವಿಂದು ನೆನೆಯುತಿದೆ
ಕನಸಿನಾ ಮಂಜು ಹನಿಯಲಿ
ನಿನ್ನದೇ ನೆನಪು ಮತ್ತೆ ಮತ್ತೆ
ಕಾಡುತಿದೆ ನಿನ್ನಿರುಹ ನೆನೆದು .

ನಿನ್ನಯ ನೆನಪು ಮೌನದಿ ಕಾಡಿ
ಯೇನ್ನೆದೆಯಲಿ ಬಚ್ಚಿಟ್ಟ ಭಾವನೆಗಳು
ಹಾಗೇ  ಗರಿಬಿಚ್ಚಿ ಹಾರುತಿವೆ
ನಿನ್ನೋಲವಿನ  ಪ್ರೀತಿಯ ಕಡಲಿನೆಡೆಗೆ.

ಬಾ ಗೆಳತಿ ನೀ
ನನ್ನ ಮನದಲಿ ಮನಸಾಗಿ
ಕನಸಲಿ ನೆನಪಾಗಿ
ಜೀಕುವಾ ಬಾಳ ಪಯಣವ
ಮಮತೆಯ ನಾವೇ ಏರಿ ಪ್ರೀತಿಯ ಸಾಗರದಲಿ ...!!!

Tuesday, January 14, 2014

!!.. ಸಂಕ್ರಾಂತಿ ..!!

ಎಳ್ಳಿನೊಡನೆ ಕಬ್ಬು ಬೆಲ್ಲದ ಸಿಹಿ ಬೆರೆತು
ಸವಿ ಸವಿ ನುಡಿಯೊಂದು ಮೂಡಿ
ನವ ವರುಷದ ಹರುಷ
ಮನದಾಳದಲಿ ಗರಿ ಬಿಚ್ಚಲಿ.

ದ್ವೇಷ ಕ್ಲೇಶಗಳ ಮರೆತು
ಹೊಸಗನಸೊಂದ ಹೆಣೆದು
ಸಾಗಲಿ ನಮ್ಮಯ ಪಯಣವು
ನವ ಬಾಳಿನೆಡೆಗೆ ....!!!

Friday, January 3, 2014

!!!.... ಮೌನ ರಾಗಕೆ ...!!!

ಕಣ್ಣಲ್ಲಿ ಹುಟ್ಟಿದ
ನೂರಾರು ಕನಸುಗಳು
ರೆಕ್ಕೆ ಬಿಚ್ಚಿ
ಹಾರತೊಡಗಿದ್ದು,
ನನ್ನಾಕೆಯ ಅಂತರಂಗದ
ಭಾವನೆಗಳ ಮಿಡಿತದಲಿ
ನನ್ನ ಒಲವಿನ ವೀಣೆಯು
ಅರಿವಿಲ್ಲದೆ ಹಾಡಿದಾ
ಮೌನ ರಾಗಕೆ ...!!

Sunday, December 1, 2013

!!... ನೀನಿಲ್ಲದ ಬಾಳು ...!!


ನನ್ನ ಕಣ್ಣಲಿ ಮೂಡುವುದು ನಿನ್ನದೇ ಕನಸುಗಳು
ಮನದಾಳದಿ ಕೆದಕುವುದು ನಿನ್ನದೇ ನೆನಪುಗಳು
ಹೃದಯದಲಿ ನೀ ಗೀಚಿದೆ ಪ್ರೀತಿಯಾ ಅಕ್ಷರವಾ
ಭಾವದಲಿ ಅಚ್ಚೊತ್ತಿದೆ ನಿನ್ನದೇ ಹೆಜ್ಜೆ ಗುರುತುಗಳ
ಹೇಳೆ ಸತಿ ನೀನಿಲ್ಲದ ಬಾಳು ಬಾಳೆ ಎನಗೇ ....!!

Sunday, October 27, 2013

!!... ಬರುವಿಕೆ ...!!


ಕನಸಿನೊಳಗಿನ ಮಧುರ  ಕನಸಾಗಿ ಬಾ ಗೆಳತಿ ,
ಮನಸಿನೊಳಗೆ ಹೊಸಗನಸೊಂದ ಹೊತ್ತು ತಾ,
ಕಾದಿರುವೆ ನಾ ಹೃದಯದಂಗಳದಲ್ಲಿ ಪ್ರೀತಿಯಾ ಚುಕ್ಕಿ ಇಟ್ಟು,  
ರಂಗೋಲಿಯ ಚಿತ್ತಾರವ ಬಿಡಿಸಿ ನಿನ್ನಾ ಬರುವಿಕೆಗಾಗಿ ,
ಬರುವೆ ತಾನೇ ಓ ಗೆಳತಿ ಈ ನಿನ್ನ ಇನಿಯನಿಗಾಗಿ...??

Friday, September 13, 2013

!!.... ಬಾಳ ಒಡತಿ ....!!


ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ತಿಳಿದೂ ತಿಳಿಯದೆ
ನೀ ಬಂದೆ ಬಾಳ ದೋಣಿಯಲಿ ಜೊತೆಯಾಗಿ ಇಂದು
ಮುದುಡಿದಾ ಮನದಲ್ಲಿ ನವಗನಸೊಂದ ತಂದು  
ಭಾವ ಬಂಧನದ ಬೆಸುಗೆಯಾ ನೀ  ಹೊಸೆದೆ.

ಮೆಲ್ಲನೇ ನನ್ನ ಬೆರಳಲಿ ನಿನ್ನ ಬೆರಳನಿಟ್ಟು
ಕಣ್ಣಂಚಲಿ ತುಸು ನಾಚಿ ಕಾಲಲಿ ರಂಗೋಲಿಯಾ ಗೀಚೀ
ತುಟಿಯಂಚಲೆ ಮನ ಸೆಳೆದು ಮೌನದಿ  ನೀ  ಬರೆದೆ
ಎನ್ನೆದೆಯ ಪುಟಗಳಲಿ ಹೊಸ ಬಾಳ ಮುನ್ನುಡಿಯ

ಹೃದಯದ ಪಿಸುಮಾತ ಮೆಲ್ಲಗೆ ಹೇಳುವಾಸೆ ನಿನ್ನಲ್ಲಿ
ಏಕೋ ಮಾತುಗಳು ಕರಗುವವು ಮಂಜಿನಾ ಹನಿಯಂತೆ
ಸನಿಹ ನೀನಿರಲು ನೊರೆಂಟು ಹೊಸ ಭಾವ ಮನದಲ್ಲಿ
ಭಾವ ನನ್ನದಾದರೂ ಅದರೊಳಗಿನ ಭಾವನೆ ನಿನ್ನದೇ

ನಿನಲ್ಲವೇ  ಒಡತಿ ಜೊತೆಯಾಗಿ ಇರುವವಳು
ನನ್ನೀ ಬಾಳ ಕೊನೆಯ ಉಸಿರಲಿ ಉಸಿರಾಗಿ  ...!!!