ಮನದಾಳದಲಿ ಮುಡಿದಾ
ಆಸೆಯ ನೆನೆಯುತ
ಕತ್ತಲೆಯ ಹಾದಿಯಲಿ ನಡೆದು ನಾ
ಕನಸಿನಲಿ ಬೆಳಕಿನ ಹಾದಿ ತುಳಿದೆ.
ಮನವಿಂದು ನೆನೆಯುತಿದೆ
ಕನಸಿನಾ ಮಂಜು ಹನಿಯಲಿ
ನಿನ್ನದೇ ನೆನಪು ಮತ್ತೆ ಮತ್ತೆ
ಕಾಡುತಿದೆ ನಿನ್ನಿರುಹ ನೆನೆದು .
ನಿನ್ನಯ ನೆನಪು ಮೌನದಿ ಕಾಡಿ
ಯೇನ್ನೆದೆಯಲಿ ಬಚ್ಚಿಟ್ಟ ಭಾವನೆಗಳು
ಹಾಗೇ ಗರಿಬಿಚ್ಚಿ ಹಾರುತಿವೆ
ನಿನ್ನೋಲವಿನ ಪ್ರೀತಿಯ ಕಡಲಿನೆಡೆಗೆ.
ಬಾ ಗೆಳತಿ ನೀ
ನನ್ನ ಮನದಲಿ ಮನಸಾಗಿ
ಕನಸಲಿ ನೆನಪಾಗಿ
ಜೀಕುವಾ ಬಾಳ ಪಯಣವ
ಮಮತೆಯ ನಾವೇ ಏರಿ ಪ್ರೀತಿಯ ಸಾಗರದಲಿ ...!!!
ಯಾರವಳು ಹಾಸಹಂಸೆ?
ReplyDeleteನನ್ನ ಮನದನ್ನೇ :)
Delete