Wednesday, September 17, 2014

!!......ನೆನಪು ......!!

ಇಂದೇಕೋ ನಾನರಿಯೇ
ಭಾವನೆಯ ಕಾರ್ಮೋಡ ಒಡೆದು
ಯಾತನೆಯ ಮಿಂಚು ಹರಿದು
ನಿನ್ನಯಾ
ನೆನಪಿನ ತುಂತುರು
ಮಳೆ ಹನಿಯಲ್ಲಿ
ನನ್ನೀ ಮನವು
ಮಿಂದೆದ್ದು
ಹೃದಯದಂಗಳದಲ್ಲಿ
ಸವಿ ನೆನಪಿನ  ಕಾಮನ ಬಿಲ್ಲ
ಚಿತ್ತಾರದ ರಂಗೋಲಿಯ ಗೀಚಿ
ಕಂಡು ಕಾಣದಂತೆ
ಭಾವಾಂತರಾಳದಲ್ಲಿ
ಕರಗಿ ಹೋದೆ ಯಾಕೆ
ಓ ನನ್ನ ಗೆಳತೀ ....!

Thursday, April 10, 2014

!!.... ಒಲವಿನಾ ಅಲೆಗಳು ....!!



ಮನದಂಗಳದ
ಪ್ರೀತಿಯ ಹೂದೋಟದಲ್ಲಿ
ಭಾವನೆಯ ಕಂಪು  ಬೀರಲು
ನೆನಪಿನಾ ಪುಟದಿ
ಕನಸುಗಳು ಕರಗಿ
ಅಂತರಂಗದಿ
ಭಾವಾನುರಾಗ ಮೀಟಿ
ಒಲವಿನಾ ಅಲೆಗಳು
ತುಟಿಯಂಚನು ಸವರಿ
ನಸುನಾಚಿ ನೀರಾಗಿ
ಕಣ್ಣಂಚಲಿ ಜಾರುತಿವೆ ಗೆಳತಿ.. !!!


Saturday, February 8, 2014

!!! ... ನೀ ... !!!

ನಾ ನೆನೇವ ನೆನಪಿನ ಸಾಗರದಲಿ
ಕನಸಿನಾ ಅಲೆಯಾಗಿ ನೀ ಬಂದೆ
ಬಾಳ ನೌಕೆಯ ನಾನೇರಲು
ಭಾವನೆಯ ನಾವಿಕ ನೀನಾದೆ

ಮಾಸಿದಾ  ಮನದಂಗಳದಲ್ಲಿ
ರಂಗಿನಾ ಚಿತ್ತಾರ ನೀ ಗೀಚಿದೆ
ಬತ್ತಿದಾ ಕಂಗಳಲಿ
ಒಲವಿನ ತುಂತುರು ಹನಿ ನೀನಾದೆ  

ನನ್ನೊಳಗಿನ ಭಾವ ನೀನು
ಭಾವನೆಯ ಭಾವಾಂತರ ನೀನು
ನನ್ನೆದೆಯ ಬಡಿತ ಮಿಡಿಯುತಿದೆ ನೆನೆದು
ಬಾ ಬಾಳ ಒಡತಿ ಹಂಬಲಿಸಿದೆ ಈ ಮನ

ನೀನಿಲ್ಲದಾ ಈ ಬಾಳ ಪಯಣ
ಸಾರಥಿ ಇಲ್ಲದಾ ರಥದಂತೆ
ನಾವಿಕನಿಲ್ಲದಾ ನಾವೇಯಂತೆ ..!!

Sunday, January 19, 2014

!!.. ನಿವೇದನೆ ...!!


ಮನದಾಳದಲಿ ಮುಡಿದಾ
ಆಸೆಯ ನೆನೆಯುತ
ಕತ್ತಲೆಯ ಹಾದಿಯಲಿ ನಡೆದು ನಾ
ಕನಸಿನಲಿ ಬೆಳಕಿನ ಹಾದಿ ತುಳಿದೆ.

ಮನವಿಂದು ನೆನೆಯುತಿದೆ
ಕನಸಿನಾ ಮಂಜು ಹನಿಯಲಿ
ನಿನ್ನದೇ ನೆನಪು ಮತ್ತೆ ಮತ್ತೆ
ಕಾಡುತಿದೆ ನಿನ್ನಿರುಹ ನೆನೆದು .

ನಿನ್ನಯ ನೆನಪು ಮೌನದಿ ಕಾಡಿ
ಯೇನ್ನೆದೆಯಲಿ ಬಚ್ಚಿಟ್ಟ ಭಾವನೆಗಳು
ಹಾಗೇ  ಗರಿಬಿಚ್ಚಿ ಹಾರುತಿವೆ
ನಿನ್ನೋಲವಿನ  ಪ್ರೀತಿಯ ಕಡಲಿನೆಡೆಗೆ.

ಬಾ ಗೆಳತಿ ನೀ
ನನ್ನ ಮನದಲಿ ಮನಸಾಗಿ
ಕನಸಲಿ ನೆನಪಾಗಿ
ಜೀಕುವಾ ಬಾಳ ಪಯಣವ
ಮಮತೆಯ ನಾವೇ ಏರಿ ಪ್ರೀತಿಯ ಸಾಗರದಲಿ ...!!!

Tuesday, January 14, 2014

!!.. ಸಂಕ್ರಾಂತಿ ..!!

ಎಳ್ಳಿನೊಡನೆ ಕಬ್ಬು ಬೆಲ್ಲದ ಸಿಹಿ ಬೆರೆತು
ಸವಿ ಸವಿ ನುಡಿಯೊಂದು ಮೂಡಿ
ನವ ವರುಷದ ಹರುಷ
ಮನದಾಳದಲಿ ಗರಿ ಬಿಚ್ಚಲಿ.

ದ್ವೇಷ ಕ್ಲೇಶಗಳ ಮರೆತು
ಹೊಸಗನಸೊಂದ ಹೆಣೆದು
ಸಾಗಲಿ ನಮ್ಮಯ ಪಯಣವು
ನವ ಬಾಳಿನೆಡೆಗೆ ....!!!

Friday, January 3, 2014

!!!.... ಮೌನ ರಾಗಕೆ ...!!!

ಕಣ್ಣಲ್ಲಿ ಹುಟ್ಟಿದ
ನೂರಾರು ಕನಸುಗಳು
ರೆಕ್ಕೆ ಬಿಚ್ಚಿ
ಹಾರತೊಡಗಿದ್ದು,
ನನ್ನಾಕೆಯ ಅಂತರಂಗದ
ಭಾವನೆಗಳ ಮಿಡಿತದಲಿ
ನನ್ನ ಒಲವಿನ ವೀಣೆಯು
ಅರಿವಿಲ್ಲದೆ ಹಾಡಿದಾ
ಮೌನ ರಾಗಕೆ ...!!