Sunday, September 9, 2012

♥♥.....ಪ್ರೀತಿಯ ಗಾನಲಹರಿಗೆ.....♥♥





ಹೃದಯದಿ ನೀ ಬರೆದೆ ಹೊಸದೊಂದು ಕವಿತೆಯ 
ಮನದ ಮೌನ ಗುನುಗುತಿದೆ ಇಂಪಾದ ರಾಗವ 
ಭಾವವಿಂದು ಮಿಡಿಯುತಿದೆ ಪ್ರೀತಿಯ ಗಾನಲಹರಿಗೆ
ನೆನಪೆಂಬ ನೆಪ ಮಾಡಿ ಒಮ್ಮೆ ಬಾ ಗೆಳತಿ 

ಅಂದು ನಿ ಗೀಚಿದೆ  ಒಲವಿನ ರಂಗೋಲಿಯ 
ಎನ್ನೆದೆಯ ಭಾವನೆಗಳ ಭಾವ ಮಂದಿರದಲ್ಲಿ 
ಮೌನದಾ  ಜೊತೆಗೆ ನಾಚಿಕೆಯ ಕುಡಿನೋಟವ ಬಿರಿ 
ಹುಚ್ಚು ಮನಸಿನ ಸಾಗರದಲಿ ಪ್ರೀತಿಯಾ ಅಲೆ ಎಬ್ಬಿಸಿದೆ 

ಕಂಪಿಸುತಿವೆ ಅಂತರಾಳದ ಭಾವಗಳು ನಿನ್ನೇದೆ ಮಿಡಿತಕೆ 
ಮನದ ಅಂದಕಾರವ ಮರೆಸಿ ಕನಸಿನಾ ಬೆಳಕ ಚೆಲ್ಲಿ 
ನಿಲಾಕಾಶದಲಿ ಹೊಳೆವ ಪೌರ್ಣಮಿಯ ಚಂದ್ರನಂತೆ 
ನನ್ನ ಕನಸಿನ ಕನ್ನಡಿಯಲಿ ನಿನ್ನ ಕಂಗಳ ತೋರಿದೆ  

ನಿನ್ನೊಲವಿನ  ಪದದ ಪಲ್ಲವಿಯ ಕೇಳದೆ 
ಮಂಕಾಗಿದೆ ಮನದ ಮಲ್ಲಿಗೆಯ ಎಸಳುಗಳು 
ಹೃದಯದಲ್ಲಿ ಅರಳಿ ಮನವೆಲ್ಲ ಘಮ್ಮೆನ್ನಿಸಿದ ಪ್ರೀತಿಯಾ ಹೂ 
ಮಾಸಿ ಮರೆಯಾಗುವ ಮುನ್ನ ಬಂದೊಮ್ಮೆ ಸೇರು ಗೆಳತಿ ....!!!!