Saturday, March 31, 2012

ದೂರ ತೀರದ ಯಾನಕೆ


ನೆನಪೆಂಬ ಹೃದಯದಲಿ ಭಾಂದವ್ಯದ ಕನಸುಗಳು ಮರೆಯಾಗುವ ಮುನ್ನಾ
ಸೇರುವಾಸೆ  ಮಧುರ ಜೀವನದ  ಪ್ರೀತಿಯ ದೂರ  ತೀರದ ಯಾನಕೆ
ಮೌನದ ಮಾತು ಅವಿತಿಹುದು ಅಂತರಾಳದಲಿ ಅರುಹಲು ಬಚ್ಚಿಟ್ಟ ಪ್ರೀತಿಯ 
ಬಯಸುತಿದೆ ನಿದ್ರಿಸಲು ನಿನ್ನೆದೆಗೊರಗಿ  ನನ್ನಯಾ  ಮುಗ್ಧ  ಮನವಿಂದು
ಸಿಗುವುದೇ ಗೆಳತಿ ನಿನ್ನಯಾ ಪ್ರೀತಿ ಕಮರಿದಾ ಈ ಬಾಳ ಪಯಣಕೆ .....?? 


Monday, March 5, 2012

ಮನದ ವೇದನೆ



ಅರಿಯದೆ ನೀ ಬರೆದೆ ನಿನ್ನ ಹೆಸರ ನನ್ನ ಉಸಿರ ಮಿಡಿತದಲ್ಲಿ
ಅನುಕ್ಷಣವು ನೆನೆನೆನೆದು ಹೃದಯವು ಕೋಗಿ ಕರೆಯುತಿದೆ ನಿನ್ನಾ
ತುಂತುರು ಮಳೆಯ ಹನಿಯಲ್ಲಿ ಕೂತು ಕಂಬನಿ ಸುರಿದಿವೆ ಕಣ್ಗಳು
ಭಾವನೆಯ ಅಂತರಾಳದಲಿ ಮನದ ವೇದನೆಯು ಹೊಯ್ದಾದುತಿದೆ
ಜಾರುತಿದೆ ಜೀವನವು ನೆನಪುಗಳ ಅಲೆಗಳ ನಡುವೆ ತೇಲುತಾ
ಬರುವೆಯಾ ಗೆಳತಿ ಬಾಡಿದಾ ಜೀವಕೆ ಹೊಸ ಚಿಗುರ ತುಂಬಲು ....?




Thursday, February 16, 2012

ಒಮ್ಮೆ ನೋಡು ಬಾ ಗೆಳತಿ....




ಕಣ್ಮುಚ್ಚಿ ಕುಳಿತರು ಅರಿವಿಲ್ಲದೆ ಮೂಡುವುದು ನಿನ್ನದೇ ಛಾಯೆ 


ದೊರವಾದರು ಕಾಡುವುದು ನಿನ್ನದೇ ನೆನಪುಗಳ ಸಾಲು ಸಾಲು 


ಏಕೋ ಏನೋ ನಿಂತಲ್ಲೇ ನಿಲುತಿಲ್ಲ ನನ್ನಯಾ ಮನವಿಂದು 


ಮಿಡಿಯುತಿದೆ ಹೊಸ ಹೊಸ ಭಾವಗಳು ಮುದ್ದಾದ ಹೃದಯದಲ್ಲಿ


ಹೇ ಒಲವೇ ಹೇಳುತಿದೆ ನನ್ನೀ ಮನವು ಇಲ್ಲೇ ನಿ ಇರುವೆ ಎಂದು 


ಕಣ್ತೆರೆದು ಒಮ್ಮೆ ನೋಡು ಬಾ ಗೆಳತಿ ನನ್ನೊಳಗೆ ನಿನ್ನಾ 


ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದು ....!!










Monday, February 13, 2012

ಮನಸ್ಸಿನ ಭಾವನೆಗಳೆ ಈ ಕವನ..!!!


ಇದ್ದೆ ನಾ ತೇಲುತಾ ನೆನಪುಗಳ ಅಲೆಯಲ್ಲಿ ದಡದ ಬರುವಿಕೆಗಾಗಿ              
ಅರಿಯದೆ ಕಾಡುವಾ ನೆನಪು ಮರೆಸಿ ನೀ ತಂದೆ ಸಿಹಿ ಪ್ರೀತಿ ಎದೆಯಲಿ      
ಜೀವದಾ  ಜೀವಕೆ ಉಸಿರ ಎರೆದು ಹೊಸ ಭಾವದ ಮಿಡಿತ ನೀನಾದೆ          
ಬರುವೆಯಾ ಎನ್ನ ಮನದ ಮಂದಿರವ ಬೆಳಗುವ ಜ್ಯೋತಿಯಾಗಿ ನೀ      
ಓ ಒಲವೇ ನಿನಗೆ ನಿವೇದಿಸಲಾಗದ ನನ್ನ ಮನಸ್ಸಿನ ಭಾವನೆಗಳೆ ಈ  ಕವನ..!!!


Saturday, February 11, 2012

ಹುಚ್ಚು ಒಲವೇ.....

ಹುಚ್ಚು ಒಲವೇ ತಿರುತಿರುಗಿ ನೀ ನೋಡದಿರು ಹಿಂಗೇ ,
ಮೋಹದಾ ಮುಗುಳು ನಗೆ ಬಿರಿ ಕಣ್ಣಂಚಲೇ ಮನಸೆಳೆದೆ ,
ಬತ್ತಿ ಬರಿದಾದ ಈ ಮನಕೆ ಪ್ರೀತಿಯಾ ಸಿಂಚನವ ಮಾಡಿದೆ ,
ಅರಿಯದಾ ಹೃದಯದ ಕಣ್ಣಿಗೆ ಕನಸಿನಾ ಅರಮನೆ ತೋರಿದೆ ,
ಮಾಯದಾ ಹೊಂಗನಸು ನನಸಾಗುವ ಮುನ್ನ '
ಮುಗ್ದ ಭಾವದಿ ಒಲವ ಸುಧೆ ಹರಿಸಿ ,
ಓ ಜೀವವೇ ಎಲ್ಲಿ ಮರೆಯಾದೆ ನೀ ಮೌನವಾಗಿ........?

Tuesday, February 7, 2012

ಮಂಜಿನಾ ಹನಿಗಳು ....

ಬಾನಿನಾ ಒಡಲಿಂದ ಜಾರುತಿವೆ ಇಬ್ಬನಿಯ ಹನಿಗಳು ,
ಚಂದಿರನ ಬೆಳದಿಂಗಳು ನುಗ್ಗುತಿವೆ ಮುತ್ತಿಕಲು ಅದನು ,
ಉತ್ಸುಕದಿ ಕಾಯುತಿದೆ ಚಿಗುರೆಲೆಯು ಎದೆಯಲ್ಲಿ ಬಚ್ಚಿಡಲು ,
ಮುಗುಳ್ನಗೆ ಬಿರುತಿದೆ ಮೊಗ್ಗು ಇದ್ದು ಇಲ್ಲದಾ ಮಂಜಿನಾ ನೆರಳಲಿ ,
ನಸು ನಾಚಿ ಮರೆಯಾಗುತಿವೆ ಮುತ್ತಿನಾ ಹನಿಗಳು ,
ಕೇಳುತಿದೆ ಇಳೆಯು ಮತ್ತೆ ಬರುವೆಯಾ ಎಂದೂ.......♥♥

Monday, February 6, 2012

ಒಲವೇ ಹೇಳು ನಿನ್ಯಾರು.......??

ಅರಿವಿಲ್ಲದೆ ಮರೆಯಾಗುವೆ ಮರೆಯಾಗಿಯೂ ನನ್ನ ಕಾಡುವೆ ,
ಕನಸಲು ಕನಸಾಗಿ ಬಂದು ಹೃದಯದ ಕದ ತಟ್ಟಿ ಕರೆಯುತಿಹೆ ,
ಕಣ್ಮುಚ್ಚಿ ಕುಳಿತರು ಕಣ್ಣೊಳಗೆ ಮೂಡುವುದು ನಿನ್ನದೇ ಛಾಯೆ ,
ಮನದ ಮನೆಯಲ್ಲಿ ಗೀಚಿದೆ ಸುಂದರ ಭಾವನೆಗಳ ಚಿತ್ತಾರ ,
ಉಸಿರಲು ಉಸಿರು ಬೆರೆಸುವ ಒಲವೇ ಹೇಳು ನಿನ್ಯಾರು........??