ಮನದ ಮರೆಯಲ್ಲಿ ಹುದುಗಿಹುದು
ಬೆಟ್ಟದಷ್ಟು ಪ್ರೀತಿಯು ಗೆಳತಿ
ಪದಗಳೇ ಬರುತ್ತಿಲ್ಲ ತುಟಿಯಂಚಲಿ
ಹೇಗೆ ನಿವೆದಿಸಲಿ ನಾ ನಿನಗೆ ಅದನು
ಆ ನಿನ್ನ ಕಣ್ಣಂಚಿನ ನಸು ನಾಚಿಕೆಯ ಕುಡಿನೋಟ
ಅರಿಯದೆ ಬಂದು ತಾಕಿದೆ ಎನ್ನೆದೆಯ ಪ್ರೀತಿಯ ಕದವ
ಹುಚ್ಚೆದ್ದು ಕುಣಿಯುತಿವೆ ನೊರೆಂಟು ಮಧುರ ಭಾವಗಳು
ಅರಿತು ನೀ ಯಾಕೆ ಹೀಗೆ ಮೌನವಾಗಿ ಕರಗಿ ಹೋದೆ
ನೀನಿಲ್ಲದೆ ಮಾಸಿ ಹೋಗಿದೆ ನನ್ನಯಾ ಮನವು
ಬಂದು ನೀ ಒಲವಿನ ಬಣ್ಣ ಬಳಿಯುವೇಯಾ
ಖಾಲಿ ಖಾಲಿ ಬಿಳಿ ಹಾಳೆಯಂತಿದೆ ನನ್ನೀ ಜೀವನ
ಪ್ರೀತಿಯ ಪದ ಗೀಚಿ ಅದಕೊಂದು ಅರ್ಥ ನೀಡೆಯಾ
ಕಣ್ಣ ರೆಪ್ಪೆಯ ಮುಚ್ಚೇ ನಿನ್ನದೇ ಸವಿಗನಸು
ಕಣ್ತೆರೆದು ನೋಡಿದರೆ ನಿನ್ನದೇ ಛಾಯೆ
ಕನಸಲ್ಲೂ ಮನಸಲ್ಲೂ ಎಲ್ಲೆಲ್ಲೂ ನೀನೇ
ಹೇಗೆ ಮರೆಯಲಿ ಗೆಳತಿ ನಿನ್ನಯಾ ಪ್ರೀತಿ ...!!!!
No comments:
Post a Comment