ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ತಿಳಿದೂ ತಿಳಿಯದೆ
ನೀ ಬಂದೆ ಬಾಳ ದೋಣಿಯಲಿ ಜೊತೆಯಾಗಿ ಇಂದು
ಮುದುಡಿದಾ ಮನದಲ್ಲಿ ನವಗನಸೊಂದ ತಂದು
ಭಾವ ಬಂಧನದ ಬೆಸುಗೆಯಾ ನೀ ಹೊಸೆದೆ.
ಮೆಲ್ಲನೇ ನನ್ನ ಬೆರಳಲಿ ನಿನ್ನ ಬೆರಳನಿಟ್ಟು
ಕಣ್ಣಂಚಲಿ ತುಸು ನಾಚಿ ಕಾಲಲಿ ರಂಗೋಲಿಯಾ ಗೀಚೀ
ತುಟಿಯಂಚಲೆ ಮನ ಸೆಳೆದು ಮೌನದಿ ನೀ ಬರೆದೆ
ಎನ್ನೆದೆಯ ಪುಟಗಳಲಿ ಹೊಸ ಬಾಳ ಮುನ್ನುಡಿಯ
ಹೃದಯದ ಪಿಸುಮಾತ ಮೆಲ್ಲಗೆ ಹೇಳುವಾಸೆ ನಿನ್ನಲ್ಲಿ
ಏಕೋ ಮಾತುಗಳು ಕರಗುವವು ಮಂಜಿನಾ ಹನಿಯಂತೆ
ಸನಿಹ ನೀನಿರಲು ನೊರೆಂಟು ಹೊಸ ಭಾವ ಮನದಲ್ಲಿ
ಭಾವ ನನ್ನದಾದರೂ ಅದರೊಳಗಿನ ಭಾವನೆ ನಿನ್ನದೇ
ನಿನಲ್ಲವೇ ಒಡತಿ ಜೊತೆಯಾಗಿ ಇರುವವಳು
ನನ್ನೀ ಬಾಳ ಕೊನೆಯ ಉಸಿರಲಿ ಉಸಿರಾಗಿ ...!!!
ಇಂತದೇ ಸಂತೃಪ್ತ ಕಾವ್ಯ ಅರವತ್ತನೇ ವರುಷದ ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲೂ ಮಾರ್ದನಿಸಲಿ. ಎನಂತೀರಿ....
ReplyDeletesuper.... Ishta aatu.. :)
ReplyDelete