Sunday, December 9, 2012

!.... ನೆನಪುಗಳ ನಡುವೆ ....!




ನನ್ನೀ ಹೃದಯದ ಸವಿ ಮಾತು ಕೇಳೋಮ್ಮೆ ಗೆಳತಿ 
ಮನಸ್ಸಿನಾ  ಪುಟಗಳ ನಡುವೆ ನೆನಪಿನ ಅಕ್ಷರ ನೀನು 
ಹಾಗೇ ನೀ ಗೀಚಿ ಹೋದೆ ಪ್ರೀತಿಯ ಸವಿಗಾನವನ್ನು
ಗುನುಗುವುದು ಈ ಭಾವ ರಾಗ ತಾಳದ ಅರಿವಿಲ್ಲದೆ 

ಹಿಡಿದಿರುವೆ ಪ್ರೀತಿಯ ಹನಿಯನ್ನ ಹೃದಯದ ಚಿಪ್ಪಿನಲಿ
ಮತ್ತೆ ನೀ ಬರುವೆ ಪ್ರೀತಿಯ ಉಣಬಡಿಸಲೆಂಬ ಭರವಸೆಯಲಿ 
ಇದ್ದು ಬಿಡು ಗೆಳತಿ ನೆನಪಾಗಿ ನನ್ನೆದೆಯ ಬೆಚ್ಚನೆಯ ಗೂಡಲ್ಲಿ 
ಬಾಳ ಪಯಣವು ಸಾಗುತಿದೆ ನಿನ್ನದೇ ಹುಸಿಗನಸ ನೀರಿಕ್ಷೆಯಲಿ 

ನನ್ನ ಮನದ ಬಾಗಿಲನು ತೆರೆದು ಕಾದಿರುವೆ ನಾ 
ಒಮ್ಮೆ ತೊಳ್ತೆಕ್ಕೆಯಲಿ ಬಂದಿಸುವಾಸೆ ನಿನ್ನನ್ನು 
ನಿನಗಾಗಿ ಕಾಯದ ಕ್ಷಣವಿಲ್ಲ ನೆನಪಿಸದ ದಿನವಿಲ್ಲಾ 
ಅನಿಸುತಿದೆ ಯಾಕೋ ಕಾಯುವುದರಲಿ ಅರ್ಥವಿಲ್ಲ    

ಬೆಳದಿಂಗಳ ರಾತ್ರಿಯಲಿ ನಿನ್ನದೇ ನೆನಪಿನಲ್ಲಿ 
ಇಬ್ಬನಿಯ ಮಬ್ಬಿನಲಿ ತಬ್ಬಿತು ನಿನ್ನಾ ಒಲವನ್ನಾ
ಇರುಳ ಕತ್ತಲೆ ಸರಿದು ಬೆಳಕು ಮೂಡಲು ಬಾನಲ್ಲಿ 
ಅರ್ಥವಾಯಿತು ಗೆಳತಿ ಅದು ನಾ ಕಂಡ ಕನಸೆಂದು ...!!

Thursday, December 6, 2012

♥ ಅರ್ಥವಾಗದ ಭಾವ ♥



ಏನೆಂದು ಬಣ್ಣಿಸಲಿ ಗೆಳತಿ ನಿನ್ನೀ ಮಧುರ ಪ್ರೀತಿಯ 
ಮನದಲಿ ಅಚ್ಚಳಿಯದೆ ಮೂಡಿದೆ ಹೆಜ್ಜೆಯಾ ಗುರುತು
ತುಟಿಯಂಚಲಿ ಗೀಚಿರುವೆ ನಿನ್ನಯಾ ಹೆಸರಾ 
ನಯನದಲಿ ಬಿಡಿಸಿಹೆ ನಿನ್ನದೇ ಮೋಹಕ ಚಿತ್ತಾರವ 

ಬರಿದಾದ ಹೃದಯದಂಗಳದಲಿ ಪ್ರೀತಿಯ ಚುಕ್ಕಿಯಿಟ್ಟು 
ಅರಿವಿಲ್ಲದೆ ಒಲವಿನಾ ಸುಂದರ ರಂಗೋಲಿಯ ಬರೆದೆ
ಮೌನದಲೇ ನಾ ಸೆರೆಯಾದೆ ನಿನ್ನಯಾ ಕಂಗಳ ಕರೆಗೆ 
ಹೃದಯದಿ ಪ್ರೀತಿಯ ತುಂಬಿ ಹರಿಸೋ ಪ್ರೇಮಿ ನಾನಾದೆ 

ನನ್ನೀ ಮನದಲ್ಲಿ ಅರ್ಥವಾಗದ ಹೊಸ ಭಾವನೆಯ ಬೆಳೆಸಿದೆ 
ಮುಗುಳನಕ್ಕೂ  ಸುಮ್ಮನಾದೆ ಅದರ ಅರ್ಥವಾ ಹೇಳದೇ  
ಹುಡುಕುತಾ ಹೊರಟಿತು ನನ್ನೀ ಮನವು ಭಾವದಾ  ಹಿಂದೆ 
ಸನಿಹದಿ ನೀ ಆವರಿಸಿ ಹರಿಸಿದೆ  ಅಮೃತ ಸುಧೆಯಾ 

ಕದಿಯಬೇಡ ಗೆಳತಿ ನೀ ನನ್ನ  ಇರುಳ ನಿದಿರೆಯ
ಮರೆಯಾಗಿ ಕಾಡದಿರು ನೀ ಮತ್ತೆ ಮತ್ತೆ ನೆನಪಾಗಿ
ಬಾ ನನ್ನೊಲವೇ ಸನಿಹಕೆ ಈ ನೆನಪ ಕರಗಿಸಿ    
ನಡೆಯಲಾರೆ ಏಕಾಂಗಿಯಾಗಿ ಈ ಬಾಳ ಪಯಣದಲಿ ...!!