ಆಗಸದಿ ಪೌರ್ಣಮಿಯ ಚಂದಿರನು
ಮೆಲ್ಲಗೆ ಮಂದಹಾಸವ ಚೆಲ್ಲಿಹನು
ಬೀಸುತಿಹ ಹಿತವಾದ ತಂಗಾಳಿಯು
ಮಲ್ಲಿಗೆಯ ಕಂಪ ಪಸರಿಸಿಹುದು
ನನ್ನೀ ಹೃದಯದ ವೀಣೆ ಮಿಡಿಯುತಿದೆ
ಕಾಣದ ಕೈ ಮೆಲ್ಲನೆ ಸವರಿ
ಮೋಹದ ರಾಗ ಕಂಪಿಸುತಿದೆ
ಅಂತರಂಗದ ಗೊಡಲ್ಲಿ ಅವಿತಿದ್ದ
ಹೊಸ ಭಾವನೆಯು ಗರಿ ಗೆದರಿ
ಉಲ್ಲಾಸದಿ ಮನದ ತುಂಬೆಲ್ಲ
ಹಾವ ಭಾವದಿ ಹಾರಿ ನಲಿಯುತಿದೆ
ಭಾವ ತುಂಬಿ ಹೃದಯ ಬಿಚ್ಚಿ
ಮನದ ಮೌನದ ಮಾತು
ತುಟಿಯಂಚಲಿ ತುಸು ನಸುನಾಚಿ
ಕೈ ಬಿಸಿ ಕರೆಯುತಿದೆ ನಿನ್ನನ್ನೇ
ಬಾ ಗೆಳತಿ ಬಂದೊಮ್ಮೆ ಬಿಗಿದಪ್ಪು
ನಿನ್ನೀ ಇನಿಯನ ತೋಳ ತೆಕ್ಕೆಯನು
ಸಾಗುವ ನಾವು ಬಾಳ ದೋಣಿಯನೇರಿ
ಪ್ರೀತಿ ಪ್ರೇಮದ ಮಧುರ ಸಾಗರದಿ......... !!!!
chandiddu...
ReplyDeleteDhanyavadagalu...
ReplyDeleteಪ್ರೀತಿಯ ಹುಡುಗನ, ಪ್ರೀತಿಯ ಕರೆ ಮಸ್ತ್ ಬೈಂದು..
ReplyDeleteಹೀಗೇ ಕವನಗಳ ಸರಮಾಲೆ ಪೋಣಿಸುತ್ತಿರು...
Thumba danhavadagalu thamage... heege nimma prothsaha sada nanna melirali...
Deletemast iddu blog ham.. keep writing...
ReplyDeleteThumbuhrudayada dhanyavadagalu... heege niranthara nimma prothsaha nanna melirali...:))
Delete