Wednesday, March 13, 2013

!!.. ಪ್ರೀತಿಯ ಕಂಪನ ..!!





ನಿನ್ನೆದುರು ನಾ ನಿಂತು ಕೈ ಬೀಸೀ ಕರೆದೇ
ಮೌನದಿ ಉತ್ತರಿಸದೇ ನೀ ತುಸು ದೂರ ನಡೆದೇ
ಹಾಗೇ ಮನದಲಿ ಕೊರಗಿ ನಾ ನೊಂದು ನಿಂತೇ
ಆದರೆ ದೂರದಿ ನೀ ನಿಂತು ಕಿರುನಗೆಯ ಬೀರಿದೆ,

ಮನದೆಲ್ಲೇಕೋ ಮೂಡಿತು ಮಂದಹಾಸದ ಎಳೆಯು
ಭಾವವು ನುಡಿಯಿತು ನಿನ್ನಾ ಕುಡಿನೋಟದ ಭಾಷೆಯ
ಸನಿಹ ಬಂದು ಉಲ್ಲಾಸದಿ ಬರಸೆಳೆದು ಬಿಗಿದಪ್ಪಲು
ತುಟಿಕಚ್ಚಿ ನಾಚಿ ನೀರಾಗಿ ನೀ ಕರಗಿ ಹೋದೆ ,

ಮನದಿ ಮಿಡಿಯುತಿದೆ ಅಂತರಾಳದ ಪ್ರೀತಿಯ ಸೆಳೆತ
ಮುಂಗುರುಳ ಸರಿಸಿ ಮನದನ್ನೆಯ ಚುಂಬಿಸುವಾಸೆ ನನ್ನಲ್ಲಿ
ನಿನ್ನಯಾ ಹಸಿಬಿಸಿಯುಸಿರ ಅಧರವು ಬಾಚಿ ತಬ್ಬಿದೆ ತುಟಿಯ
ಮಾತೆಲ್ಲ ಕರಗಿ ಮಾಯವಾಗಿದೆ ಮೌನದಾ ಪರದೆಯಲಿ ,

ಎನ್ನೆದೆಯ ಪ್ರತಿ ಮಿಡಿತದ ಅನುರಾಗದ ಚುಕ್ಕಿಯನಿಟ್ಟು
ಹೃದಯದಂಗಳದಿ ನೀ ಗೀಚಿದೆ ಒಲವಿನ ರಂಗೋಲಿಯ
ಮುತ್ತಿನಾ ಮಳೆಗರೆದು ಬಣ್ಣದ ಓಕುಳಿಯಿಟ್ಟೆ ಎದೆಯ ಚಿಪ್ಪಲ್ಲಿ
ನನ್ನೆದೆಯ ಭಾವ ತಂತಿ ಮೀಟಿ ಹೊಸರಾಗವ ನೀ ಹಾಡಿದೆ
ಏನೆಂದು ಹೇಳಲಿ ಗೆಳತೀ ನಾ ನನ್ನೀ ಮನದ ಕಂಪನವ....!!

No comments:

Post a Comment