ಚಂದಿರನು ನಸುನಾಚಿ ಅಡಗಿಹನು ಬಾನಲ್ಲಿ
ತಾರೆಗಳು ಬೆರಗಾಗಿ ಮರುಗಿಹವು ಮನದಲ್ಲಿ
ಕಾರ್ಗತ್ತಲು ಓಡಿಹುದು ನಿನ್ನಯಾ ಕಾಂತಿಗೆ ಅಳುಕಿ ,
ತಾವರೆಯು ಮುಸಿನಗುತ ಮೆಲ್ಲಗೆ ಅರಳಿಹುದು
ನಿನ್ನಯಾ ತುಟಿಯಂಚಿನ ಮುಗಳ್ನಗೆಗೆ ಮನಸೋತು ..
ಏನೆಂದು ಹೊಗಳಲಿ ನಿನ್ನರೂಪ ರಾಶಿಯ ಗೆಳತಿ
ಪದಗಳೇ ಸಿಗುತ್ತಿಲ್ಲ ಮನದ ಬತ್ತಳಿಕೆಯಲಿ .....!!
ಪದಗಳೇ ಸಿಗುತ್ತಿಲ್ಲ ಮನದ ಬತ್ತಳಿಕೆಯಲಿ .....!! ಹೀಗಂದೇ ಸುಮಾರು ವರ್ಷ ಯಾಮಾರಿಸಿದ್ದೇ ಈಗ ಆಗಲ್ಲ ಗೆಳೆಯ ಮನೆಗೆ ಕನ್ನಡಿ ತಂದಿದ್ದೇನೆ!
ReplyDeletehttp://badari-poems.blogspot.in/