Saturday, July 28, 2012

ಒಲವಿನ ಪ್ರೇಮ ಗೀತೆಯಾ

ಓದು  ಬಾ ಓ  ಗೆಳತಿ 
ಒಲವಿನ ಪ್ರೇಮ ಗೀತೆಯಾ
ಅಂದು ನೀ ಬರೆದು ಬಚ್ಚಿಟ್ಟೆ 
ಸುಮ್ಮನೆ ಎನ್ನೆದೆಯ ಗೂಡಲ್ಲಿ

ಮನವಿಂದು ಗುನುಗುತಿದೆ 
ಸಾಹಿತ್ಯದ ಅರಿವಿಲ್ಲದೆ 
ಹಾಡು ಬಾ ನೀ ಗೆಳತಿ 
ಇಂಪಾದ ದ್ವನಿಯಲ್ಲಿ 

ಹೇಳುತಿದೆ ಮನವಿಂದು 
ಸನಿಹ ನೀನಿರುವೆ ಎಂದು
ಕಾಯುತಿದೆ ಒಲವಿಂದು
ನಿನ್ನ ಸೇರಲೆಂದು ....!!!

Friday, July 20, 2012

!!!! .. ♥♥ ಬಾ ಗೆಳತಿ ♥♥ ..!!!!



ಆಗಸದಿ ಪೌರ್ಣಮಿಯ ಚಂದಿರನು 
ಮೆಲ್ಲಗೆ ಮಂದಹಾಸವ ಚೆಲ್ಲಿಹನು 
ಬೀಸುತಿಹ ಹಿತವಾದ ತಂಗಾಳಿಯು 
ಮಲ್ಲಿಗೆಯ ಕಂಪ ಪಸರಿಸಿಹುದು 

ಏಕೋ ಏನೋ ಅರಿಯೆ ನಾ ಇಂದು 
ನನ್ನೀ ಹೃದಯದ ವೀಣೆ ಮಿಡಿಯುತಿದೆ 
ಕಾಣದ ಕೈ ಮೆಲ್ಲನೆ ಸವರಿ 
ಮೋಹದ ರಾಗ ಕಂಪಿಸುತಿದೆ 

ಅಂತರಂಗದ ಗೊಡಲ್ಲಿ ಅವಿತಿದ್ದ
ಹೊಸ ಭಾವನೆಯು ಗರಿ ಗೆದರಿ 
ಉಲ್ಲಾಸದಿ ಮನದ ತುಂಬೆಲ್ಲ 
ಹಾವ ಭಾವದಿ ಹಾರಿ ನಲಿಯುತಿದೆ 

ಭಾವ ತುಂಬಿ ಹೃದಯ ಬಿಚ್ಚಿ 
ಮನದ ಮೌನದ ಮಾತು 
ತುಟಿಯಂಚಲಿ  ತುಸು ನಸುನಾಚಿ
ಕೈ ಬಿಸಿ ಕರೆಯುತಿದೆ ನಿನ್ನನ್ನೇ 

ಬಾ ಗೆಳತಿ ಬಂದೊಮ್ಮೆ ಬಿಗಿದಪ್ಪು 
ನಿನ್ನೀ ಇನಿಯನ ತೋಳ ತೆಕ್ಕೆಯನು 
ಸಾಗುವ ನಾವು ಬಾಳ ದೋಣಿಯನೇರಿ 
ಪ್ರೀತಿ ಪ್ರೇಮದ ಮಧುರ ಸಾಗರದಿ......... !!!!



Wednesday, July 18, 2012

!!!! ದೂರ ತೀರದ ಯಾನ !!!!





ಮನದಂತರಾಳದಲಿ ಗರಿಗೆದರುತಿದೆ 
ನೊರೆಂಟು ಬಣ್ಣ ಬಣ್ಣದ ಚಿತ್ತಾರಗಳು
ಹೃದಯದಲಿ ಹಾಗೆ ಗೂಡು ಕಟ್ಟಿದೆ
ಪ್ರೀತಿ ಪ್ರೇಮಗಳ ಮಧುರ ಬಾಂಧವ್ಯವು

ಕಂಡು ಕಾಣದೆ ಸುಮ್ಮನೆ
ಮರೆಯಾದ ಸವಿಗನಸುಗಳು
ಹಾಗೆ ಹುದುಗಿ ಹೋಗಿವೆ
ಅಂತರಂಗದ  ಭಾವನೆಗಳಲಿ

ಎಳೆ ಎಳೆಯಾಗಿ ಹರಿದು ಬರುತಿವೆ
ನೆನಪಿನ ಒಡಲಾಳದಿಂದ
ಅಂದು ಮೌನದಲ್ಲೇ ಅಳಿದು ಹೋದ
ಆ ಸುಂದರ ಕಾವ್ಯಗಳು

ಸಾಗುತಿದೆ  ಜೀವನದ ಪಯಣವು
ಸಾಗರದೀ ತೇಲುವ ನಾವೆಯ ಹಾಗೆ
ನಾವಿಕ ನೀನು ಪಯಣಿಗ ನಾನು
ಅರಿಯೆ ನಾನಿಂದು ಎಂದು ಸೇರುವೆನೆಂದು
 ಆ  ದೂರ ತೀರದ ಯಾನವ .....!!!!



Monday, July 9, 2012

ಎನ್ನ ಬಾಳ ಒಲವಿನಾ ಪುಟ ...!!!




ಅದ್ಹೇಗೋ ನನಗರಿವಿಲ್ಲದೆ ಬಂದು ಸೇರಿತು 
ನಿನ್ನಯಾ ಪ್ರೀತಿ ಎನ್ನೆದೆಯ ಮಂದಿರವ 
ಮೂಡಿತು ಹೃದಯಾಂತರಾಳದಲಿ 
ಏನೋ ಹೊಸದೊಂದು ಸುಂದರ  ಅನುಭವ 

ಪೌರ್ಣಮಿಯ ಚಂದಿರನು ನಸುನಾಚಿ ಕರಗಿಹನು 
ನಿನ್ನಾ  ತಾವರೆಯ  ಮೊಗದ ಸೆಳೆತಕೆ 
ಮೆಲ್ಲನೆ ಬೀಸುತಿಹ ತಣ್ಣನೆಯ ತಂಗಾಳಿಯು 
ಹುಚ್ಚೆಬ್ಬಿಸಿದೆ ಅವಿತಿರುವ ಮನದ ಭಾವನೆಗಳ  

ಅದೇಕೋ ಕಾಡುತಿದೆ ಪರಿ ಪರಿಯಾಗಿ 
ಆ ನಿನ್ನ ಕುಡಿನೋಟದ ಮೋಹಕ  ಸೆಳೆತ 
ದೂರದಿ ಹಾಗೇ  ಕೈ ಬೀಸಿ ಕರೆಯುತಿದೆ 
ತುಟಿಯಂಚಿನ ಕಿರು  ಮುಗುಳ್ನಗೆಯು

ಕರಗಿ ಹೋದೆ ನಾನಿಂದು ನನ್ನೇ ನಾ ಮರೆತು
ನಿನ್ನಯ ಪ್ರೀತಿಯ ಕಡಲಾಳದಲ್ಲಿ 
ಹರಿಸು ಬಾ ಗೆಳತಿ ಅಮೃತ  ಸುಧೆಯಾ 
ಎನ್ನ ಬಾಳ ಒಲವಿನಾ ಪುಟದಲಿ ...!!!