ಹೃದಯದ ಕನ್ನಡಿಯಲ್ಲಿ ಕಾಣುವೇ
ನಿನ್ನದೇ ಮೋಹಕ ಮೊಗವನ್ನಾ
ನಸುನಾಚಿಕೆಯ ಒರೆ ನೋಟವು
ಸೆಳೆದಿದೆ ನನ್ನೀ ತನುಮನವನ್ನಾ
ನಿನ್ನಯಾ ಮನದ ಮಧುರ ಮೌನ
ನಾಚಿಕೆಯಲಿ ರಂಗೇರಿದ ಹಾಲ್ಗೆನ್ನೇ
ತಂಗಾಳಿಗೆ ನಲಿದಾಡುವ ಮುಂಗುರುಳು
ತುಟಿಯಂಚಿನ ತುಂಟ ನಗೆ ಕಾಡಿವೆ ನನ್ನನ್ನು
ನಿನಗಾಗಿ ಕಾದು ಕೂತಿರುವೆ ಸಾಗರದ ತೀರದಲಿ
ರೆಪ್ಪೆ ಮುಚ್ಚದೇ ಇದಿರು ನೋಡುತಿವೆ ನನ್ನೀ ಕಂಗಳು
ಅಲೆಯೊಂದು ಮೆಲ್ಲನೆ ಹೇಳಿದೆ ಬರುವಿಕೆಯ ಭರವಸೆಯ
ನಸುಕಿನ ಹಿತವಾದ ತಂಗಾಳಿಯು ಹೊತ್ತು ತಂದಿದೆ
ನಿನ್ನಯಾ ಮೈ ಕಂಪನ್ನು ನನ್ನ ಭಾವದ ಒಡಲಿಗೆ
ಪ್ರೀತಿಯ ಕಂಪೇನು ಸುಳಿದಿಲ್ಲಾ ನನ್ನಲ್ಲಿ
ಆದರೂ ಮನದಲೆಲ್ಲಾ ನಿನ್ನದೇ ಸವಿಗನಸು
ಹೊಸದೊಂದು ಭಾವ ಮಿಟಿದೆ ಹೃದಯದಿ
ನನ್ನೊಳು ನಾನಿಲ್ಲಾ ಅವರಿಸಿಹೆ ನಿ ಎಲ್ಲಾ
ಹೇಳು ಬಾ ಒಲವೇ ನಾನ್ಯಾಕೆ ಹೀಗಾದೆ..!!