Saturday, September 10, 2011

ಮನಸ್ಸು


"ಇಂದು ನಾನಂದುಕೊಂಡಷ್ಟು ದೂರ ನೀನಿಲ್ಲ...
ನಾನು ಕರೆದರು ನೀ ಬರುವ ಹಾಗಿಲ್ಲ...
ನನ್ನೊಲವೆಲ್ಲ ನೀನೆ ಆದರೂ ನೀನಿಲ್ಲದೇ ಏನು ಇಲ್ಲಿಲ್ಲ ನರಳುತಿದೆ ಪ್ರೀತಿಯಲಿ ಮನವು ಇಂದು…"

ಅಮ್ಮ


ನೋವೊಳಗೆ ಅಳುವ ಮುಗ್ಧ ಮಗು ನಾನಾಗಿದ್ದೆ …
ಅಳುವ ಮರೆಸಿ ಲಾಲಿ ಹಾಡುವ ಹೃದಯ ನೀನಾದೆ.
ಅಮ್ಮಾ ನಿನಗಿಂತ ಮಿಗಿಲಾದ ಪ್ರತ್ಯಕ್ಷ ದೇವರಿಲ್ಲ ...
ನಿನಗೆ ನೀನೆ ಸಾಟಿ ಈ ಜಗದಲಿ......
ನೀನಿರದ ಜಗವ ಊಹಿಸಲು ಸಾದ್ಯವೇ......?

ಸ್ನೇಹ

ನಯನ ನಿನ್ನವಾದಲ್ಲಿ ಅದರೊಳಗಿನ ಕಂಬನಿ ನನ್ನದಾಗಲಿ ಹೃದಯ ನಿನ್ನದಾದಲ್ಲಿ ಅದರ ಮಿಡಿತ ನನ್ನದಾಗಿರಲಿ ಸಾಧನೆ ನಿನ್ನದಾದಲ್ಲಿ ಅದರ ಮೆಟ್ಟಿಲು ನಾನಾಗಿರಲಿ ನಮ್ಮ ಸ್ನೇಹ ಎಷ್ಟು ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ ಸಾವು ನನ್ನದಾಗಿರಲಿ......... ಓ ಸ್ನೇಹಿ ನಿ ಎಂದೆಂದೂ ಅಮರ ಈ ಜಗದಲಿ ....

ಕನಸು


ನಿನ್ನ ಕನಸುಗಳನ್ನೆಲ್ಲ ಬರೆಬರೆದು
ಕಾಗದದ ದೋಣಿ ಮಾಡಿ
ನಿನ್ನತ್ತ ತೇಲಿಬಿಟ್ಟಿದ್ದೇನೆ ಗೆಳತಿ
ಭವಿಷ್ಯದ ನದಿಯೊಳಗೆ ತೇಲಿಬಂದು
ನಿನ್ನ ಬಾಳಿನ ದಡವ ತಲುಪಬಹುದು ಅವು
ನೆನೆದು ಮುದ್ದೆಯಾಗಿವೆಯೆಂದು ಬಿಸಾಡ ಬೇಡ
ಎಚ್ಚರವಾಗಿ ಬಿಡಿಸಿ ಓದು ಸಾಕು ಒಮ್ಮೆ
ಅವು ಪೂರ ನಿನ್ನವು ಜೊತೆಗೆ ನನ್ನವು .......:)

ಪ್ರೀತಿ


ನನ್ನ ಮನಸಿನ ಮೌನ ಭಾವನೆ ನೀನು
ನನ್ನ ಹೃದಯದ ಪ್ರತಿಬಡಿತದ ಶಬ್ದ ನೀನು
ನನ್ನೆದೆಗೂಡ ಹೊಕ್ಕಿಬಂದ ಪ್ರೀತಿಯ ಭಾವಬಿಂದು ನೀನು
ನಾ ನಡೆವಾಗ ಸದ್ದಿಲ್ಲದೆ ಬೆನ್ನತ್ತಿದ ಪ್ರತಿಬಿಂಬ ನೀನು
ಎಂದೆಂದೂ ನನ್ನ ನೆನಪಿನಂಗಳದಲ್ಲಿ ಮಾಯವಾಗದ ಛಾಯೆ ನೀನು.....

ಗೆಳತಿ

ನನ್ನಯ ಸುಂದರವಾದ ಜೀವನ ಸಾಗುತ್ತಿರಲಿ ಹೀಗೆ
ನಾ ಕಾಯುವೆ ನಿನಗಾಗಿ ಜೀವನದ ತೀರದಲ್ಲಿ
ಮರಳಿ ಬಾರದಿರು ಗೆಳತಿ ನಾ ಕಾಯುವ ತೀರದೆಡೆಗೆ
ಅನಿಸುತಿದೆ ನನಗೆ ಕಾಯುವುದರಲ್ಲೇ ಸುಖವಿದೆಯೆಂದು..