Friday, January 23, 2015

!!....ನಾನಿರುವೆ ನಿನ್ನೊಳಗೆ....!!

ಬರೆಯಲೇ ನಾ ಕವಿತೆ
ಪ್ರೀತಿಯ ಶಾಹಿಯಲಿ
ಬರಿದಾದ ಮನಕೆ
ಒಲವಿನ ಮಳೆ ಸುರಿಯಲೇ

ಮನದಲಿ ಅಡಗಿಹ
ನೆನಪುಗಳ ಬುತ್ತಿಯನು
ಬಿಚ್ಚಿಟ್ಟು ಕರೆಯಲೇ
ಕನಸಿನರಮನೆಯೊಳಗೆ

ಹೇಳು ಗೆಳತಿ ಹೇಗೆ
ಕರೆಯಲಿ ನಿನ್ನಾ
ಎನ್ನ ಮನದಂಗಳಕೆ
ಕಂಬನಿಯ ಒರೆಸಿ
ಪ್ರೀತಿಯ ಹನಿ ಸುರಿಸಲು

ಹೃದಯವು ಹೆಜ್ಜೆ ಹಾಕುತಿದೆ
ನಿನ್ನ ಪ್ರಿತಿಯರಮನೆಗೆ
ಒಮ್ಮೆ ಇಣುಕಿ ನೋಡು
ನಾನಿರುವೆ ನಿನ್ನೊಳಗೆ
ನಾನಿರುವೆ ನಿನ್ನ ಮನದೊಳಗೆ ...!!


Wednesday, January 21, 2015

ನೆನಪು

ಮರೆವೇನೆಂದರೆ ಮರೆಯಲಾದೀತೆ
 ಹೃದಯದ ಪಿಸುಮಾತಿನ
ನಸುನಗೆಯ ನೋಟವನು ,
ನೆನೆದಾಗ ಬರುವವು
ಮನದ ಮುಗಿಲೋಳಗಿಂದ
ನಿನ್ನ ಪ್ರೀತಿಯ ಮಳೆ ಹನಿಗಳು ...