Tuesday, August 28, 2012

!!! ಕಣ್ಣಂಚಿನ ಹನಿ ಜಾರುವ ಮುನ್ನ !!!



ಏಕೆ ನೀ ಹೀಗೆ ಮೌನವಾಗಿ ಕರಗಿ ಹೋದೆ 
ನನ್ನೀ ಮನದ ದುಗುಡ ಅರಿತು ದೂರಾದೆಯಾ
ಅಂದು ಹೃದಯದಿ ಪ್ರೀತಿಯ ದೀಪ ಹಚ್ಚಿದೆ ನೀ 
ಇಂದು ಮನದ ನೆಮ್ಮದಿಯ ದೋಚಿದೆ ಏಕೆ 

ಹೇಗೆ ಕಳೆಯಲಿ ನಲ್ಲೆ ನೀನಿಲ್ಲದ ವೇಳೆ 
ಜಾತಕಪಕ್ಷಿಯಂತೆ ಕಾದಿಹೆ ನಾ ನಿನ್ನ ಅಗಮನಕಾಗಿ 
ಬೇಕಾಗಿದೆ ನೊಂದ ಮನಕಿಂದು ನಿನ್ನ ತೋಳ ಆಸರೆಯು 
ಬಾ ಗೆಳತಿ ಕಂಪ ಬೀರುವ  ಮನದ ಮಲ್ಲಿಗೆಯಾಗಿ 

ಭಾರವಾಗಿದೆ ನನ್ನೀ ಬಿಸಿಯುಸುರು 
ನಿನ್ನಯ ನೆನಪಿನ ಬೆಗುದಿಯಲಿ ಬೆಂದು 
ಪ್ರೀತಿಯಲಿ ಕುರುಡಾಗಿವೆ ನನ್ನೀ ನಯನಗಳು 
ಆದರು ನಾ ಕತ್ತಲಲಿ ಹುಡುಕುತಿಹೆ ನಿನ್ನ ಪ್ರೀತಿಯ ನೆರಳ 

ನೀನಿಲ್ಲದೆ ಈ  ಮನವಿಂದು ಬರಿದಾಗಿದೆ 
ಮೌನದಲ್ಲೂ ನನ್ನೀ ಪ್ರೀತಿ ಕೂಗಿ ಕರೆದಿದೆ 
ಪ್ರತಿ ಉಸಿರು ನೆನೆಯುತಿದೆ ನಿನ್ನನ್ನೇ 
ನೀನೇ ಬರಿ ನೀನೇ ಜೀವದಾ ಪ್ರತಿ ಹೆಜ್ಜೆ ನೀನೇ

ತಿರುಗಿ ಬಾ ಗೆಳತಿ ನನ್ನೀ ಬಾಳ ಪುಟದಲಿ 
ಹೇಳದೆ ಹುದಿಗಿಹ ಮಾತೊಂದಿದೆ ಭಾವದಲಿ 
ನನ್ನಲಿ ನಾನಿಲ್ಲ ನೀನೆ ಆವರಿಸಿಹೆ ನನ್ನೋಳಗೆಲ್ಲ 
ಹರಿಸು ನೀ ಒಲವ ಸುಧೆಯ ಕಣ್ಣಂಚಿನ ಹನಿ ಜಾರುವ ಮುನ್ನ ....



Wednesday, August 15, 2012

♥♥... ಪ್ರೀತಿಯ ಗೆಳತಿ ...♥♥


ಮನದ ಮರೆಯಲ್ಲಿ ಹುದುಗಿಹುದು 
ಬೆಟ್ಟದಷ್ಟು ಪ್ರೀತಿಯು ಗೆಳತಿ 
ಪದಗಳೇ ಬರುತ್ತಿಲ್ಲ ತುಟಿಯಂಚಲಿ 
ಹೇಗೆ ನಿವೆದಿಸಲಿ ನಾ ನಿನಗೆ ಅದನು 

ಆ ನಿನ್ನ ಕಣ್ಣಂಚಿನ ನಸು ನಾಚಿಕೆಯ ಕುಡಿನೋಟ
ಅರಿಯದೆ ಬಂದು ತಾಕಿದೆ ಎನ್ನೆದೆಯ ಪ್ರೀತಿಯ ಕದವ 
ಹುಚ್ಚೆದ್ದು ಕುಣಿಯುತಿವೆ ನೊರೆಂಟು ಮಧುರ ಭಾವಗಳು 
ಅರಿತು ನೀ ಯಾಕೆ ಹೀಗೆ ಮೌನವಾಗಿ ಕರಗಿ ಹೋದೆ  

ನೀನಿಲ್ಲದೆ ಮಾಸಿ ಹೋಗಿದೆ ನನ್ನಯಾ ಮನವು
ಬಂದು ನೀ ಒಲವಿನ ಬಣ್ಣ ಬಳಿಯುವೇಯಾ
ಖಾಲಿ ಖಾಲಿ ಬಿಳಿ ಹಾಳೆಯಂತಿದೆ ನನ್ನೀ ಜೀವನ 
ಪ್ರೀತಿಯ ಪದ ಗೀಚಿ ಅದಕೊಂದು ಅರ್ಥ ನೀಡೆಯಾ

ಕಣ್ಣ ರೆಪ್ಪೆಯ ಮುಚ್ಚೇ ನಿನ್ನದೇ ಸವಿಗನಸು 
ಕಣ್ತೆರೆದು ನೋಡಿದರೆ  ನಿನ್ನದೇ ಛಾಯೆ
ಕನಸಲ್ಲೂ ಮನಸಲ್ಲೂ  ಎಲ್ಲೆಲ್ಲೂ  ನೀನೇ
ಹೇಗೆ ಮರೆಯಲಿ ಗೆಳತಿ ನಿನ್ನಯಾ  ಪ್ರೀತಿ ...!!!!



Thursday, August 9, 2012

♥♥ ಹೇಗೆ ನಾ ಮರೆಯಲಿ ಗೆಳತಿ ♥♥



ಏಕೋ ನಾ ಅರಿಯೆ  ಗೆಳತಿ 
ಕಣ್ಣಲ್ಲಿ ಮೂಡಿದೆ ನಿನ್ನದೇ ಬಿಂಬ 
ಸುಳಿಯುತಿದೆ ನಿನ್ನದೇ ಹೆಸರು
ನಸುನಾಚುತ ತುಟಿಯಂಚಿನಲಿ 

ಮನದಲ್ಲಿ ಹಾಗೆ ಅಚ್ಚಳಿಯದೆ ನಿಂತಿದೆ 
ಅಂದು ನಿನಾಡಿದ ಸವಿ ಮಾತುಗಳು 
ಉಸಿರಿಲ್ಲ ನನ್ನಲ್ಲಿ ಇಂದು  ಬದಲಾಗಿ 
ನೀ ಆವರಿಸಿಹೆ ಕಣ ಕಣದಲ್ಲೂ  

ಪ್ರೀತಿಯು ಅರಳಿದೆ ಈ ಪುಟ್ಟ  ಹೃದಯದಲಿ   
ಜೀವದಾ ಜೀವ ಸೇರಿದೆ ನಿನ್ನಯಾ ಎದೆ ಬಡಿತದಲಿ
ಹುಚ್ಚು ಮನವಿಂದು ಬಯಸುತಿದೆ ಒಲವಿನ ಆಸರೆಯ 
ಕಾಣದಾಗಿದೆ ಬೇರೇನೂ ನಿನ್ನ ಪ್ರೀತಿಯ ಹೊರತು 

ಮಾತಾಡೋ ಸಮಯದಲಿ ಮೌನಿ ನಾನಾದೆ
ಪ್ರೀತಿ ಮನದಲ್ಲಿ ಅರಳಿದಾಗ ಹೇಳಲು ನಸುನಾಚಿದೆ
ಸನಿಹ ನೀ ಬಂದಾಗ ನನ್ನಲ್ಲೇ ನಾ ಕಳೆದು ಹೋದೆ 
ಹೇಗೆ ನಾ ಮರೆಯಲಿ ಗೆಳತಿ ನನ್ನುಸಿರೇ ನಿನಾಗಿರಲು....!!!