ಅದ್ಹೇಗೋ ನನಗರಿವಿಲ್ಲದೆ ಬಂದು ಸೇರಿತು
ನಿನ್ನಯಾ ಪ್ರೀತಿ ಎನ್ನೆದೆಯ ಮಂದಿರವ
ಮೂಡಿತು ಹೃದಯಾಂತರಾಳದಲಿ
ಏನೋ ಹೊಸದೊಂದು ಸುಂದರ ಅನುಭವ
ಪೌರ್ಣಮಿಯ ಚಂದಿರನು ನಸುನಾಚಿ ಕರಗಿಹನು
ನಿನ್ನಾ ತಾವರೆಯ ಮೊಗದ ಸೆಳೆತಕೆ
ಮೆಲ್ಲನೆ ಬೀಸುತಿಹ ತಣ್ಣನೆಯ ತಂಗಾಳಿಯು
ಹುಚ್ಚೆಬ್ಬಿಸಿದೆ ಅವಿತಿರುವ ಮನದ ಭಾವನೆಗಳ
ಅದೇಕೋ ಕಾಡುತಿದೆ ಪರಿ ಪರಿಯಾಗಿ
ಆ ನಿನ್ನ ಕುಡಿನೋಟದ ಮೋಹಕ ಸೆಳೆತ
ದೂರದಿ ಹಾಗೇ ಕೈ ಬೀಸಿ ಕರೆಯುತಿದೆ
ತುಟಿಯಂಚಿನ ಕಿರು ಮುಗುಳ್ನಗೆಯು
ಕರಗಿ ಹೋದೆ ನಾನಿಂದು ನನ್ನೇ ನಾ ಮರೆತು
ನಿನ್ನಯ ಪ್ರೀತಿಯ ಕಡಲಾಳದಲ್ಲಿ
ಹರಿಸು ಬಾ ಗೆಳತಿ ಅಮೃತ ಸುಧೆಯಾ
ಎನ್ನ ಬಾಳ ಒಲವಿನಾ ಪುಟದಲಿ ...!!!
No comments:
Post a Comment