Tuesday, January 29, 2013

!!.. ಮನದ ಭಾವ ..!!


ಎನ್ನೆದೆಯಾ ಭಾಂದವ್ಯದ ಭಾವಗಳ ಚುಕ್ಕಿ ಇಟ್ಟು  
ನಿನ್ನರಮನೆಯ ಅಂಗಳದಲಿ ಚಿತ್ತಾರ ಬರೆವಾಸೆ
ಮನದಾಳದಲಿ ಮೂಡಿ ಬಂದ ಮನದ ಮಾತು
ತುಟಿಯಂಚಲಿ ನಸುನಾಚಿ ಕರಗಿದೆ ನೀರಾಗಿ
ಕಣ್ಣಂಚಿನ ಕುಡಿನೋಟ ಹೇಳಬಯಸಿದೆ ನಿನಗೆ
ಅದರದಲಿ ಕರಗಿದಾ ಮನದ ಮೌನದ ತುಡಿತವ ....!!

Monday, January 21, 2013

!!..ಹಂಬಲ ..!!


ಮತ್ತೆ ಮತ್ತೆ ನಾ ಗೀಚುವೆ ನಿನ್ನಯ ಹೆಸರ
ಕಡಲಿನಾ ದಂಡೆಯ ತೇವವಾದ ಮರಳಿನಲಿ
ಅರಿವಿದೆ ನನಗೆ ನಿಲ್ಲದೆಂದು ಅಲೆಯ ರಭಸಕೆ
ಆದರೂ ಬರೆಯುವ ಆಸೆ ನನ್ನೀ ಮನಕೆ
ಅದೇನೋ ಸೆಳೆತೆ ಅದೇನೋ ತುಡಿತ ಆ ಹೆಸರಿನಲಿ...!!


Thursday, January 17, 2013

!!..ಹೇಳು ಬಾ ಒಲವೇ ನಾನ್ಯಾಕೆ ಹೀಗಾದೆ..!!ಹೃದಯದ ಕನ್ನಡಿಯಲ್ಲಿ ಕಾಣುವೇ
ನಿನ್ನದೇ ಮೋಹಕ ಮೊಗವನ್ನಾ
ನಸುನಾಚಿಕೆಯ ಒರೆ ನೋಟವು
ಸೆಳೆದಿದೆ ನನ್ನೀ ತನುಮನವನ್ನಾ

ನಿನ್ನಯಾ ಮನದ ಮಧುರ ಮೌನ
ನಾಚಿಕೆಯಲಿ ರಂಗೇರಿದ ಹಾಲ್ಗೆನ್ನೇ
ತಂಗಾಳಿಗೆ ನಲಿದಾಡುವ ಮುಂಗುರುಳು
ತುಟಿಯಂಚಿನ ತುಂಟ ನಗೆ ಕಾಡಿವೆ ನನ್ನನ್ನು

ನಿನಗಾಗಿ ಕಾದು ಕೂತಿರುವೆ ಸಾಗರದ ತೀರದಲಿ
ರೆಪ್ಪೆ ಮುಚ್ಚದೇ ಇದಿರು ನೋಡುತಿವೆ ನನ್ನೀ ಕಂಗಳು
ಅಲೆಯೊಂದು ಮೆಲ್ಲನೆ ಹೇಳಿದೆ ಬರುವಿಕೆಯ ಭರವಸೆಯ
ನಸುಕಿನ ಹಿತವಾದ ತಂಗಾಳಿಯು ಹೊತ್ತು ತಂದಿದೆ
ನಿನ್ನಯಾ  ಮೈ ಕಂಪನ್ನು ನನ್ನ ಭಾವದ ಒಡಲಿಗೆ    

ಪ್ರೀತಿಯ ಕಂಪೇನು ಸುಳಿದಿಲ್ಲಾ ನನ್ನಲ್ಲಿ
ಆದರೂ ಮನದಲೆಲ್ಲಾ ನಿನ್ನದೇ ಸವಿಗನಸು
ಹೊಸದೊಂದು ಭಾವ ಮಿಟಿದೆ ಹೃದಯದಿ
ನನ್ನೊಳು ನಾನಿಲ್ಲಾ ಅವರಿಸಿಹೆ ನಿ ಎಲ್ಲಾ
ಹೇಳು ಬಾ ಒಲವೇ  ನಾನ್ಯಾಕೆ ಹೀಗಾದೆ..!!
Tuesday, January 15, 2013

!!..ತೆರೆದ ಮನಸಿನ ಪುಟ...!!
ಮನದ ಮೌನದ ಹಿಂದಿನ
ಪಿಸಿಮಾತುಗಳು ಕೇಳದೇ ನಿನಗೆ
ಬಂದು ನೋಡೋಮ್ಮೆ ಗೆಳತಿ
ತೆರೆದ ಮನಸಿನ ಪುಟಗಳ ತಿರುವಿ
ಅರಿವಾದಿತು ನಿನಗೆ ಮನದಾಳದ
ಕಸಿವಿಸಿಯ ನಸು ಬೆಚ್ಚನೆಯ
ಕನಸುಗಳ ಭಾವನೆಯ ತೊಳಲಾಟ .....!!Thursday, January 10, 2013

!!...ನೀನೆ ಎಲ್ಲಾ ಬರೀ ನೀನೆ ಎಲ್ಲಾ ....!!


ಮತ್ತೆ ಮತ್ತೆ ನೆನಪಾಗುತಿದೆ ಗೆಳತಿ
ಅಂದು ನೀ ಗೆಜ್ಜೆಯ ಸದ್ದ ಮಾಡುತ
ಮೆಲ್ಲಮೆಲ್ಲನೆ ಹೆಜ್ಜೆ ಇಟ್ಟು ನಸುನಾಚುತಾ
ಬಂದು ನನ್ನ ಮೈ ಸೋಕಿದಾ ದಿನಗಳು

ಮನದೊಳಗೆ ಅದೇನೋ ಪುಳಕ ಹೊಸ ತವಕ
ಕಣ್ಣೊಳಗೆ ಕಣ್ಣಿಟ್ಟು ನಸುನಾಚಿ ನೀ ಮೀಟಿದಾಗ
ತುಟಿಯಂಚಲೆ ನೀ ಕರೆದೆ ಮೌನದಿ ಮನ ಸೆಳೆದೆ
ಅದೇನೋ ಮೋಡಿ ನಿನ್ನಾ ಕಂಗಳಲಿ ನಿನ್ನಾ ಮೌನದಲಿ

ನಿರೀಕ್ಷೆಯಲಿ ಇರುವೇ ನಾ ಕನಸಿನಾ ಚೆಲುವೆ
ಕಾದಿಹವು ತನು ಮನಗಳೆಲ್ಲಾ ನಿನ್ನದೇ ಬರುವಿಕೆಯಲಿ
ಕೇಳೇ ಗೆಳತೀ ನಾನೊಬ್ಬ ಕನಸುಗಾರ
ನನ್ನ ಕನಸಲಿ ನೀನೆ ಎಲ್ಲಾ ಬರೀ ನೀನೆ ಎಲ್ಲಾ ....


Monday, January 7, 2013

!!...ನೀನಿಲ್ಲದಾ ಈ ಬದುಕು...!!
ಜೊತೆಯಾಗಿ ಬರುವೆ ನಾ ಗೆಳತೀ
ಈ ಬಾಳ ದೂರ ತೀರದ ಯಾನಕೆ
ಕಣ್ಣಂಚಲಿ ನೂರಾರು ಹೊಂಗನುಸುಗಳ ಕಟ್ಟಿ
ಅದರಲ್ಲೇ ನಿನ್ನಾ ಭಾವವ ಬಿಂಬಿಸಿ
ಕಾದಿರುವೆ ನಾ ನಿನ್ನದೇ ಬರುವಿಕೆಯಲ್ಲಿ
ನೀನಿಲ್ಲದಾ ಈ ಬದುಕು
ಇಬ್ಬನಿ ಇಲ್ಲದಾ ಮುಂಜಾನೆಯಂತೆ
ಭಾವನೆಗಳಿಲ್ಲದಾ ಬರಡು ಮನಸಿನಂತೆ....!!

Sunday, January 6, 2013

 <3 ಬಣ್ಣ ಬಣ್ಣದ ಕನಸು <3


ಕಾಣುವೇ ನಾ ಬಣ್ಣ ಬಣ್ಣದ ಕನಸುಗಳ
ನಿನ್ನದೇ ಹೆಸರು ಮನದಲ್ಲಿ ಮೂಡಲು
ನಿನ್ನ  ಕಂಗಳಲಿ ಮರೆಯಾದರೇನು
ಮನದಲ್ಲಿ ನೆನಪಾಗಿ ಉಳಿವೆ
ನಾವಿಬ್ಬರು ದೂರಾದರೇನು
ಹೃದಯ ತೆರೆದು ನೋಡೋಮ್ಮೆ ಗೆಳತೀ
ಕಾಣುವುದು ನಮ್ಮಿಬ್ಬರ  ಪ್ರೀತಿಯಾ ಹೆಜ್ಜೆ  <3 <3

Saturday, January 5, 2013

!!..ನಿನ್ನಲ್ಲಿ ನಾನಾಗುವ ಆಸೆ ..!!


ಬೆಳಕಿನಲಿ ನಡೆವಾಗ ನಿನ್ನಾ ನೆರಳಾಗಿ ಬರುವೆ
ಕತ್ತಲ್ಲಿ ಮಿಂಚು ಹುಳುವಾಗಿ ಹಿಂಬಾಲಿಸುವೆ ನಿನ್ನಾ
ತುಟಿಯಂಚಲಿ ನಸು ನಾಚಿಕೆ ನಾನಾಗುವೆ
ನಿನ್ನಾ ನಗುವಿನಲಿ ಕೆನ್ನೆಗುಳಿಯಾಗುವೆ ನಾ
ಮುಂಗುರುಳಾಗಿ ಬರುವೆ ನಾ ನಿನ್ನಾ ಸವಿಗೆನ್ನೇ ಸವರಲು
ಆದರೆ ನೆನಪಿಡು ಗೆಳತಿ ನಿನ್ನಾ ಕಣ್ಣಂಚಿನಲ್ಲಿ ಕಣ್ಣೀರಾಗಲಾರೆ
ಬದಲು ನಿನ್ನಯ ಬಾಳ ಪಯಣದಲಿ ನಿನ್ನಾ ಜೀವಕೆ ಉಸಿರು ನಾನಾಗುವೆ....


Friday, January 4, 2013

ಪ್ರೀತಿ ...


ಭಾವನೆಯೆಂಬ ಸಾಗರದ ಗರ್ಭದಲಿ
ಮನಸಿನಾ ಪುಟ್ಟ ಗೂಡಲ್ಲಿ
ಅದೇನೋ ಸೆಳೆತಾ
ಅದೇನೋ ಪುಳಕ
ನನ್ನೊಲುಮೆ ಅವಳಲ್ಲಿ
ಅವಳ ಹೃದಯ ನನ್ನಲ್ಲಿ....ಇದೇನಾ ಪ್ರೀತಿ ....???

ಕಣ್ಣಾಮುಚ್ಚಾಲೆ ...

ಬೆಳಕು ಕತ್ತಲೆಗಳ ನಡುವಿನಾ
ಕಣ್ಣಾಮುಚ್ಚಾಲೆ ಆಟದ ಜೊತೆಗೆ
ಋತುಗಳು ಉರಳಿದವು ,
ಭಾವ ಭಾವನೆಗಳ ಬಾಂಧವ್ಯದ ಸಾಗರದಲಿ
ನೆನಪಿನಾ ಅಲೆ ಅಪ್ಪಳಿಸಿತು..
ನಿನ್ನಾ ಹೃದಯದಾ ಪುಟದಲಿ
ಅಕ್ಷರವಾಗಿ ಉಳಿಯುವಾ ಈ ಇನಿಯನ ಆಸೆ
ನೆರವೆರಿತೇ ಗೆಳತೀ ???

ಗೆಳತೀ ....ನಸುನಾಚುತ ಬೆಳದಿಂಗಳ ರಾತ್ರಿಯಲಿ
ಮೋಡದಾ ಮರೆಯಿಂದಾ
ಮುತ್ತಿನಾ ಮಳೆ ಹನಿ ಜಿನುಗಲು ಇಳೆಗೆ
ಮೀಯುವೆ ನಾ
ನಿನ್ನಾ ನೆನಪಿನಾಳದ ಕಡಲಲ್ಲಿ ಗೆಳತೀ .......!!