Saturday, February 8, 2014

!!! ... ನೀ ... !!!

ನಾ ನೆನೇವ ನೆನಪಿನ ಸಾಗರದಲಿ
ಕನಸಿನಾ ಅಲೆಯಾಗಿ ನೀ ಬಂದೆ
ಬಾಳ ನೌಕೆಯ ನಾನೇರಲು
ಭಾವನೆಯ ನಾವಿಕ ನೀನಾದೆ

ಮಾಸಿದಾ  ಮನದಂಗಳದಲ್ಲಿ
ರಂಗಿನಾ ಚಿತ್ತಾರ ನೀ ಗೀಚಿದೆ
ಬತ್ತಿದಾ ಕಂಗಳಲಿ
ಒಲವಿನ ತುಂತುರು ಹನಿ ನೀನಾದೆ  

ನನ್ನೊಳಗಿನ ಭಾವ ನೀನು
ಭಾವನೆಯ ಭಾವಾಂತರ ನೀನು
ನನ್ನೆದೆಯ ಬಡಿತ ಮಿಡಿಯುತಿದೆ ನೆನೆದು
ಬಾ ಬಾಳ ಒಡತಿ ಹಂಬಲಿಸಿದೆ ಈ ಮನ

ನೀನಿಲ್ಲದಾ ಈ ಬಾಳ ಪಯಣ
ಸಾರಥಿ ಇಲ್ಲದಾ ರಥದಂತೆ
ನಾವಿಕನಿಲ್ಲದಾ ನಾವೇಯಂತೆ ..!!

2 comments: