Thursday, December 6, 2012

♥ ಅರ್ಥವಾಗದ ಭಾವ ♥



ಏನೆಂದು ಬಣ್ಣಿಸಲಿ ಗೆಳತಿ ನಿನ್ನೀ ಮಧುರ ಪ್ರೀತಿಯ 
ಮನದಲಿ ಅಚ್ಚಳಿಯದೆ ಮೂಡಿದೆ ಹೆಜ್ಜೆಯಾ ಗುರುತು
ತುಟಿಯಂಚಲಿ ಗೀಚಿರುವೆ ನಿನ್ನಯಾ ಹೆಸರಾ 
ನಯನದಲಿ ಬಿಡಿಸಿಹೆ ನಿನ್ನದೇ ಮೋಹಕ ಚಿತ್ತಾರವ 

ಬರಿದಾದ ಹೃದಯದಂಗಳದಲಿ ಪ್ರೀತಿಯ ಚುಕ್ಕಿಯಿಟ್ಟು 
ಅರಿವಿಲ್ಲದೆ ಒಲವಿನಾ ಸುಂದರ ರಂಗೋಲಿಯ ಬರೆದೆ
ಮೌನದಲೇ ನಾ ಸೆರೆಯಾದೆ ನಿನ್ನಯಾ ಕಂಗಳ ಕರೆಗೆ 
ಹೃದಯದಿ ಪ್ರೀತಿಯ ತುಂಬಿ ಹರಿಸೋ ಪ್ರೇಮಿ ನಾನಾದೆ 

ನನ್ನೀ ಮನದಲ್ಲಿ ಅರ್ಥವಾಗದ ಹೊಸ ಭಾವನೆಯ ಬೆಳೆಸಿದೆ 
ಮುಗುಳನಕ್ಕೂ  ಸುಮ್ಮನಾದೆ ಅದರ ಅರ್ಥವಾ ಹೇಳದೇ  
ಹುಡುಕುತಾ ಹೊರಟಿತು ನನ್ನೀ ಮನವು ಭಾವದಾ  ಹಿಂದೆ 
ಸನಿಹದಿ ನೀ ಆವರಿಸಿ ಹರಿಸಿದೆ  ಅಮೃತ ಸುಧೆಯಾ 

ಕದಿಯಬೇಡ ಗೆಳತಿ ನೀ ನನ್ನ  ಇರುಳ ನಿದಿರೆಯ
ಮರೆಯಾಗಿ ಕಾಡದಿರು ನೀ ಮತ್ತೆ ಮತ್ತೆ ನೆನಪಾಗಿ
ಬಾ ನನ್ನೊಲವೇ ಸನಿಹಕೆ ಈ ನೆನಪ ಕರಗಿಸಿ    
ನಡೆಯಲಾರೆ ಏಕಾಂಗಿಯಾಗಿ ಈ ಬಾಳ ಪಯಣದಲಿ ...!!

No comments:

Post a Comment