Thursday, June 21, 2012

ಹೊಸದೊಂದು ಭಾವ



ಮನದಲ್ಲಿ ಹಾಗೆ ಗುನುಗುವುದು ಹಿತವಾದ ಹಾಡೊಂದು
ತುಟಿಯಂಚಲಿ ಮೆಲ್ಲನೆ  ಹೊರಬರಲು ನಿನ್ನಯಾ ಹೆಸರು
ಸೆರೆಹಿಡಿದಿರುವೆ ನಾ ನಿನ್ನಯ ಚೆಲುವ  ನನ್ನೀ ಕಂಗಳಲಿ
ಹೇಳದೆ ಮರೆಯಾಗದಿರು ನೀ ಕಣ್ಣೀರ ಹನಿಯ ಜೊತೆಗೆ

ಏಕೋ  ಏನೋ  ಅಂದು ನಿನ್ನಯಾ ಕೈ ಸೋಕಲು
ಹೃದಯದಲಿ ಮೂಡಿದೆ ಹೊಸದೊಂದು ಭಾವ
ನಿಂತಲ್ಲೇ ನಿಲುತಿಲ್ಲ ಮನಸಿನಾ ಭಾವನೆಗಳು
ಅತ್ತಿತ್ತ ಹುಡುಕುತಿವೆ ಎಲ್ಲಿರುವೆ ನೀನೆಂದು ....

ಅಂದು ಸೋತು ಮೌನವಾಯಿತು ನನ್ನೆಲ್ಲ ಮಾತುಗಳು
ಮನದಲ್ಲೇ ಬಚ್ಚಿಟ್ಟೆ ನನ್ನೆಲ್ಲ ಕನಸುಗಳ ನಿನಗಾಗಿ
ಭಾರವಾಗಿದೆ ಮನವಿಂದು ನಿನ್ನಯಾ ಪ್ರೀತಿ ಕಾಣದೆ
ಹೇಳೇ ಗೆಳತಿ ಯಾವಾಗ ನೀ ಬರುವೆ ನನ್ನೀ ಹೃದಯ ಮಂದಿರಕೆ ...!!!!