Saturday, December 31, 2011

ಮಾಯದಾ ಪ್ರೀತಿ


ಮೌನ ಮೌನಗಳ ನಡುವೆ ಮನಸಿನ ಮಾತು ಮರೆಯಾಯ್ತು ,
ಕಣ್ಣು ಕಣ್ಣುಗಳ ನಡುವೆ ಪ್ರೀತಿಯ ಹೃದಯಗಳ ಮಿಲನವಾಯ್ತು ,
ಭಾವ ಭಾವನೆಗಳ ಈ ಅಪರೂಪದ ಸಂಮಿಲನವಾಯಿತು ,
ಎಲ್ಲೋ ನನ್ನೀ ಸುಪ್ತ ಮನಸ್ಸಿನಲ್ಲಿ ನಿನ್ನಯ ಹೆಜ್ಜೆ ಗುರುತು ಮೂಡಿದೆ ,
ಕೇಳುತಿದೆ ಓ ಗೆಳತಿ ಇದೇನಾ ಕಣ್ಣಿಗೆ ಕಾಣದ ಮಾಯದಾ ಪ್ರೀತಿ ಎಂದು ......!!!!

Sunday, December 25, 2011

ಮನದರಸಿ...

ನೀ ಕೆಸರಿನಲ್ಲಿ ಅರಳಿದ ಕಮಲದಂತೆ ಪರಿಶುದ್ಧ ಸುಂದರ ಹೂವಾದೆ ,
ಮುಂಜಾನೆಯ ದಟ್ಟ ಮಂಜಿನಾ ನಡುವೆ ಹೊರಬಂದ ಬೆಳಕಿನ ಕಿರಣ ನೀನಾದೆ ,
ಎಲೆಯ ಮೇಲಿನ ಹೊಳೆವ ಚೆಲುವಿನ ಮುಗ್ದ ಇಬ್ಬನಿಯ ಮುತ್ತಿನ ಹನಿಯಾದೆ ,
ಪೌರ್ಣಿಮೆಯ ಬೆಳದಿಂಗಳ ರಾತ್ರಿಯಲಿ ಬೀಸುವ ತಂಗಾಳಿಯ ಪ್ರತಿರೂಪವಾದೆ ,
ಕೇಳುತಿದೆ ಓ ಗೆಳತಿ ಈ ಮನವಿಂದು ಆಗುವೆಯಾ ನನ್ನ ಮನದರಸಿ ಎಂದು.....

Wednesday, December 21, 2011

ಪ್ರೀತಿಯಾ ಹೆಜ್ಜೆ..

ಮರೆತು ಮರೆಯದಿರು ನೀ ಮರೆಯಲಾರದ ಈ ಅನುಭಂದವ ,
ಹಳೆಯ ಆ ಸವಿ ನೆನಪುಗಳ ಆಗಾಗ ನೆನಪಿಸಿಕೋ ನಿನ್ನ ಮನದಲ್ಲಿ ,
ಮನದಾಳದ ಭಾವನೆಯ ಅಲೆಗಳ ನಡುವೆ ಹಾಗೆಯೇ ತೇಲಿ ಬಿಡಬೇಡ ,
ಹೇಳುತಿದೆ ನನ್ನೀ ಮನಸು ಬರುವೆ ನಿನ್ನ ಸ್ಮ್ರತಿಯಲ್ಲಿ ನಾ ಒಂದು ಕ್ಷಣ ಎಂದು ,
ಹೃದಯದಲಿ ಇನ್ನು ಅಚ್ಚಳಿಯದೆ ಇದೆ ನಿನ್ನಯ ಪ್ರೀತಿಯಾ ಹೆಜ್ಜೆ ....

Monday, December 19, 2011

ಯಾಕೆ ನೀ ಹೀಗೆ

ಯಾಕೆ ನೀ ಹೀಗೆ ಮೌನವಾಗಿ ಕಣ್ಣಿಗೆ ಕಾಣದೆ ಕರಗಿಹೋದೆ ,
ಕಿವಿಎರಡು ಹಾತೊರೆಯುತಿವೆ ನಿನ್ನಯಾ ಪಿಸುದನಿಯ ಆಲಿಸಲು ,
ಮನ ಮೂಕವಾಗಿ ಕಂಬನಿಯು ಮಿಡಿಯುತಿದೆ ನಿನ್ನದೇ ನೆನಪಿನಲ್ಲಿ ,
ಒಂದು ಕ್ಷಣವಾದರೂ ಕೇಳಿಸದೆ ನನ್ನೀ ಮನಸ್ಸಿನ ಒಲವಿನ ಕರೆಯು ,
ಹೃದಯದ ಬಡಿತ ಹೇಳುತಿದೆ ಮತ್ತೆ ನೀ ಬರುವೆ ನನಗಾಗಿ ಎಂದು ,
ಅರಿಯದಾದೆಯ ಗೆಳತಿ ಭಾವದಾ ತುಡಿತ ಮೋಹದಾ ಮಿಡಿತ ಪ್ರೀತಿಯಾ ಸೆಳೆತ ನೀ.....

Saturday, December 17, 2011

ಕಣ್ಣಂಚಿನ ಕುಡಿನೋಟ

ನಿನ್ನಯ ಕಣ್ಣಂಚಿನ ಕುಡಿನೋಟ ನನ್ನನ್ನು ಸೆಳೆಯುತಿದೆ ,
ಮನದ ಮೋಹದಾ ಮಿಡಿತ ಬಾ ಎಂದು ಕರೆಯುತಿದೆ ,
ನನ್ನಯಾ ಮನದ ಮನೆಯಲಿ ಕೊರೆದೆ ನಿನ್ನಯ ಬಿಂಬ ,
ನೋಡಿಯೂ ನೋಡದೆ ಏನೋ ಮೋಡಿಯ ಮಾಡಿದೆ ,
ಕಳುಹಿಸೆಯ ಅಪೂರ್ವದ ಪ್ರೀತಿಯಾ ಮಿಲನದ ಕರೆಯೋಲೆ ,
ಕಾದಿದೆ ನನ್ನಿಮನ ಓ ಗೆಳತಿ ನಿನಗಾಗಿ ನಿನ್ನಯ ಪ್ರೀತಿಗಾಗಿ ......!!!

Friday, December 16, 2011

ಅಮ್ಮ ..


ಮನದ ಮೌನ ಕರಗಿತು ನಿನ್ನಯಾ ಪ್ರೀತಿ ಸೆಲೆಗೆ ,
ಭಾವನೆಗಳು ಗರಿಗೆದರಿ ಅರಳಿದವು ಆ ನಿನ್ನ ಮಮತೆಗೆ ,
ಇರುವುದೇ ಪ್ರೀತಿ ಮಮತೆಗೆ ವಾತ್ಸಲ್ಯಕೆ ಬೇರೊಂದು ಹೆಸರು ,
ಇಲ್ಲಾ ಎನ್ನುತಿದೆ ಈ ನನ್ನ ಮನವು ನಿನ್ನೋಬ್ಬಳ ಹೊರತು ,
ಇವೆಲ್ಲದಕು ಒಂದೇ ಒಂದು ಹೆಸರು ಅದುವೇ ನಿನಮ್ಮಾ .....

Tuesday, December 13, 2011

ನೆನಪಿನಂಗಳ

ಮನದಾಳದ ನೆನಪಿನಂಗಳದಲ್ಲಿ ಸವಿ ನೆನಪೊಂದು ಕಾಡುತಿದೆ ,
ಭಾವ ಭಾವನೆಗಳ ನಡುವೆ ಸಿಕ್ಕಿ ಹೊರಲಾಡುತಿದೆ ,
ತುಟಿಯಂಚು ಕಾತರಿಸುತಿದೆ ಹೇಳಲು ಮನದಾಳದ ಮಾತನ್ನು ,
ಏಕೋ ಏನೋ ಕರಗಿದೆ ಪಿಸು ಮಾತು ಮೌನದಾ ಮರೆಯಲ್ಲಿ ,
ಹೇಗೆ ಹೇಳಲಿ ಗೆಳತಿ ನನ್ನಂತರಾಳದ ಬಾವನೆಯ ನಿನಗೆ ......

Saturday, December 10, 2011

ಬೆಳದಿಂಗಳ ರಾತ್ರಿ

ಸುಂದರ ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲಿ , ಬೀಸುತಿಹುದು ತಂಪಾದ ತಂಗಾಳಿಯು ಎಡೆಬಿಡದೆ , ಕನಸುಗಳ ಮೋಡದ ಮರೆಯಿಂದ ಬರುವೆಯಾ ನನ್ನ ಮನದೊಳಗೆ , ಭಾವನೆಗಳ ಗರಿಗೆದರಿ ಹಾರುವ ರಭಸದಿಂದ ಆಗಸದೆಡೆಗೆ , ಸ್ವಪ್ನ ಸಾಗರವ ದಾಟಿ ಮುನ್ನುಗ್ಗುವ ನಿಜ ಜೀವನ ಸುಂದರ ತಾಣಕೆ ...

ಸಂಗಾತಿ

ಹೃದಯವೆಂಬ ತೋಟದಲ್ಲಿ ನಲಿವ ಹೂವಾಗಿ ಅರಳಿದೆ ನೀ ,
ಮೋಡವಾದ ಮನಸ್ಸನು ಕರಗಿಸಿ ಪ್ರೀತಿಯ ತುಂತುರು ಹನಿಯಾದೆ ,
ಹನಿಯಾಗಿರುವ ನನ್ನನ್ನು ಅಮೂಲ್ಯ ಮುತ್ತ್ತಾಗಿಸಿದೆ.. ,
ಆ ದೇವರು ಸೃಷ್ಟಿಸಿದ ದೇಹ ನಾನಾದರೆ ಅದರ ಜೀವ ನೀನಾದೆ ,
ನಲಿವ ಹೊವಾಗಿ ಬಂದ ನನಗೆ ಜೀವ ಕೊಟ್ಟ ಸಂಗಾತಿ ನೀನಾದೆ ಗೆಳತಿ ,
ನಾ ಹೇಗೆ ಮರೆಯಲ್ಲಿ ನಿನ್ನ ಕೊನೆಯುಸಿರು ಇರುವವರೆಗೂ ......!!!

Wednesday, December 7, 2011

ನೆನಪು


ಮನಸ್ಸು ಭಾರವಾದಾಗ ಮೌನ ನಲಿದಾಡುವುದು. ,
ಸಂಭಂದ ದೂರವಾದಾಗ ನೆನಪು ಮರೆಯಾಗುವುದು ,
ಭಾವನಾ ಲೋಕದಲ್ಲಿ ಕನಸುಗಳು ಹರಿದಾಡುವವು ,
ಈ ಭಾವನೆಗಳು ಹರಿವ ನದಿಯಂತೆ ಕೊನೆ ಇಲ್ಲದ ಪಯಣ ,
ಜೀವನದ ಕೊನೆಯಲ್ಲಿ ಉಳಿಯುವುದು ಈ ಹೃದಯ ತಂದಿಟ್ಟ ನೆನಪು ಮಾತ್ರ..

ಪ್ರೀತಿ


ನೀ ಆಗಸದಲ್ಲಿ ಮಿನುಗುವ ತಾರೆಯಗದಿದ್ದರು ಬಾಳಿನ ನಂದಾದೀಪವಾಗು ,
ದಿನವೆಲ್ಲಾ ಅರಳಿ ಕಂಪ ಸೂಸುವ ಮಲ್ಲಿಗೆಯಾಗದಿದ್ದರು ಇಬ್ಬನಿ ಹನಿಯಾಗು ,
ಸಾಗರದ ಆಳದಲ್ಲಿ ಅಡಗಿದ ಮುತ್ತಲ್ಲದಿದ್ದರು ಪ್ರೀತಿಯ ಸೆಲೆಯಾಗು ,
ಪರಿಪರಿಯಾಗಿ ಪ್ರೀತಿಸು ನೀ ನೋಯಿಸಿದ ಹೃದಯವನ್ನು ಯಾಕೆಂದರೆ ,
ಹೃದಯ ಅರಳಿದ ಕುಸುಮದಂತೆ ಒಮ್ಮೆ ಬಾಡಿದರೆ ಅರಳದು ಮತ್ತೊಮ್ಮೆ.... :)

Tuesday, December 6, 2011

ನಿನ್ನಯ ನೆನಪು

ನನ್ನ ಮನದಲ್ಲಿ ಎಡಬಿಡದೆ ಕಾಡುತಿದೆ ನಿನ್ನಯ ನೆನಪು ,
ನಿನ್ನಯ ನೆನಪಾಗುತಲೇ ಕಣ್ಣಂಚಲಿ ಕನಸೊಂದು ಮೂಡಿದೆ .. ,
ಕಾತರಿಸುತಿದೆ ನನ್ನಯ ಮನವಿಂದು ಕನಸು ನನಸಾಗಲೆಂದು ,
ನನಸಾಗದೆ ಆ ನನ್ನಯ ಸವಿಯಾದ ಕನಸು ಇಂದು ...

Monday, December 5, 2011

ಸವಿ ಹೃದಯ

ನನ್ನಯಾ ಪ್ರೀತಿಯ ಸವಿ ಹೃದಯದಲ್ಲಿ ಮುಗುಳ್ನಗೆಯ ಹೊತ್ತು ನೀ ಬಂದೆ ,
ನಿನ್ನಯ ಪ್ರೀತಿಯ ಬೀಜವನ್ನು ನನ್ನ ಮನದಲ್ಲಿ ಬಿತ್ತಿ ಅರ್ಥವಾಗದ ನಗುವ ನೀ ಬಿಟ್ಟು ಹೋದೆ ,
ಹೇಳದೇ ಹೋದೆ ನಗುವಿನ ಅರ್ಥವ,ಮನದಲ್ಲಿ ಬಿತ್ತಿದೆ ಪ್ರೀತಿಯ ಬೀಜದ ಕಾರಣವ ,
ಹುಡುಕುತ ನಾ ನಡೆದೇ ಆ ನಗುವಿನ ಅರ್ಥವ,ನಿನ್ನ ಪ್ರೀತಿಯ ಮೂಲವ.. ,
ನಾ ಮೆಚ್ಚಿದ ಮೊದಲ ಪ್ರೇಯಸಿ ನೀನು.ಪ್ರೀತಿಯ ಪ್ರತಿರೂಪ ನೀನು .. ,
ಕಾಯುತಿದೆ ಓ ಗೆಳತಿ ನಿನಗಾಗಿ ಈ ಜೀವ ಮತ್ತೆ ನೀ ಬರುವೆ ನಗುವ ಅರ್ಥ ಹೇಳಲೆಂದು ..

ಹುಡುಕಾಟ


ನೆನಪಿನ ದೋಣಿಯಲಿ ಕೈ ಜಾರಿದ ಕನಸುಗಳು....,
ಸಾಗರದ ಗರ್ಭದಲಿ ಅವಿತಿರುವ ಮುತ್ತುಗಳು .. ,
ಎಲ್ಲೆಲ್ಲೋ ಮರೆಯಾಗುವ ನಿನ್ನುಸಿರು.. ,
ಎಡೆಬಿಡದೆ ಕಾಡುವ ನನ್ನುಸಿರು.. ,
ಅತ್ತು ಮರೆಯಾಯಿತೇ ಓ ಗೆಳತಿ ನಿನ್ನಯ ಹುಡುಕಾಟದಲ್ಲಿ ......

Sunday, December 4, 2011

ಹೇಳು ಗೆಳತಿ..

ನಿನ್ನ ಮುಗುಳ್ನಗೆಯ ವದನದಲ್ಲಿ ಹೂವ ಕಾಂತಿ ತುಂಬಿದೆ ,
ನಿನ್ನ ನಯನದ ಒರೆ ನೋಟದಲ್ಲಿ ನನ್ನ ಜೀವ ಹುದುಗಿದೆ ,
ನಿನ್ನ ಮಮತೆಯ ಹೃದಯದಲ್ಲಿ ನನ್ನ ಪ್ರೀತಿ ಮಲಗಿದೆ ,
ನನ್ನ ಮನಸ್ಸಿನ ಹುಚ್ಚು ಹೊಯ್ದಾಟದಲ್ಲಿ ಅಲೆಯಂತೆ ಮರಳಿ ಮರಳಿ ಬರುವೆ ನೀ ,
ಹೇಳು ಗೆಳತಿ ಇರುವುದೇ ನನ್ನೀ ಜೀವ ಎಂದಾದರೂ ಮರೆತು ನಿನ್ನಾ......!!

Saturday, December 3, 2011

ಮೌನ

ಮೌನವಾಗಿ ಕೊಲ್ಲದಿರು ನನ್ನ ನೀ ಹೀಗೆ ಎಂದೂ ,
ಕಾಯುತಿಹವು ನನ್ನೀ ಕಿವಿಗಳು ನಿನ್ನ ಪಿಸುದನಿಯನ್ನು ಕೇಳಲು ,
ಅರಿಯದೆ ಆ ನಿನ್ನ ಮನ ನನ್ನೀ ಮನದಾಳದ ನೋವನ್ನು ,
ಆದರೂ ಹೇಳುತಿದೆ ನನ್ನೀ ಸುಪ್ತ ಮನ ನಿ ಮತ್ತೆ ಬರುವೆ ನನ್ನ ಬಳಿಗೆ ಎಂದೂ ,
ಇಂದು ನಾ ಅರಿತೆ ಗೆಳತಿ ಕಾಯುವುದರಲ್ಲೂ ಏನೋ ಸುಖವಿದೆ ಎಂದೂ..

Tuesday, November 29, 2011

ನೆನಪಿನಂಗಳ

ಭಾವನೆಯ ಲೋಕದಲ್ಲಿ ಭಾವಬಿಂದುವಾಗಿರು ನೀ ,
ನೆನಪಿನಾ ಲೋಕದಲ್ಲಿ ಸವಿಗನಸು ನಿನಾಗಿರು ,
ಆ ನಿನ್ನ ಸವಿಗನಸಿನಲ್ಲಿ ಸಣ್ಣದೊಂದು ನೆನಪು ನಾನಾಗಿರಲಿ ,
ಹೊರ ನೂಕದಿರು ನನ್ನಾ ಎಂದೆಂದಿಗೂ ನಿನ್ನಾ ನೆನಪಿನಾ ಲೋಕದಿಂದ ,
ಗಟ್ಟಿಯಾಗಿ ಮನೆಮಾಡಿರುವೆ ನಿನ್ನಯಾ ನೆನಪಿನಂಗಳದಲ್ಲಿ ........:)

Wednesday, November 23, 2011

ಪಿಸು ದನಿ

ಕೇಳಿಸದೆ ನನ್ನ ಮನದಾಳದ ಪಿಸು ದನಿಯು ನಿನಗೆ ,
ಇಲ್ಲಾ ಕೇಳಿಯೂ ಕೇಳದಂತೆ ಮೌನವಗಿರುವೆಯಾ ,
ಕ್ಷಣ ಕ್ಷಣವು ನೆನೆಯುತಿದೆ ನನ್ನೀ ಮನ ನಿನ್ನಯಾ ಪ್ರೀತಿ ಸುಧೆಯನ್ನು ,
ಯಾವಾಗ ಮಿಂದೆಳುವೇನು ನಿನ್ನಾ ಪ್ರೀತಿಯ ಮಳೆಹನಿಯಲಿ ಎಂದು ,
ಕೊಡಲಾರೆಯಾ ಚೂರು ಜಾಗವನ್ನು ನಿನ್ನಾ ಪವಿತ್ರ ಗೊಡಿನಲ್ಲಿ ಓ ಹೃದಯವೇ .....

Tuesday, November 1, 2011

ತಿರುಗಿ ಬರುವೆಯಾ

ಹೃದಯದ ಸುಪ್ತ ಕಣ್ಣು ಹುಡುಕುತಿದೆ ನಿನ್ನನ್ನೇ ,
ನನ್ನಲ್ಲಿ ಹುದುಗಿರುವ ಒಳ ಮನಸ್ಸು ಕರೆಯುತಿದೆ ನಿನ್ನ ಕೈ ಬೀಸಿ ,
ನನಗೆ ಕಾಣದಂತೆ ಮಾಯವಾಗಿ ಎಲ್ಲಿ ಅವಿತಿರುವೆ ನೀನು ,
ಕಾತರಿಸುತಿದೆ ನನ್ನೀ ಕಂಗಳು ಯಾವಾಗ ಧನ್ಯವಾಗುವೆ ನಿನ್ನ ಕಂಡು ,
ತಿರುಗಿ ಬರುವೆಯ ಒಮ್ಮೆ ನನಗಾಗಿ ........?

Sunday, October 30, 2011

ತುಂತುರು ಮಳೆ ಹನಿ

ಆಹಾ ಈ ತುಂತುರು ಮಳೆಯಲ್ಲಿ ಬತ್ತದ ತೆನೆಯಂತೆ ನೆನೆನೆನೆದು ,
ನನ್ನೀ ತನು ಮನ ಮೀಡಿಯಿತು ಓ ಮಳೆಯೇ ಮತ್ತೆ ಯಾವಾಗ ಬರುವೆ ನೀ ಎಂದು ,
ಮತ್ತೆ ನಾ ಕಾಯುವೆ ನಿನಗಾಗಿ ನಿ ಬರುವವರೆಗೂ ,
ಬರುವೆಯಾ ಮತ್ತೆ ನನ್ನ ನೆನಪಾಗಿ ಈ ಭುವಿಗೆ ಕಾತರಿಸುತಿದೆ ನನ್ನೀ ಮನ ನಿನ್ನ ಸೇರಲು ....:)

Saturday, September 10, 2011

ಮನಸ್ಸು


"ಇಂದು ನಾನಂದುಕೊಂಡಷ್ಟು ದೂರ ನೀನಿಲ್ಲ...
ನಾನು ಕರೆದರು ನೀ ಬರುವ ಹಾಗಿಲ್ಲ...
ನನ್ನೊಲವೆಲ್ಲ ನೀನೆ ಆದರೂ ನೀನಿಲ್ಲದೇ ಏನು ಇಲ್ಲಿಲ್ಲ ನರಳುತಿದೆ ಪ್ರೀತಿಯಲಿ ಮನವು ಇಂದು…"

ಅಮ್ಮ


ನೋವೊಳಗೆ ಅಳುವ ಮುಗ್ಧ ಮಗು ನಾನಾಗಿದ್ದೆ …
ಅಳುವ ಮರೆಸಿ ಲಾಲಿ ಹಾಡುವ ಹೃದಯ ನೀನಾದೆ.
ಅಮ್ಮಾ ನಿನಗಿಂತ ಮಿಗಿಲಾದ ಪ್ರತ್ಯಕ್ಷ ದೇವರಿಲ್ಲ ...
ನಿನಗೆ ನೀನೆ ಸಾಟಿ ಈ ಜಗದಲಿ......
ನೀನಿರದ ಜಗವ ಊಹಿಸಲು ಸಾದ್ಯವೇ......?

ಸ್ನೇಹ

ನಯನ ನಿನ್ನವಾದಲ್ಲಿ ಅದರೊಳಗಿನ ಕಂಬನಿ ನನ್ನದಾಗಲಿ ಹೃದಯ ನಿನ್ನದಾದಲ್ಲಿ ಅದರ ಮಿಡಿತ ನನ್ನದಾಗಿರಲಿ ಸಾಧನೆ ನಿನ್ನದಾದಲ್ಲಿ ಅದರ ಮೆಟ್ಟಿಲು ನಾನಾಗಿರಲಿ ನಮ್ಮ ಸ್ನೇಹ ಎಷ್ಟು ಆಳವೆಂದರೆ ನಿನ್ನ ಉಸಿರು ನಿಲ್ಲುವಂತಾದಾಗ ಸಾವು ನನ್ನದಾಗಿರಲಿ......... ಓ ಸ್ನೇಹಿ ನಿ ಎಂದೆಂದೂ ಅಮರ ಈ ಜಗದಲಿ ....

ಕನಸು


ನಿನ್ನ ಕನಸುಗಳನ್ನೆಲ್ಲ ಬರೆಬರೆದು
ಕಾಗದದ ದೋಣಿ ಮಾಡಿ
ನಿನ್ನತ್ತ ತೇಲಿಬಿಟ್ಟಿದ್ದೇನೆ ಗೆಳತಿ
ಭವಿಷ್ಯದ ನದಿಯೊಳಗೆ ತೇಲಿಬಂದು
ನಿನ್ನ ಬಾಳಿನ ದಡವ ತಲುಪಬಹುದು ಅವು
ನೆನೆದು ಮುದ್ದೆಯಾಗಿವೆಯೆಂದು ಬಿಸಾಡ ಬೇಡ
ಎಚ್ಚರವಾಗಿ ಬಿಡಿಸಿ ಓದು ಸಾಕು ಒಮ್ಮೆ
ಅವು ಪೂರ ನಿನ್ನವು ಜೊತೆಗೆ ನನ್ನವು .......:)

ಪ್ರೀತಿ


ನನ್ನ ಮನಸಿನ ಮೌನ ಭಾವನೆ ನೀನು
ನನ್ನ ಹೃದಯದ ಪ್ರತಿಬಡಿತದ ಶಬ್ದ ನೀನು
ನನ್ನೆದೆಗೂಡ ಹೊಕ್ಕಿಬಂದ ಪ್ರೀತಿಯ ಭಾವಬಿಂದು ನೀನು
ನಾ ನಡೆವಾಗ ಸದ್ದಿಲ್ಲದೆ ಬೆನ್ನತ್ತಿದ ಪ್ರತಿಬಿಂಬ ನೀನು
ಎಂದೆಂದೂ ನನ್ನ ನೆನಪಿನಂಗಳದಲ್ಲಿ ಮಾಯವಾಗದ ಛಾಯೆ ನೀನು.....

ಗೆಳತಿ

ನನ್ನಯ ಸುಂದರವಾದ ಜೀವನ ಸಾಗುತ್ತಿರಲಿ ಹೀಗೆ
ನಾ ಕಾಯುವೆ ನಿನಗಾಗಿ ಜೀವನದ ತೀರದಲ್ಲಿ
ಮರಳಿ ಬಾರದಿರು ಗೆಳತಿ ನಾ ಕಾಯುವ ತೀರದೆಡೆಗೆ
ಅನಿಸುತಿದೆ ನನಗೆ ಕಾಯುವುದರಲ್ಲೇ ಸುಖವಿದೆಯೆಂದು..