Saturday, March 23, 2013

!!..ಬಣ್ಣದ ಮೀನು..!!



ಸಾಗರದಾಳದಲಿ ಹುದುಗಿರುವಾ
ಮಿನುಗುವ ಸುಂದರ ಮೀನು ನೀನು,
ಕಪ್ಪೆಚಿಪ್ಪಿನಲಿ ಬಚ್ಚಿಟ್ಟು ನಿನ್ನನ್ನು
ಪ್ರೀತಿಯ ಸೋನೇ ಮಳೆ ಸುರಿಸುವಾಸೇ
ನನ್ನೀ ಪುಟ್ಟ ಹೃದಯದಲಿ,
ನನಸಾಗುವುದೇ ನನ್ನೀ ಕನಸು
ನೀ ಹೇಳೇ ಓಲವೇ .....

Tuesday, March 19, 2013

!!...ನೆನಪಿನಾ ಬಂಡಿ ...!!


ಪಯಣಿಸುತಿರುವೆ ನಾನಿಂದು ನೆನಪಿನಾ ಬಂಡಿಯಲಿ
ಬೀರು ಬಿಸಿಲು ಗಾಳಿ ಮಳೆಗಳ ಚಿಂತೆ ನನಗಿಲ್ಲಾ
ಸಾಗುತಿರುವೆ ಎತ್ತಲೋ ಗುರಿ ಇಲ್ಲದ ತೀರದೆಡೆಗೆ
ಭಾವ ಭಾವನೆಗಳ ಎಲ್ಲಿ ಮೀರಿ ಮನಸಿನಾ ಕನಸ ಬಚ್ಚಿಟ್ಟು
ಕಾಣದ ಭರವಸೆಯ ಬೆನ್ನು ಹತ್ತಿ ಮರೆತು ಮರೆಯದೆ
ನಿನ್ನದೇ ಸವಿನೆನಪುಗಳ ಬಾಳ ದಾರಿಯಲಿ .....


Wednesday, March 13, 2013

!!.. ಪ್ರೀತಿಯ ಕಂಪನ ..!!





ನಿನ್ನೆದುರು ನಾ ನಿಂತು ಕೈ ಬೀಸೀ ಕರೆದೇ
ಮೌನದಿ ಉತ್ತರಿಸದೇ ನೀ ತುಸು ದೂರ ನಡೆದೇ
ಹಾಗೇ ಮನದಲಿ ಕೊರಗಿ ನಾ ನೊಂದು ನಿಂತೇ
ಆದರೆ ದೂರದಿ ನೀ ನಿಂತು ಕಿರುನಗೆಯ ಬೀರಿದೆ,

ಮನದೆಲ್ಲೇಕೋ ಮೂಡಿತು ಮಂದಹಾಸದ ಎಳೆಯು
ಭಾವವು ನುಡಿಯಿತು ನಿನ್ನಾ ಕುಡಿನೋಟದ ಭಾಷೆಯ
ಸನಿಹ ಬಂದು ಉಲ್ಲಾಸದಿ ಬರಸೆಳೆದು ಬಿಗಿದಪ್ಪಲು
ತುಟಿಕಚ್ಚಿ ನಾಚಿ ನೀರಾಗಿ ನೀ ಕರಗಿ ಹೋದೆ ,

ಮನದಿ ಮಿಡಿಯುತಿದೆ ಅಂತರಾಳದ ಪ್ರೀತಿಯ ಸೆಳೆತ
ಮುಂಗುರುಳ ಸರಿಸಿ ಮನದನ್ನೆಯ ಚುಂಬಿಸುವಾಸೆ ನನ್ನಲ್ಲಿ
ನಿನ್ನಯಾ ಹಸಿಬಿಸಿಯುಸಿರ ಅಧರವು ಬಾಚಿ ತಬ್ಬಿದೆ ತುಟಿಯ
ಮಾತೆಲ್ಲ ಕರಗಿ ಮಾಯವಾಗಿದೆ ಮೌನದಾ ಪರದೆಯಲಿ ,

ಎನ್ನೆದೆಯ ಪ್ರತಿ ಮಿಡಿತದ ಅನುರಾಗದ ಚುಕ್ಕಿಯನಿಟ್ಟು
ಹೃದಯದಂಗಳದಿ ನೀ ಗೀಚಿದೆ ಒಲವಿನ ರಂಗೋಲಿಯ
ಮುತ್ತಿನಾ ಮಳೆಗರೆದು ಬಣ್ಣದ ಓಕುಳಿಯಿಟ್ಟೆ ಎದೆಯ ಚಿಪ್ಪಲ್ಲಿ
ನನ್ನೆದೆಯ ಭಾವ ತಂತಿ ಮೀಟಿ ಹೊಸರಾಗವ ನೀ ಹಾಡಿದೆ
ಏನೆಂದು ಹೇಳಲಿ ಗೆಳತೀ ನಾ ನನ್ನೀ ಮನದ ಕಂಪನವ....!!

Monday, March 11, 2013

.. ಭಾವ ..



ಮನಸಿನಾ ಅಂಗಳದಲಿ
ಕನಸಿನಾ ತೋರಣವ ಕಟ್ಟಿ
ಬೆಳದಿಂಗಳ ತಿಳಿ ರಾತ್ರಿಯಲಿ
ನೆನಪಿನಾ ಪಲ್ಲಕ್ಕಿಯನು ಏರುವಾಸೆ
ನನ್ನೀ ಅಂತರಂಗದ ಭಾವಕೆ ....!!!