ಮುಗುಳ್ನಗೆ ಬಿರುತಾ ಜೊತೆ ನೀನಿರಲು
ಬೇರೇನೂ ಬೇಡ ಗೆಳೆಯಾ ಈ ಜೀವಕೆ
ಮನವು ರೆಕ್ಕೆ ಬಿಚ್ಚಿ ಹಾರುವುದು ಸ್ವಚ್ಚಂದದಿ
ಮುಗಿಲ ಎಲ್ಲೆಯ ದಾಟಿ ಕಾಣದಾ ಲೋಕದೆಡೆಗೆ.!
ನಿನ್ನಯಾ ಸ್ನೇಹದಾಸರೆ ನನಗಿರಲು
ನನ್ನೀ ಸೋತ ಮನಸಿನ ಭಾವ ಭಾವಕೆ
ಚಿಲುಮೆಯಾ ಸ್ಪೂರ್ತಿ ನಿನಾಗುವೆ ಗೆಳೆಯಾ
ಬೀರು ಬೇಸಿಗೆಯಲಿ ಲತೆ ಚಿಗುರುವಂತೆ.!
ಮುಗ್ದ ಮನಗಳ ಮಧುರ ನಮ್ಮೀ ಈ ಸ್ನೇಹ
ಹಾಲಿನಂತೆ ತಿಳಿಯಾಗಿರಲಿ ಎಂದೆಂದಿಗೂ
ಅರಿತು ಅರಿಯದೆಯೇ ಗೀಚಿರುವೆ ಸ್ನೇಹ ಹಸ್ತಾಕ್ಷರವ
ನಿನ್ನಯ ಅಂತರಂಗದ ಭಾವನೆಯ ಪುಟಗಳಲಿ
ಅಳಿಯದೆ ಉಳಿವುದೆಂಬ ಭಾಂದವ್ಯದ ನಂಬಿಕೆಯಲಿ ....!!
"ಈ ಸ್ನೇಹ - ಹಾಲಿನಂತೆ ತಿಳಿಯಾಗಿರಲಿ ಎಂದೆಂದಿಗೂ" ಆಶಯ ತುಂಬಾ ಚೆನ್ನಾಗಿದೆ :)
ReplyDeleteಧನ್ಯವಾದಗಳು ಸರ್ ...:)
Delete