ನನ್ನೀ ಮನದ ದುಗುಡ ಅರಿತು ದೂರಾದೆಯಾ
ಅಂದು ಹೃದಯದಿ ಪ್ರೀತಿಯ ದೀಪ ಹಚ್ಚಿದೆ ನೀ
ಇಂದು ಮನದ ನೆಮ್ಮದಿಯ ದೋಚಿದೆ ಏಕೆ
ಹೇಗೆ ಕಳೆಯಲಿ ನಲ್ಲೆ ನೀನಿಲ್ಲದ ವೇಳೆ
ಜಾತಕಪಕ್ಷಿಯಂತೆ ಕಾದಿಹೆ ನಾ ನಿನ್ನ ಅಗಮನಕಾಗಿ
ಬೇಕಾಗಿದೆ ನೊಂದ ಮನಕಿಂದು ನಿನ್ನ ತೋಳ ಆಸರೆಯು
ಬಾ ಗೆಳತಿ ಕಂಪ ಬೀರುವ ಮನದ ಮಲ್ಲಿಗೆಯಾಗಿ
ಭಾರವಾಗಿದೆ ನನ್ನೀ ಬಿಸಿಯುಸುರು
ನಿನ್ನಯ ನೆನಪಿನ ಬೆಗುದಿಯಲಿ ಬೆಂದು
ಪ್ರೀತಿಯಲಿ ಕುರುಡಾಗಿವೆ ನನ್ನೀ ನಯನಗಳು
ಆದರು ನಾ ಕತ್ತಲಲಿ ಹುಡುಕುತಿಹೆ ನಿನ್ನ ಪ್ರೀತಿಯ ನೆರಳ
ನೀನಿಲ್ಲದೆ ಈ ಮನವಿಂದು ಬರಿದಾಗಿದೆ
ಮೌನದಲ್ಲೂ ನನ್ನೀ ಪ್ರೀತಿ ಕೂಗಿ ಕರೆದಿದೆ
ಪ್ರತಿ ಉಸಿರು ನೆನೆಯುತಿದೆ ನಿನ್ನನ್ನೇ
ನೀನೇ ಬರಿ ನೀನೇ ಜೀವದಾ ಪ್ರತಿ ಹೆಜ್ಜೆ ನೀನೇ
ತಿರುಗಿ ಬಾ ಗೆಳತಿ ನನ್ನೀ ಬಾಳ ಪುಟದಲಿ
ಹೇಳದೆ ಹುದಿಗಿಹ ಮಾತೊಂದಿದೆ ಭಾವದಲಿ
ನನ್ನಲಿ ನಾನಿಲ್ಲ ನೀನೆ ಆವರಿಸಿಹೆ ನನ್ನೋಳಗೆಲ್ಲ
ಹರಿಸು ನೀ ಒಲವ ಸುಧೆಯ ಕಣ್ಣಂಚಿನ ಹನಿ ಜಾರುವ ಮುನ್ನ ....
No comments:
Post a Comment