ಮನದಾಳದ ಮಧುರ ಪಿಸುಮಾತುಗಳನು
ವ್ಯಕ್ತಪಡಿಸಲು ಅಂಜಿ ಹೃದಯಲಿ ಬಚ್ಚಿಟ್ಟು
ಕಾದಿರುವೆ ಗೆಳತಿ ನಿನಗಾಗಿ ಬಹುದೊರದಿ ನಿಂತು !
ಮನದಲಿ ಹತ್ತಾರು ಹಸಿ ಬಿಸಿ ಭಯಕೆಗಳು
ಹೊಂಗನಸ ಕಾಣುತಿವೆ
ನಿನ್ನಯಾ ಒಲವಿನ ಮೃದು ಸ್ಪರ್ಶಕಾಗಿ !
ತುಸು ನಾಚಿಕೆಯಾ ಕಣ್ಣೋಟವ ಬಿರಿ
ಮಂದಹಾಸದಿ ತನುಮನವ ಅರಳಿಸಿ
ಪ್ರೀತಿಯ ಪಯಣದಿ ಮಿಡಿದ ಮಿಡಿತ ನೀನಾದೆ !
ನನ್ನೀ ಅಂತರಂಗದ ಭಾವನೆ ಅರಿತು
ಪ್ರೀತಿಯ ಸೋನೇ ಮಳೆ ಸುರಿದ
ಕನಸಿನಾ ಕಲ್ಪನೆಯ ಬಾಳ ಗೆಳತಿ ನೀ !
ಬಿಟ್ಟಿರುವೆ ಖಾಲಿ ಪುಟಗಳನು ಎನ್ನೆದೆಯಲಿ
ಬಂದು ಗೀಚಿ ಹೋಗು ನೀನೊಮ್ಮೆ
ನಿನ್ನದೇ ಪದಗಳನು ವಾತ್ಸಲ್ಯದ ಲೇಖನಿಯಲಿ....!!
"ಬಿಟ್ಟಿರುವೆ ಖಾಲಿ ಪುಟಗಳನು ಎನ್ನೆದೆಯಲಿ" ಎಂದು ಕೇಳಿದೊಡನೆಯೇ ಇದೋ ಬಂದೇ ಎಂದು ಓಡೋಡಿ ಬಂದಳು ಆಕೆ ಕೂಡಲೇ. ಒಳ್ಳೆಯ ಆಹ್ವಾನ ಕವನ.
ReplyDeleteತುಂಬಾ ಧನ್ಯವಾದಗಳು ಸರ್ ... ಹೀಗೇ ಸದಾ ಇರಲಿ ನಿಮ್ಮ ಪ್ರೋತ್ಸಾಹ ...:)
Delete