ಎನ್ನಯಾ ಮುಗ್ದ ಮನವಿಂದು ತೇಲುತಿದೆ
ನಿನ್ನಾ ಅನುರಾಗದ ಪ್ರೀತಿಯಾ ಅಲೆಗಳ ಮೇಲೆ
ಆ ನಿನ್ನಯ ತುಟಿಯಂಚಿನಲಿ ಮೂಡಿದ
ಮೋಹದಾ ಮುಗುಳ್ನಗೆಯು ಕೊಲ್ಲುತಿದೆ ಎನ್ನಾ
ಹೇಳಲು ತವಕಿಸುತಿದೆ ಭಾರವಾದ ಹೃದಯ
ತನ್ನಲ್ಲಿ ಹಾಗೆ ಬಚ್ಚಿಟ್ಟ ಮನದಾಳದ ಒಲವಾ
ಯಾಕೋ ಏನೋ ತಡೆಯುತಿದೆ ಭಾವನೆಗಳನು
ಈ ಕಣ್ಣಂಚಲಿ ಅರಿಯದೆ ಮೂಡಿದ ನಸುನಾಚಿಕೆಯು
ಇನ್ನು ಅರ್ಥವಾಗದೇ ನನ್ನಂತರಂಗದ ಮಾತು ನಿನಗೆ
ಹೇಳು ಓ ನನ್ನ ಗೆಳತಿ ಏಕೆ ನೀ ಹೀಗೆ ಮೌನಿಯಾದೆ....!!!!
No comments:
Post a Comment