ಹೆಜ್ಜೆ ಹೆಜ್ಜೆಗೂ ನಯನಗಳು ಕಾತರದಿ ಹುಡುಕುತಿವೆ ಎಲ್ಲಿರುವೆ ನೀನೆಂದು
ಹೃದಯ ವೀಣೆ ಮೀಡಿಯುವುದು ನಿನ್ನಯಾ ನೆನಪುಗಳು ಹರಿದಾಡಿದಾಗ
ನೀನಿಲ್ಲದೆ ಮಧುರ ಮಾತುಗಳು ಹುದುಗಿ ಮಲಗಿಹುದು ಮೌನದಾ ತೆಕ್ಕೆಯೊಳು
ಭಾವಸಾಗರದಲಿ ಬಿಸಿಯುಸಿರು ಪಿಸುದನಿಯಲಿ ಕರೆವುದು ನಿನ್ನಯ ಹೆಸರಾ
ಕಾಡಬೇಡ ಗೆಳತಿ ಬಂದೊಮ್ಮೆ ಮರೆಸಿಬಿಡು ಚಿಂತೆಯಾ ನಿನ್ನಾಪ್ರೀತಿಸಾಗರದಲೆಗಳ ನಡುವೆ ....
No comments:
Post a Comment