Monday, October 29, 2012

♥.. ಕಣ್ಣಂಚಿನ ಭಾವ ..♥




ನಿನ್ನಾ ಕಣ್ಣಂಚಿನ ಭಾವವು ಸೆಳೆದಿದೆ ತನುವನು 
ನಸುನಾಚಿಕೆಯ ಕುಡಿನೋಟಕೆ ಸೋತಿದೆ ಮನವು 
ಕಣ್ಣ ರೆಪ್ಪೆಯು ಬಾ ಎಂದು ಕರೆದಿದೆ ಒಲವನ್ನಾ
ಹೃದಯದ ಭಾಷೆ ಅರುಹುತಿದೆ ಅಂತರಾಳದ ಪ್ರೀತಿಯನ್ನಾ.

ಅರಿವಿಲ್ಲದೆ ಹೃದಯದ ಮೌನದಾ ಮಾತುಗಳು
ಹಾಗೆ ಮೆಲ್ಲನೆ ಗುನುಗುತಿದೆ ನಿನ್ನದೇ ಹೆಸರನ್ನಾ
ನಿನ್ನಾ ಸವಿಗೆನ್ನೆಯ ಮೇಲೆ ನಲಿದಾಡುವ ಮುಂಗುರುಳು
ಕೂಗಿ ಕರೆಯುತಿದೆ ನನ್ನಲಿ ಅನುರಕ್ತನಾಗೆಂದು

ಕನಸಲ್ಲಿ ಬಂದು ಮನಸಲ್ಲಿ ಅನುರಕ್ತಳಾದೆ
ತಂಗಾಳಿಯಂತೆ ಬಿಸಿ ನನ್ನುಸಿರಾಗಿ ಹೋದೆ
ಆಗಂತುಕಳಾಗಿ ಬಂದು ಮನದರಸಿಯಾದೆ
ಹೇಗೆ ಮರೆಯಲಿ ಗೆಳತಿ ನನ್ನ ಜೀವಕೆ ಉಸಿರಾದ ಒಲವ

ಭಾವಾಂತರಾಳದ ಭಾವಕು ಮೀರಿದ ಪ್ರೀತಿ ನಿನ್ನದು
ಸಾಲದು ಪದಗಳು ಬಣ್ಣಿಸಲು ನಿನ್ನಾ ಒಲವಿನ ಆಳವ
ಮಾತುಗಳೇ ಮರೆಯಾಗಿವೆ ಮೌನದಾ ಅಲೆಗಳ ನಡುವೆ
ಬಾ ಗೆಳತಿ ಅಪ್ಪಿ ಮುದ್ದಾಡಿಬಿಡು ಒಮ್ಮೆ ಈ
ಜೀವದಾ ಜೀವ ಕಣ್ಮುಚ್ಚಿ ಮರೆಯಾಗುವ ಮುನ್ನಾ..!!

Monday, October 8, 2012

♡♥♡ ಗರಿ ಬಿಚ್ಚಿ ಹಾರು ಬಾ ಗೆಳತಿ ♡♥♡



ಮುಗ್ದ ನಯನಗಳು ನಸುನಾಚಿ ಹುದುಗಿವೆ 
ಆ ನಿನ್ನ ಹೊಂಬಣ್ಣದ ಮುಂಗುರಳ ಮರೆಯಲ್ಲಿ 
ನಿನ್ನಾ ಸವಿಗೆನ್ನೆಯು  ನಾಚಿಕೆಯಿಂದ ರಂಗೇರಿ 
ನನ್ನನ್ನು ಸೆಳೆಯುತಿದೆ  ಅರಿಯದೆ ನಿನ್ನತ್ತ.. 

ನೈದಿಲೆಯು ಕಾತರಿಸಿದಂತೆ ಚಂದ್ರಮನ ಕುಡಿನೋಟಕೆ 
ಪರಿತಪಿಸುತಿದೆ  ಎನ್ನಿ ಮನವು ಹೃದಯದಾ ಚಿಪ್ಪಿನಲ್ಲಿ 
ಸದ್ದಿಲದೆ ಬಂದೊಮ್ಮೆ ಮನದ ಸುಂದರ ಬಯಕೆಗಳ ಇಡೇರಿಸಿ
ಬಿಡಿಸು ಬಾ ಬಣ್ಣದಾ ರಂಗೋಲಿಯ ಭಾವಗಳ ಚಿತ್ತಾರದಲಿ  

ಭಾವ  ಯಾನದಲಿ  ನೆನಪಿನಾ ನೌವ್ಕೆಯನೆರಿ 
ಸುಪ್ತ  ಮನದ ತೀರಕೆ ನಿನ್ನರಸಿ ಬಂದಿಹೆನು
ಎನ್ನೋಲವಿನ ಪಿಸುಮಾತು ಕೇಳಿಸದೆ ನಿನ್ನಾ ಮನಕೆ 
ಮನದ ಮೌನವ ಮರೆಯಾಗಿಸಿ ಹರಿಸು ಬಾ ಪ್ರೀತಿಯ ಒಲವ     

ಕನಸಿನಲೂ ಮನಸಿನಲೂ ಗುನುಗುತಿದೆ ನಿನ್ನದೇ ಸವಿನೆನಪು
ಏನೆಂದು ಅರುಹಲಿ ಭಾವಾನ್ತರಾಳದ ಭಾವದ ತಳಮಳವ
ಗರಿ ಬಿಚ್ಚಿ ಹಾರು ಬಾ  ಗೆಳತಿ ಎನ್ನೆದೆಯ ಬಾಂದಳದಿ 
ಬಿಸಿಯುಸಿರಿಗೆ ಪ್ರೀತಿಯ ತಂಪೆರೆವ ತಂಗಾಳಿಯಂತೆ ..!!