ಬರೆಯಲೇ ನಾ ಕವಿತೆ
ಪ್ರೀತಿಯ ಶಾಹಿಯಲಿ
ಬರಿದಾದ ಮನಕೆ
ಒಲವಿನ ಮಳೆ ಸುರಿಯಲೇ
ಮನದಲಿ ಅಡಗಿಹ
ನೆನಪುಗಳ ಬುತ್ತಿಯನು
ಬಿಚ್ಚಿಟ್ಟು ಕರೆಯಲೇ
ಕನಸಿನರಮನೆಯೊಳಗೆ
ಹೇಳು ಗೆಳತಿ ಹೇಗೆ
ಕರೆಯಲಿ ನಿನ್ನಾ
ಎನ್ನ ಮನದಂಗಳಕೆ
ಕಂಬನಿಯ ಒರೆಸಿ
ಪ್ರೀತಿಯ ಹನಿ ಸುರಿಸಲು
ಹೃದಯವು ಹೆಜ್ಜೆ ಹಾಕುತಿದೆ
ನಿನ್ನ ಪ್ರಿತಿಯರಮನೆಗೆ
ಒಮ್ಮೆ ಇಣುಕಿ ನೋಡು
ನಾನಿರುವೆ ನಿನ್ನೊಳಗೆ
ನಾನಿರುವೆ ನಿನ್ನ ಮನದೊಳಗೆ ...!!
ಪ್ರೀತಿಯ ಶಾಹಿಯಲಿ
ಬರಿದಾದ ಮನಕೆ
ಒಲವಿನ ಮಳೆ ಸುರಿಯಲೇ
ಮನದಲಿ ಅಡಗಿಹ
ನೆನಪುಗಳ ಬುತ್ತಿಯನು
ಬಿಚ್ಚಿಟ್ಟು ಕರೆಯಲೇ
ಕನಸಿನರಮನೆಯೊಳಗೆ
ಹೇಳು ಗೆಳತಿ ಹೇಗೆ
ಕರೆಯಲಿ ನಿನ್ನಾ
ಎನ್ನ ಮನದಂಗಳಕೆ
ಕಂಬನಿಯ ಒರೆಸಿ
ಪ್ರೀತಿಯ ಹನಿ ಸುರಿಸಲು
ಹೃದಯವು ಹೆಜ್ಜೆ ಹಾಕುತಿದೆ
ನಿನ್ನ ಪ್ರಿತಿಯರಮನೆಗೆ
ಒಮ್ಮೆ ಇಣುಕಿ ನೋಡು
ನಾನಿರುವೆ ನಿನ್ನೊಳಗೆ
ನಾನಿರುವೆ ನಿನ್ನ ಮನದೊಳಗೆ ...!!
ಒಂದು ಸುಶ್ರಾವ್ಯ ಚಲನಚಿತ್ರ ಗೀತೆಯಾಗುವ ಹಾಗೆಯೇ ಕಾವ್ಯಾತ್ಮಕ ಗುಣಗಳೂ ಇರುವ ಕವನವಿದು.
ReplyDeleteಧನ್ಯನಾದೆ ಸರ್ .... :)
Delete