ಮನದಲ್ಲಿ ಹಾಗೆ ಗುನುಗುವುದು ಹಿತವಾದ ಹಾಡೊಂದು
ತುಟಿಯಂಚಲಿ ಮೆಲ್ಲನೆ ಹೊರಬರಲು ನಿನ್ನಯಾ ಹೆಸರು
ಸೆರೆಹಿಡಿದಿರುವೆ ನಾ ನಿನ್ನಯ ಚೆಲುವ ನನ್ನೀ ಕಂಗಳಲಿ
ಹೇಳದೆ ಮರೆಯಾಗದಿರು ನೀ ಕಣ್ಣೀರ ಹನಿಯ ಜೊತೆಗೆ
ಏಕೋ ಏನೋ ಅಂದು ನಿನ್ನಯಾ ಕೈ ಸೋಕಲು
ಹೃದಯದಲಿ ಮೂಡಿದೆ ಹೊಸದೊಂದು ಭಾವ
ನಿಂತಲ್ಲೇ ನಿಲುತಿಲ್ಲ ಮನಸಿನಾ ಭಾವನೆಗಳು
ಅತ್ತಿತ್ತ ಹುಡುಕುತಿವೆ ಎಲ್ಲಿರುವೆ ನೀನೆಂದು ....
ಅಂದು ಸೋತು ಮೌನವಾಯಿತು ನನ್ನೆಲ್ಲ ಮಾತುಗಳು
ಮನದಲ್ಲೇ ಬಚ್ಚಿಟ್ಟೆ ನನ್ನೆಲ್ಲ ಕನಸುಗಳ ನಿನಗಾಗಿ
ಭಾರವಾಗಿದೆ ಮನವಿಂದು ನಿನ್ನಯಾ ಪ್ರೀತಿ ಕಾಣದೆ
ಹೇಳೇ ಗೆಳತಿ ಯಾವಾಗ ನೀ ಬರುವೆ ನನ್ನೀ ಹೃದಯ ಮಂದಿರಕೆ ...!!!!
cholo iddu..
ReplyDeleteThank you So much...:))
Delete