Sunday, May 27, 2012

ನನ್ನಂತರಂಗದ ಮಾತು...



ಎನ್ನಯಾ ಮುಗ್ದ  ಮನವಿಂದು ತೇಲುತಿದೆ 
ನಿನ್ನಾ ಅನುರಾಗದ ಪ್ರೀತಿಯಾ ಅಲೆಗಳ ಮೇಲೆ 
 ಆ  ನಿನ್ನಯ ತುಟಿಯಂಚಿನಲಿ ಮೂಡಿದ
ಮೋಹದಾ ಮುಗುಳ್ನಗೆಯು ಕೊಲ್ಲುತಿದೆ ಎನ್ನಾ  

ಹೇಳಲು ತವಕಿಸುತಿದೆ ಭಾರವಾದ  ಹೃದಯ
ತನ್ನಲ್ಲಿ  ಹಾಗೆ  ಬಚ್ಚಿಟ್ಟ ಮನದಾಳದ ಒಲವಾ 
ಯಾಕೋ ಏನೋ ತಡೆಯುತಿದೆ  ಭಾವನೆಗಳನು
 ಈ ಕಣ್ಣಂಚಲಿ ಅರಿಯದೆ ಮೂಡಿದ ನಸುನಾಚಿಕೆಯು 

ಇನ್ನು ಅರ್ಥವಾಗದೇ ನನ್ನಂತರಂಗದ ಮಾತು ನಿನಗೆ 
 ಹೇಳು  ಓ ನನ್ನ  ಗೆಳತಿ ಏಕೆ ನೀ ಹೀಗೆ  ಮೌನಿಯಾದೆ....!!!!



Saturday, May 5, 2012

ಹೊಸ ಪರಿಭಾಷ್ಯವ ಗೀಚಿದವಳು ....


ನನ್ನ ಜೀವನದ  ಕಣ್ಣಾಗಿ ಬಾ ಗೆಳತಿ ರೆಪ್ಪೆಯಂತೆ ಸದಾ ಕಾಯುವೆ ನಾ
ಒಲವಾಗು ನೀ ಈ ಜೀವದಾ ಜೀವಕೆ ಉಸಿರಾಗಿ  ಜೊತೆಯಲ್ಲಿ ಬರುವೆ 
ಹೃದಯದ ಗೂಡಲ್ಲಿ ನೀ ಬಿತ್ತಿದಾ ಪ್ರೀತಿಗೆ ತಂಪಾದ ನೀರಾಗಿ ನಾನಿರುವೆ 
ಇಂದು ನಯನಗಳು ಹೇಳುತಿವೆ ಎಸ್ಟೋ ಹೇಳಲಾಗದ ಮನದ  ಮಾತುಗಳ  
ನಿನಲ್ಲವೇ ಗೆಳತಿ ನನ್ನ ಒಲವಿನ ಭಾಷೆಗೆ ಹೊಸ ಪರಿಭಾಷ್ಯವ ಗೀಚಿದವಳು ......


Thursday, May 3, 2012

ಹೃದಯ ವೀಣೆ ಮೀಡಿಯುವುದು........



ಹೆಜ್ಜೆ ಹೆಜ್ಜೆಗೂ ನಯನಗಳು ಕಾತರದಿ  ಹುಡುಕುತಿವೆ ಎಲ್ಲಿರುವೆ ನೀನೆಂದು 
ಹೃದಯ ವೀಣೆ ಮೀಡಿಯುವುದು  ನಿನ್ನಯಾ ನೆನಪುಗಳು ಹರಿದಾಡಿದಾಗ
ನೀನಿಲ್ಲದೆ ಮಧುರ  ಮಾತುಗಳು ಹುದುಗಿ ಮಲಗಿಹುದು ಮೌನದಾ ತೆಕ್ಕೆಯೊಳು  
ಭಾವಸಾಗರದಲಿ  ಬಿಸಿಯುಸಿರು  ಪಿಸುದನಿಯಲಿ ಕರೆವುದು ನಿನ್ನಯ ಹೆಸರಾ
ಕಾಡಬೇಡ ಗೆಳತಿ ಬಂದೊಮ್ಮೆ ಮರೆಸಿಬಿಡು ಚಿಂತೆಯಾ ನಿನ್ನಾಪ್ರೀತಿಸಾಗರದಲೆಗಳ ನಡುವೆ ....