Sunday, May 27, 2012

ನನ್ನಂತರಂಗದ ಮಾತು...



ಎನ್ನಯಾ ಮುಗ್ದ  ಮನವಿಂದು ತೇಲುತಿದೆ 
ನಿನ್ನಾ ಅನುರಾಗದ ಪ್ರೀತಿಯಾ ಅಲೆಗಳ ಮೇಲೆ 
 ಆ  ನಿನ್ನಯ ತುಟಿಯಂಚಿನಲಿ ಮೂಡಿದ
ಮೋಹದಾ ಮುಗುಳ್ನಗೆಯು ಕೊಲ್ಲುತಿದೆ ಎನ್ನಾ  

ಹೇಳಲು ತವಕಿಸುತಿದೆ ಭಾರವಾದ  ಹೃದಯ
ತನ್ನಲ್ಲಿ  ಹಾಗೆ  ಬಚ್ಚಿಟ್ಟ ಮನದಾಳದ ಒಲವಾ 
ಯಾಕೋ ಏನೋ ತಡೆಯುತಿದೆ  ಭಾವನೆಗಳನು
 ಈ ಕಣ್ಣಂಚಲಿ ಅರಿಯದೆ ಮೂಡಿದ ನಸುನಾಚಿಕೆಯು 

ಇನ್ನು ಅರ್ಥವಾಗದೇ ನನ್ನಂತರಂಗದ ಮಾತು ನಿನಗೆ 
 ಹೇಳು  ಓ ನನ್ನ  ಗೆಳತಿ ಏಕೆ ನೀ ಹೀಗೆ  ಮೌನಿಯಾದೆ....!!!!



Saturday, May 5, 2012

ಹೊಸ ಪರಿಭಾಷ್ಯವ ಗೀಚಿದವಳು ....


ನನ್ನ ಜೀವನದ  ಕಣ್ಣಾಗಿ ಬಾ ಗೆಳತಿ ರೆಪ್ಪೆಯಂತೆ ಸದಾ ಕಾಯುವೆ ನಾ
ಒಲವಾಗು ನೀ ಈ ಜೀವದಾ ಜೀವಕೆ ಉಸಿರಾಗಿ  ಜೊತೆಯಲ್ಲಿ ಬರುವೆ 
ಹೃದಯದ ಗೂಡಲ್ಲಿ ನೀ ಬಿತ್ತಿದಾ ಪ್ರೀತಿಗೆ ತಂಪಾದ ನೀರಾಗಿ ನಾನಿರುವೆ 
ಇಂದು ನಯನಗಳು ಹೇಳುತಿವೆ ಎಸ್ಟೋ ಹೇಳಲಾಗದ ಮನದ  ಮಾತುಗಳ  
ನಿನಲ್ಲವೇ ಗೆಳತಿ ನನ್ನ ಒಲವಿನ ಭಾಷೆಗೆ ಹೊಸ ಪರಿಭಾಷ್ಯವ ಗೀಚಿದವಳು ......


Thursday, May 3, 2012

ಹೃದಯ ವೀಣೆ ಮೀಡಿಯುವುದು........



ಹೆಜ್ಜೆ ಹೆಜ್ಜೆಗೂ ನಯನಗಳು ಕಾತರದಿ  ಹುಡುಕುತಿವೆ ಎಲ್ಲಿರುವೆ ನೀನೆಂದು 
ಹೃದಯ ವೀಣೆ ಮೀಡಿಯುವುದು  ನಿನ್ನಯಾ ನೆನಪುಗಳು ಹರಿದಾಡಿದಾಗ
ನೀನಿಲ್ಲದೆ ಮಧುರ  ಮಾತುಗಳು ಹುದುಗಿ ಮಲಗಿಹುದು ಮೌನದಾ ತೆಕ್ಕೆಯೊಳು  
ಭಾವಸಾಗರದಲಿ  ಬಿಸಿಯುಸಿರು  ಪಿಸುದನಿಯಲಿ ಕರೆವುದು ನಿನ್ನಯ ಹೆಸರಾ
ಕಾಡಬೇಡ ಗೆಳತಿ ಬಂದೊಮ್ಮೆ ಮರೆಸಿಬಿಡು ಚಿಂತೆಯಾ ನಿನ್ನಾಪ್ರೀತಿಸಾಗರದಲೆಗಳ ನಡುವೆ .... 



Friday, April 27, 2012

ಮೂಕ ವೇದನೆಯ ಕರಿ ನೆರಳು




ಭಾರವಾಗುತಿದೆ ಈ ಹೃದಯಾ ಜೀವದಾ ಜೀವ  ಕಣ್ಮರೆಯಾದಾಗ 
ದೂರವಾಗುತಿವೆ ಮನಸು ಮನಸುಗಳ ಮೌನದಾ ಮಾತುಗಳು 
ಅರಿಯದೆ ಕಣ್ಣಂಚಲಿ ಕಾಡುವುದು ಮೂಕ ವೇದನೆಯ ಕರಿ ನೆರಳು  
ಮನದ ಮಂದಿರದ  ಕದ ತಟ್ಟದೆ ಭಾವಾಂತರಾಳದಲಿ ಮುಡಿದಾ ಪ್ರೀತಿ  
ಬಡಿಸೇಯಾ ಗೆಳತಿ  ಒಲವಿನಾ ಸುಧೆಯಾ ನೊಂದ ಈ  ಜೀವಕೆ .....


Tuesday, April 24, 2012

ಅಹಂಕಾರದ ಪರೆಯ ತೆರೆದು


ದೀಪ ತಾ ಹೊತ್ತಿ ಉರಿದರು ಮಂದಹಾಸದಿ ಬೆಳಕ  ಚೆಲ್ಲುವುದು ಲೋಕಕೆಲ್ಲಾ 
ಇರುಳಿನಾ ಭಯವಿಲ್ಲ ,ನಿಸ್ವಾರ್ಥದ ನಿಷ್ಕಲ್ಮಶ  ಪಾವಿತ್ರತೆಯ ಸಾಂಕೇತವದು
ಕತ್ತಲ ಪರಿವೆ ಇಲ್ಲದೆ ತನ್ನ ಮೈಯ್ಯ ಸುಟ್ಟು ಅಂದಕಾರವ ಮೆಟ್ಟಿ ನಿಲುವುದು 
ಸಂತಸದಿ  ದಾರೆಯೇರೆವುದು ತನ್ನಯ ಜೀವವ ಪರರ ಜೀವಕೆ ಜೀವವಾಗಿ
ಬೆಳಗು ನೀ ನಂದಾದೀಪವಾಗಿ  ಮನದ   ಅಹಂಕಾರದ ಪರೆಯ ತೆರೆದು .....


 


Tuesday, April 3, 2012

ಆಂತರ್ಯದ ಪ್ರೀತಿ ....♥♥


ನಿನ್ನಯ ಕಣ್ಣಂಚಿನ ಕುಡಿನೋಟಕೆ ಸೋತಿದೆ ನನ್ನೀ ಮನ 
ಭಾವಾಂತರಾಳದಿ ಮೂಡಿದೆ  ಏನೋ ಪ್ರೀತಿಯ ಹೊಸ ಭಾವ   
ಒಲವಿನ  ಮಿಡಿತ   ಹೇಳಬಯಸಿದೆ ಏನನ್ನೋ  ನಿನ್ನಲ್ಲಿ 
ಮರೆಯಾಗುತಿದೆ  ಮನದಾಳದ ಮಾತು ಮೌನದಾ  ಹಿಂದೆ
ನೋಡಲಾರೆಯಾ  ಗೆಳತಿ ಒಮ್ಮೆ ಹೃದಯದಾ ಕಣ್ತೆರೆದು
ಅರ್ಥವಾದಿತೂ  ನಿನಗೆ ನನ್ನಯ  . ಆಂತರ್ಯದ  ಪ್ರೀತಿ ....♥♥


Saturday, March 31, 2012

ದೂರ ತೀರದ ಯಾನಕೆ


ನೆನಪೆಂಬ ಹೃದಯದಲಿ ಭಾಂದವ್ಯದ ಕನಸುಗಳು ಮರೆಯಾಗುವ ಮುನ್ನಾ
ಸೇರುವಾಸೆ  ಮಧುರ ಜೀವನದ  ಪ್ರೀತಿಯ ದೂರ  ತೀರದ ಯಾನಕೆ
ಮೌನದ ಮಾತು ಅವಿತಿಹುದು ಅಂತರಾಳದಲಿ ಅರುಹಲು ಬಚ್ಚಿಟ್ಟ ಪ್ರೀತಿಯ 
ಬಯಸುತಿದೆ ನಿದ್ರಿಸಲು ನಿನ್ನೆದೆಗೊರಗಿ  ನನ್ನಯಾ  ಮುಗ್ಧ  ಮನವಿಂದು
ಸಿಗುವುದೇ ಗೆಳತಿ ನಿನ್ನಯಾ ಪ್ರೀತಿ ಕಮರಿದಾ ಈ ಬಾಳ ಪಯಣಕೆ .....??