Wednesday, May 22, 2013

!! ... ಸ್ನೇಹ ... !!





ನಾನಿಂದು ಬಂಧಿಯಾಗಿಹೆನು
ನಿನ್ನಯಾ ಸ್ನೇಹದ ಪಾಶದಲಿ
ನಮ್ಮೀ  ಮನಸುಗಳ ನಡುವಿಲ್ಲ
ಮೌನದಾ ಪರದೆಯ ಜಾಡು

ತಡೆಯಿಲ್ಲದೆ ಹರಿದಾಡುವುದು
ಪಿಸುಮಾತಿನ ಸಂದೇಶಗಳು
ಬಾಳ ಪಯಣದಲಿ ಸಾಗುವ
ಸ್ನೇಹದ ದೋಣಿಯನೇರಿ

ಸದ್ದಿಲದೆ ಮೌನದಿ ಶುರುವಾದ ಈ ಸ್ನೇಹ
ಕೈ ಜಾರಿ ಮರೆಯಾಗದಿರಲಿ ಎಂದೂ ..!!

1 comment:

  1. ನವಿರಾದ ಪ್ರೇಮ ಕವನ. ತುಂಬಾ ನೆಚ್ಚಿಗೆಯಾದದ್ದು ಹೆಣೆದ ರೀತಿ.

    ReplyDelete