Monday, October 29, 2012

♥.. ಕಣ್ಣಂಚಿನ ಭಾವ ..♥




ನಿನ್ನಾ ಕಣ್ಣಂಚಿನ ಭಾವವು ಸೆಳೆದಿದೆ ತನುವನು 
ನಸುನಾಚಿಕೆಯ ಕುಡಿನೋಟಕೆ ಸೋತಿದೆ ಮನವು 
ಕಣ್ಣ ರೆಪ್ಪೆಯು ಬಾ ಎಂದು ಕರೆದಿದೆ ಒಲವನ್ನಾ
ಹೃದಯದ ಭಾಷೆ ಅರುಹುತಿದೆ ಅಂತರಾಳದ ಪ್ರೀತಿಯನ್ನಾ.

ಅರಿವಿಲ್ಲದೆ ಹೃದಯದ ಮೌನದಾ ಮಾತುಗಳು
ಹಾಗೆ ಮೆಲ್ಲನೆ ಗುನುಗುತಿದೆ ನಿನ್ನದೇ ಹೆಸರನ್ನಾ
ನಿನ್ನಾ ಸವಿಗೆನ್ನೆಯ ಮೇಲೆ ನಲಿದಾಡುವ ಮುಂಗುರುಳು
ಕೂಗಿ ಕರೆಯುತಿದೆ ನನ್ನಲಿ ಅನುರಕ್ತನಾಗೆಂದು

ಕನಸಲ್ಲಿ ಬಂದು ಮನಸಲ್ಲಿ ಅನುರಕ್ತಳಾದೆ
ತಂಗಾಳಿಯಂತೆ ಬಿಸಿ ನನ್ನುಸಿರಾಗಿ ಹೋದೆ
ಆಗಂತುಕಳಾಗಿ ಬಂದು ಮನದರಸಿಯಾದೆ
ಹೇಗೆ ಮರೆಯಲಿ ಗೆಳತಿ ನನ್ನ ಜೀವಕೆ ಉಸಿರಾದ ಒಲವ

ಭಾವಾಂತರಾಳದ ಭಾವಕು ಮೀರಿದ ಪ್ರೀತಿ ನಿನ್ನದು
ಸಾಲದು ಪದಗಳು ಬಣ್ಣಿಸಲು ನಿನ್ನಾ ಒಲವಿನ ಆಳವ
ಮಾತುಗಳೇ ಮರೆಯಾಗಿವೆ ಮೌನದಾ ಅಲೆಗಳ ನಡುವೆ
ಬಾ ಗೆಳತಿ ಅಪ್ಪಿ ಮುದ್ದಾಡಿಬಿಡು ಒಮ್ಮೆ ಈ
ಜೀವದಾ ಜೀವ ಕಣ್ಮುಚ್ಚಿ ಮರೆಯಾಗುವ ಮುನ್ನಾ..!!

No comments:

Post a Comment