Monday, February 18, 2013

!!.... ನೆನಪು ...!!



ಮರೆವೆನೆಂದರೆ ಹಾಗೇ ಮರೆಯಲಾದೀತೆ ಈ ಮನಕೆ
ಆ ಸುಂದರ ಸವಿ ಕ್ಷಣಗಳ ಮನದೊಳಗಿನ ನೆನಪುಗಳ
ಸುಮ್ಮನೆ ಬಂದು  ಕಾಡುವವು ಒಂಟಿಯಾದ ಜೀವಕೆ
ಭಾವನೆಗಳ ಮೋಹದಾ ಬಣ್ಣ ಬಣ್ಣದ ಕನಸುಗಳು
ನಿಂತಲ್ಲೇ ನಿಲುತಿಲ್ಲಾ ಎಲ್ಲೆಲ್ಲೋ ಓಡುತಿದೆ ಮೆಲ್ಲನೆ
ನನ್ನಾ  ಮನದಾಳದ ಹಸಿ ಬಿಸಿ ಬಯಕೆಗಳು
ಹೇಳು ನೀ ಒಲವೇ  ಏನಾಯ್ತು ನಂಗೆ ಯಾಕಾಯ್ತು ಹಿಂಗೇ .....!!!



Monday, February 11, 2013

!!... ನನ್ನೊಳಗಿನ ಭಾವ ...!!


ಮನದಲ್ಲಿ ಮೂಡುವುದು ನೂರಾರು ಹೊಸ ಭಾವಗಳು
ಅರಿವಿಲ್ಲದೆ ಬದಲಾಗುವ ನನ್ನೊಳಗಿನ  ತುಮಲಗಳು
ಹೆಜ್ಜೆ ಹೆಜ್ಜೆಗೂ ಮನದಿ ಮೂಡುವವು ಹತ್ತಾರು ಕಲ್ಪನೆಗಳು
ಇಬ್ಬನಿಯ ಹನಿಯಂತೆ ಜಾರುವ ಮನದ ಮಾತುಗಳು
ಅರಿಯದಾದೆ ನಾನಿಂದು ಯಾಕೆ ಹೀಗಾಯ್ತು ನನ್ನೊಳಗಿನ ಭಾವಕೆ ....!!!


Wednesday, February 6, 2013

!! ...ಅಮ್ಮಾ .. ♥

ಮಾತಿನಲ್ಲಿ ಹೇಳಲಾಗದ ಅರ್ಥಯಿಸಿ ವಿವರಿಸಲಾಗದ 
ಭಾಂದವ್ಯದ, ಸಹನೆಯ ಪವಿತ್ರ ಭಂದ ನೀನು ,
ನಿನ್ನಯ ಓಲುಮೆಯ ಭಾವಪೂರ್ಣ ಕರೆಯೋಲೆಗೆ 
ಕರಗದ ಮನವೆಲ್ಲಿದೇ ಈ ಸುಂದರ ಜಗದಲಿ.

ನಿನ್ನಯ ಮಮಕಾರದ ಸೆಳೆತಕೆ ಚಿಗುರುವುದು
ಬತ್ತಿದಾ ಭಾಂದವ್ಯದ ಅನುರಾಗದ ಚಿಲುಮೆ
ಹೇಳಲು ಬರುತಿಲ್ಲಾ ಮೂಕಾಗಿದೆ ನಿನ್ನೊಲವ ಸದ್ದಲ್ಲಿ ,
ಏನೆಂದು ಬರೆಯಲಿ ನಾ ಪದಗಳಲಿ ಅಮ್ಮಾ
ಜೀವಕೆ ಜೀವ ಬೆಸೆದ ವಾತ್ಸಲ್ಯದ ಪ್ರತಿರೂಪವೇ ನೀನಿರುವಾಗ... ♥ !!