Wednesday, May 22, 2013

!! ... ಸ್ನೇಹ ... !!





ನಾನಿಂದು ಬಂಧಿಯಾಗಿಹೆನು
ನಿನ್ನಯಾ ಸ್ನೇಹದ ಪಾಶದಲಿ
ನಮ್ಮೀ  ಮನಸುಗಳ ನಡುವಿಲ್ಲ
ಮೌನದಾ ಪರದೆಯ ಜಾಡು

ತಡೆಯಿಲ್ಲದೆ ಹರಿದಾಡುವುದು
ಪಿಸುಮಾತಿನ ಸಂದೇಶಗಳು
ಬಾಳ ಪಯಣದಲಿ ಸಾಗುವ
ಸ್ನೇಹದ ದೋಣಿಯನೇರಿ

ಸದ್ದಿಲದೆ ಮೌನದಿ ಶುರುವಾದ ಈ ಸ್ನೇಹ
ಕೈ ಜಾರಿ ಮರೆಯಾಗದಿರಲಿ ಎಂದೂ ..!!

Tuesday, May 21, 2013

!!...ಪದಗಳೇ ಸಿಗುತಿಲ್ಲ ..!!




ಚಂದಿರನು ನಸುನಾಚಿ ಅಡಗಿಹನು ಬಾನಲ್ಲಿ
ತಾರೆಗಳು ಬೆರಗಾಗಿ ಮರುಗಿಹವು ಮನದಲ್ಲಿ
ಕಾರ್ಗತ್ತಲು ಓಡಿಹುದು ನಿನ್ನಯಾ ಕಾಂತಿಗೆ ಅಳುಕಿ ,
ತಾವರೆಯು ಮುಸಿನಗುತ ಮೆಲ್ಲಗೆ ಅರಳಿಹುದು
ನಿನ್ನಯಾ ತುಟಿಯಂಚಿನ ಮುಗಳ್ನಗೆಗೆ ಮನಸೋತು ..
ಏನೆಂದು ಹೊಗಳಲಿ ನಿನ್ನರೂಪ ರಾಶಿಯ ಗೆಳತಿ
ಪದಗಳೇ ಸಿಗುತ್ತಿಲ್ಲ ಮನದ ಬತ್ತಳಿಕೆಯಲಿ .....!!

Friday, May 17, 2013

!!... ಸ್ನೇಹ ಹಸ್ತಾಕ್ಷರ ...!!




ಮುಗುಳ್ನಗೆ ಬಿರುತಾ ಜೊತೆ ನೀನಿರಲು
ಬೇರೇನೂ ಬೇಡ ಗೆಳೆಯಾ ಈ ಜೀವಕೆ
ಮನವು ರೆಕ್ಕೆ ಬಿಚ್ಚಿ ಹಾರುವುದು ಸ್ವಚ್ಚಂದದಿ
ಮುಗಿಲ ಎಲ್ಲೆಯ ದಾಟಿ ಕಾಣದಾ ಲೋಕದೆಡೆಗೆ.!

ನಿನ್ನಯಾ ಸ್ನೇಹದಾಸರೆ ನನಗಿರಲು
ನನ್ನೀ ಸೋತ ಮನಸಿನ ಭಾವ ಭಾವಕೆ
ಚಿಲುಮೆಯಾ ಸ್ಪೂರ್ತಿ ನಿನಾಗುವೆ ಗೆಳೆಯಾ
ಬೀರು ಬೇಸಿಗೆಯಲಿ ಲತೆ ಚಿಗುರುವಂತೆ.!

ಮುಗ್ದ ಮನಗಳ ಮಧುರ ನಮ್ಮೀ  ಈ ಸ್ನೇಹ
ಹಾಲಿನಂತೆ ತಿಳಿಯಾಗಿರಲಿ ಎಂದೆಂದಿಗೂ
ಅರಿತು ಅರಿಯದೆಯೇ ಗೀಚಿರುವೆ ಸ್ನೇಹ ಹಸ್ತಾಕ್ಷರವ
ನಿನ್ನಯ ಅಂತರಂಗದ ಭಾವನೆಯ ಪುಟಗಳಲಿ
ಅಳಿಯದೆ ಉಳಿವುದೆಂಬ ಭಾಂದವ್ಯದ ನಂಬಿಕೆಯಲಿ ....!!

Thursday, May 16, 2013

!!.... ಮಂದಹಾಸ...!!




ಸಾರಿ ಹೇಳುತಿದೆ ಮನದೊಳಗಿನ ಭಾವನೆಯ
ಅರಳಿದಾ ಮೊಗದಲ್ಲಿನ ಈ ನಿನ್ನ ಕಿರು ಮಂದಹಾಸ
ಕಣ್ಣಂಚಲಿ ಹಾಗೇ ಮಿನುಗುತಿದೆ ನನ್ನದೇ  ಭಾವ ಬಿಂಬ
ಇರುವೇ ನಾ ಸದಾ ನಿನ್ನಯಾ ಹೃದಯದಂಗಳದಲಿ
ಪ್ರೀತಿಯಾ ರಂಗೋಲಿಯಲಿ ಒಲವಿನಾ ಚುಕ್ಕಿಯಾಗಿ ....!!


Tuesday, May 14, 2013

!! .... ವಾತ್ಸಲ್ಯದ ಲೇಖನಿ ...!!





ಮನದಾಳದ ಮಧುರ ಪಿಸುಮಾತುಗಳನು
ವ್ಯಕ್ತಪಡಿಸಲು ಅಂಜಿ ಹೃದಯಲಿ ಬಚ್ಚಿಟ್ಟು
ಕಾದಿರುವೆ ಗೆಳತಿ ನಿನಗಾಗಿ ಬಹುದೊರದಿ ನಿಂತು !

ಮನದಲಿ ಹತ್ತಾರು ಹಸಿ ಬಿಸಿ ಭಯಕೆಗಳು
ಹೊಂಗನಸ ಕಾಣುತಿವೆ
ನಿನ್ನಯಾ ಒಲವಿನ ಮೃದು ಸ್ಪರ್ಶಕಾಗಿ !

ತುಸು ನಾಚಿಕೆಯಾ ಕಣ್ಣೋಟವ ಬಿರಿ
ಮಂದಹಾಸದಿ ತನುಮನವ ಅರಳಿಸಿ
ಪ್ರೀತಿಯ ಪಯಣದಿ ಮಿಡಿದ ಮಿಡಿತ ನೀನಾದೆ !    

ನನ್ನೀ ಅಂತರಂಗದ ಭಾವನೆ ಅರಿತು
ಪ್ರೀತಿಯ ಸೋನೇ ಮಳೆ  ಸುರಿದ
ಕನಸಿನಾ ಕಲ್ಪನೆಯ ಬಾಳ ಗೆಳತಿ ನೀ !

ಬಿಟ್ಟಿರುವೆ ಖಾಲಿ ಪುಟಗಳನು ಎನ್ನೆದೆಯಲಿ
ಬಂದು ಗೀಚಿ ಹೋಗು ನೀನೊಮ್ಮೆ
ನಿನ್ನದೇ ಪದಗಳನು ವಾತ್ಸಲ್ಯದ ಲೇಖನಿಯಲಿ....!!

Monday, May 6, 2013

!!... ಮನದೊಡತಿ ...!!



ಮನದ ಮನೆಯೊಳಗೇ
ಮನದೊಡತಿ ಬಂದಿರಲು
ಭಾವನೆಗಳು ಚಿಗುರೊಡೆದು
ಭಾಂದವ್ಯದ ಬೆಸುಗೆ ಬೆಸೆಯುವುದು
ಅರಿತು ಅರಿವಿಲ್ಲದೆ ಮಮತೆಯ
ಬಂಧನದ ತೆಕ್ಕೆಯಲಿ ಹಾಗೇ .....!!!