Saturday, December 31, 2011

ಮಾಯದಾ ಪ್ರೀತಿ


ಮೌನ ಮೌನಗಳ ನಡುವೆ ಮನಸಿನ ಮಾತು ಮರೆಯಾಯ್ತು ,
ಕಣ್ಣು ಕಣ್ಣುಗಳ ನಡುವೆ ಪ್ರೀತಿಯ ಹೃದಯಗಳ ಮಿಲನವಾಯ್ತು ,
ಭಾವ ಭಾವನೆಗಳ ಈ ಅಪರೂಪದ ಸಂಮಿಲನವಾಯಿತು ,
ಎಲ್ಲೋ ನನ್ನೀ ಸುಪ್ತ ಮನಸ್ಸಿನಲ್ಲಿ ನಿನ್ನಯ ಹೆಜ್ಜೆ ಗುರುತು ಮೂಡಿದೆ ,
ಕೇಳುತಿದೆ ಓ ಗೆಳತಿ ಇದೇನಾ ಕಣ್ಣಿಗೆ ಕಾಣದ ಮಾಯದಾ ಪ್ರೀತಿ ಎಂದು ......!!!!

Sunday, December 25, 2011

ಮನದರಸಿ...

ನೀ ಕೆಸರಿನಲ್ಲಿ ಅರಳಿದ ಕಮಲದಂತೆ ಪರಿಶುದ್ಧ ಸುಂದರ ಹೂವಾದೆ ,
ಮುಂಜಾನೆಯ ದಟ್ಟ ಮಂಜಿನಾ ನಡುವೆ ಹೊರಬಂದ ಬೆಳಕಿನ ಕಿರಣ ನೀನಾದೆ ,
ಎಲೆಯ ಮೇಲಿನ ಹೊಳೆವ ಚೆಲುವಿನ ಮುಗ್ದ ಇಬ್ಬನಿಯ ಮುತ್ತಿನ ಹನಿಯಾದೆ ,
ಪೌರ್ಣಿಮೆಯ ಬೆಳದಿಂಗಳ ರಾತ್ರಿಯಲಿ ಬೀಸುವ ತಂಗಾಳಿಯ ಪ್ರತಿರೂಪವಾದೆ ,
ಕೇಳುತಿದೆ ಓ ಗೆಳತಿ ಈ ಮನವಿಂದು ಆಗುವೆಯಾ ನನ್ನ ಮನದರಸಿ ಎಂದು.....

Wednesday, December 21, 2011

ಪ್ರೀತಿಯಾ ಹೆಜ್ಜೆ..

ಮರೆತು ಮರೆಯದಿರು ನೀ ಮರೆಯಲಾರದ ಈ ಅನುಭಂದವ ,
ಹಳೆಯ ಆ ಸವಿ ನೆನಪುಗಳ ಆಗಾಗ ನೆನಪಿಸಿಕೋ ನಿನ್ನ ಮನದಲ್ಲಿ ,
ಮನದಾಳದ ಭಾವನೆಯ ಅಲೆಗಳ ನಡುವೆ ಹಾಗೆಯೇ ತೇಲಿ ಬಿಡಬೇಡ ,
ಹೇಳುತಿದೆ ನನ್ನೀ ಮನಸು ಬರುವೆ ನಿನ್ನ ಸ್ಮ್ರತಿಯಲ್ಲಿ ನಾ ಒಂದು ಕ್ಷಣ ಎಂದು ,
ಹೃದಯದಲಿ ಇನ್ನು ಅಚ್ಚಳಿಯದೆ ಇದೆ ನಿನ್ನಯ ಪ್ರೀತಿಯಾ ಹೆಜ್ಜೆ ....

Monday, December 19, 2011

ಯಾಕೆ ನೀ ಹೀಗೆ

ಯಾಕೆ ನೀ ಹೀಗೆ ಮೌನವಾಗಿ ಕಣ್ಣಿಗೆ ಕಾಣದೆ ಕರಗಿಹೋದೆ ,
ಕಿವಿಎರಡು ಹಾತೊರೆಯುತಿವೆ ನಿನ್ನಯಾ ಪಿಸುದನಿಯ ಆಲಿಸಲು ,
ಮನ ಮೂಕವಾಗಿ ಕಂಬನಿಯು ಮಿಡಿಯುತಿದೆ ನಿನ್ನದೇ ನೆನಪಿನಲ್ಲಿ ,
ಒಂದು ಕ್ಷಣವಾದರೂ ಕೇಳಿಸದೆ ನನ್ನೀ ಮನಸ್ಸಿನ ಒಲವಿನ ಕರೆಯು ,
ಹೃದಯದ ಬಡಿತ ಹೇಳುತಿದೆ ಮತ್ತೆ ನೀ ಬರುವೆ ನನಗಾಗಿ ಎಂದು ,
ಅರಿಯದಾದೆಯ ಗೆಳತಿ ಭಾವದಾ ತುಡಿತ ಮೋಹದಾ ಮಿಡಿತ ಪ್ರೀತಿಯಾ ಸೆಳೆತ ನೀ.....

Saturday, December 17, 2011

ಕಣ್ಣಂಚಿನ ಕುಡಿನೋಟ

ನಿನ್ನಯ ಕಣ್ಣಂಚಿನ ಕುಡಿನೋಟ ನನ್ನನ್ನು ಸೆಳೆಯುತಿದೆ ,
ಮನದ ಮೋಹದಾ ಮಿಡಿತ ಬಾ ಎಂದು ಕರೆಯುತಿದೆ ,
ನನ್ನಯಾ ಮನದ ಮನೆಯಲಿ ಕೊರೆದೆ ನಿನ್ನಯ ಬಿಂಬ ,
ನೋಡಿಯೂ ನೋಡದೆ ಏನೋ ಮೋಡಿಯ ಮಾಡಿದೆ ,
ಕಳುಹಿಸೆಯ ಅಪೂರ್ವದ ಪ್ರೀತಿಯಾ ಮಿಲನದ ಕರೆಯೋಲೆ ,
ಕಾದಿದೆ ನನ್ನಿಮನ ಓ ಗೆಳತಿ ನಿನಗಾಗಿ ನಿನ್ನಯ ಪ್ರೀತಿಗಾಗಿ ......!!!

Friday, December 16, 2011

ಅಮ್ಮ ..


ಮನದ ಮೌನ ಕರಗಿತು ನಿನ್ನಯಾ ಪ್ರೀತಿ ಸೆಲೆಗೆ ,
ಭಾವನೆಗಳು ಗರಿಗೆದರಿ ಅರಳಿದವು ಆ ನಿನ್ನ ಮಮತೆಗೆ ,
ಇರುವುದೇ ಪ್ರೀತಿ ಮಮತೆಗೆ ವಾತ್ಸಲ್ಯಕೆ ಬೇರೊಂದು ಹೆಸರು ,
ಇಲ್ಲಾ ಎನ್ನುತಿದೆ ಈ ನನ್ನ ಮನವು ನಿನ್ನೋಬ್ಬಳ ಹೊರತು ,
ಇವೆಲ್ಲದಕು ಒಂದೇ ಒಂದು ಹೆಸರು ಅದುವೇ ನಿನಮ್ಮಾ .....

Tuesday, December 13, 2011

ನೆನಪಿನಂಗಳ

ಮನದಾಳದ ನೆನಪಿನಂಗಳದಲ್ಲಿ ಸವಿ ನೆನಪೊಂದು ಕಾಡುತಿದೆ ,
ಭಾವ ಭಾವನೆಗಳ ನಡುವೆ ಸಿಕ್ಕಿ ಹೊರಲಾಡುತಿದೆ ,
ತುಟಿಯಂಚು ಕಾತರಿಸುತಿದೆ ಹೇಳಲು ಮನದಾಳದ ಮಾತನ್ನು ,
ಏಕೋ ಏನೋ ಕರಗಿದೆ ಪಿಸು ಮಾತು ಮೌನದಾ ಮರೆಯಲ್ಲಿ ,
ಹೇಗೆ ಹೇಳಲಿ ಗೆಳತಿ ನನ್ನಂತರಾಳದ ಬಾವನೆಯ ನಿನಗೆ ......

Saturday, December 10, 2011

ಬೆಳದಿಂಗಳ ರಾತ್ರಿ

ಸುಂದರ ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲಿ , ಬೀಸುತಿಹುದು ತಂಪಾದ ತಂಗಾಳಿಯು ಎಡೆಬಿಡದೆ , ಕನಸುಗಳ ಮೋಡದ ಮರೆಯಿಂದ ಬರುವೆಯಾ ನನ್ನ ಮನದೊಳಗೆ , ಭಾವನೆಗಳ ಗರಿಗೆದರಿ ಹಾರುವ ರಭಸದಿಂದ ಆಗಸದೆಡೆಗೆ , ಸ್ವಪ್ನ ಸಾಗರವ ದಾಟಿ ಮುನ್ನುಗ್ಗುವ ನಿಜ ಜೀವನ ಸುಂದರ ತಾಣಕೆ ...

ಸಂಗಾತಿ

ಹೃದಯವೆಂಬ ತೋಟದಲ್ಲಿ ನಲಿವ ಹೂವಾಗಿ ಅರಳಿದೆ ನೀ ,
ಮೋಡವಾದ ಮನಸ್ಸನು ಕರಗಿಸಿ ಪ್ರೀತಿಯ ತುಂತುರು ಹನಿಯಾದೆ ,
ಹನಿಯಾಗಿರುವ ನನ್ನನ್ನು ಅಮೂಲ್ಯ ಮುತ್ತ್ತಾಗಿಸಿದೆ.. ,
ಆ ದೇವರು ಸೃಷ್ಟಿಸಿದ ದೇಹ ನಾನಾದರೆ ಅದರ ಜೀವ ನೀನಾದೆ ,
ನಲಿವ ಹೊವಾಗಿ ಬಂದ ನನಗೆ ಜೀವ ಕೊಟ್ಟ ಸಂಗಾತಿ ನೀನಾದೆ ಗೆಳತಿ ,
ನಾ ಹೇಗೆ ಮರೆಯಲ್ಲಿ ನಿನ್ನ ಕೊನೆಯುಸಿರು ಇರುವವರೆಗೂ ......!!!

Wednesday, December 7, 2011

ನೆನಪು


ಮನಸ್ಸು ಭಾರವಾದಾಗ ಮೌನ ನಲಿದಾಡುವುದು. ,
ಸಂಭಂದ ದೂರವಾದಾಗ ನೆನಪು ಮರೆಯಾಗುವುದು ,
ಭಾವನಾ ಲೋಕದಲ್ಲಿ ಕನಸುಗಳು ಹರಿದಾಡುವವು ,
ಈ ಭಾವನೆಗಳು ಹರಿವ ನದಿಯಂತೆ ಕೊನೆ ಇಲ್ಲದ ಪಯಣ ,
ಜೀವನದ ಕೊನೆಯಲ್ಲಿ ಉಳಿಯುವುದು ಈ ಹೃದಯ ತಂದಿಟ್ಟ ನೆನಪು ಮಾತ್ರ..

ಪ್ರೀತಿ


ನೀ ಆಗಸದಲ್ಲಿ ಮಿನುಗುವ ತಾರೆಯಗದಿದ್ದರು ಬಾಳಿನ ನಂದಾದೀಪವಾಗು ,
ದಿನವೆಲ್ಲಾ ಅರಳಿ ಕಂಪ ಸೂಸುವ ಮಲ್ಲಿಗೆಯಾಗದಿದ್ದರು ಇಬ್ಬನಿ ಹನಿಯಾಗು ,
ಸಾಗರದ ಆಳದಲ್ಲಿ ಅಡಗಿದ ಮುತ್ತಲ್ಲದಿದ್ದರು ಪ್ರೀತಿಯ ಸೆಲೆಯಾಗು ,
ಪರಿಪರಿಯಾಗಿ ಪ್ರೀತಿಸು ನೀ ನೋಯಿಸಿದ ಹೃದಯವನ್ನು ಯಾಕೆಂದರೆ ,
ಹೃದಯ ಅರಳಿದ ಕುಸುಮದಂತೆ ಒಮ್ಮೆ ಬಾಡಿದರೆ ಅರಳದು ಮತ್ತೊಮ್ಮೆ.... :)

Tuesday, December 6, 2011

ನಿನ್ನಯ ನೆನಪು

ನನ್ನ ಮನದಲ್ಲಿ ಎಡಬಿಡದೆ ಕಾಡುತಿದೆ ನಿನ್ನಯ ನೆನಪು ,
ನಿನ್ನಯ ನೆನಪಾಗುತಲೇ ಕಣ್ಣಂಚಲಿ ಕನಸೊಂದು ಮೂಡಿದೆ .. ,
ಕಾತರಿಸುತಿದೆ ನನ್ನಯ ಮನವಿಂದು ಕನಸು ನನಸಾಗಲೆಂದು ,
ನನಸಾಗದೆ ಆ ನನ್ನಯ ಸವಿಯಾದ ಕನಸು ಇಂದು ...

Monday, December 5, 2011

ಸವಿ ಹೃದಯ

ನನ್ನಯಾ ಪ್ರೀತಿಯ ಸವಿ ಹೃದಯದಲ್ಲಿ ಮುಗುಳ್ನಗೆಯ ಹೊತ್ತು ನೀ ಬಂದೆ ,
ನಿನ್ನಯ ಪ್ರೀತಿಯ ಬೀಜವನ್ನು ನನ್ನ ಮನದಲ್ಲಿ ಬಿತ್ತಿ ಅರ್ಥವಾಗದ ನಗುವ ನೀ ಬಿಟ್ಟು ಹೋದೆ ,
ಹೇಳದೇ ಹೋದೆ ನಗುವಿನ ಅರ್ಥವ,ಮನದಲ್ಲಿ ಬಿತ್ತಿದೆ ಪ್ರೀತಿಯ ಬೀಜದ ಕಾರಣವ ,
ಹುಡುಕುತ ನಾ ನಡೆದೇ ಆ ನಗುವಿನ ಅರ್ಥವ,ನಿನ್ನ ಪ್ರೀತಿಯ ಮೂಲವ.. ,
ನಾ ಮೆಚ್ಚಿದ ಮೊದಲ ಪ್ರೇಯಸಿ ನೀನು.ಪ್ರೀತಿಯ ಪ್ರತಿರೂಪ ನೀನು .. ,
ಕಾಯುತಿದೆ ಓ ಗೆಳತಿ ನಿನಗಾಗಿ ಈ ಜೀವ ಮತ್ತೆ ನೀ ಬರುವೆ ನಗುವ ಅರ್ಥ ಹೇಳಲೆಂದು ..

ಹುಡುಕಾಟ


ನೆನಪಿನ ದೋಣಿಯಲಿ ಕೈ ಜಾರಿದ ಕನಸುಗಳು....,
ಸಾಗರದ ಗರ್ಭದಲಿ ಅವಿತಿರುವ ಮುತ್ತುಗಳು .. ,
ಎಲ್ಲೆಲ್ಲೋ ಮರೆಯಾಗುವ ನಿನ್ನುಸಿರು.. ,
ಎಡೆಬಿಡದೆ ಕಾಡುವ ನನ್ನುಸಿರು.. ,
ಅತ್ತು ಮರೆಯಾಯಿತೇ ಓ ಗೆಳತಿ ನಿನ್ನಯ ಹುಡುಕಾಟದಲ್ಲಿ ......

Sunday, December 4, 2011

ಹೇಳು ಗೆಳತಿ..

ನಿನ್ನ ಮುಗುಳ್ನಗೆಯ ವದನದಲ್ಲಿ ಹೂವ ಕಾಂತಿ ತುಂಬಿದೆ ,
ನಿನ್ನ ನಯನದ ಒರೆ ನೋಟದಲ್ಲಿ ನನ್ನ ಜೀವ ಹುದುಗಿದೆ ,
ನಿನ್ನ ಮಮತೆಯ ಹೃದಯದಲ್ಲಿ ನನ್ನ ಪ್ರೀತಿ ಮಲಗಿದೆ ,
ನನ್ನ ಮನಸ್ಸಿನ ಹುಚ್ಚು ಹೊಯ್ದಾಟದಲ್ಲಿ ಅಲೆಯಂತೆ ಮರಳಿ ಮರಳಿ ಬರುವೆ ನೀ ,
ಹೇಳು ಗೆಳತಿ ಇರುವುದೇ ನನ್ನೀ ಜೀವ ಎಂದಾದರೂ ಮರೆತು ನಿನ್ನಾ......!!

Saturday, December 3, 2011

ಮೌನ

ಮೌನವಾಗಿ ಕೊಲ್ಲದಿರು ನನ್ನ ನೀ ಹೀಗೆ ಎಂದೂ ,
ಕಾಯುತಿಹವು ನನ್ನೀ ಕಿವಿಗಳು ನಿನ್ನ ಪಿಸುದನಿಯನ್ನು ಕೇಳಲು ,
ಅರಿಯದೆ ಆ ನಿನ್ನ ಮನ ನನ್ನೀ ಮನದಾಳದ ನೋವನ್ನು ,
ಆದರೂ ಹೇಳುತಿದೆ ನನ್ನೀ ಸುಪ್ತ ಮನ ನಿ ಮತ್ತೆ ಬರುವೆ ನನ್ನ ಬಳಿಗೆ ಎಂದೂ ,
ಇಂದು ನಾ ಅರಿತೆ ಗೆಳತಿ ಕಾಯುವುದರಲ್ಲೂ ಏನೋ ಸುಖವಿದೆ ಎಂದೂ..