Sunday, December 9, 2012

!.... ನೆನಪುಗಳ ನಡುವೆ ....!




ನನ್ನೀ ಹೃದಯದ ಸವಿ ಮಾತು ಕೇಳೋಮ್ಮೆ ಗೆಳತಿ 
ಮನಸ್ಸಿನಾ  ಪುಟಗಳ ನಡುವೆ ನೆನಪಿನ ಅಕ್ಷರ ನೀನು 
ಹಾಗೇ ನೀ ಗೀಚಿ ಹೋದೆ ಪ್ರೀತಿಯ ಸವಿಗಾನವನ್ನು
ಗುನುಗುವುದು ಈ ಭಾವ ರಾಗ ತಾಳದ ಅರಿವಿಲ್ಲದೆ 

ಹಿಡಿದಿರುವೆ ಪ್ರೀತಿಯ ಹನಿಯನ್ನ ಹೃದಯದ ಚಿಪ್ಪಿನಲಿ
ಮತ್ತೆ ನೀ ಬರುವೆ ಪ್ರೀತಿಯ ಉಣಬಡಿಸಲೆಂಬ ಭರವಸೆಯಲಿ 
ಇದ್ದು ಬಿಡು ಗೆಳತಿ ನೆನಪಾಗಿ ನನ್ನೆದೆಯ ಬೆಚ್ಚನೆಯ ಗೂಡಲ್ಲಿ 
ಬಾಳ ಪಯಣವು ಸಾಗುತಿದೆ ನಿನ್ನದೇ ಹುಸಿಗನಸ ನೀರಿಕ್ಷೆಯಲಿ 

ನನ್ನ ಮನದ ಬಾಗಿಲನು ತೆರೆದು ಕಾದಿರುವೆ ನಾ 
ಒಮ್ಮೆ ತೊಳ್ತೆಕ್ಕೆಯಲಿ ಬಂದಿಸುವಾಸೆ ನಿನ್ನನ್ನು 
ನಿನಗಾಗಿ ಕಾಯದ ಕ್ಷಣವಿಲ್ಲ ನೆನಪಿಸದ ದಿನವಿಲ್ಲಾ 
ಅನಿಸುತಿದೆ ಯಾಕೋ ಕಾಯುವುದರಲಿ ಅರ್ಥವಿಲ್ಲ    

ಬೆಳದಿಂಗಳ ರಾತ್ರಿಯಲಿ ನಿನ್ನದೇ ನೆನಪಿನಲ್ಲಿ 
ಇಬ್ಬನಿಯ ಮಬ್ಬಿನಲಿ ತಬ್ಬಿತು ನಿನ್ನಾ ಒಲವನ್ನಾ
ಇರುಳ ಕತ್ತಲೆ ಸರಿದು ಬೆಳಕು ಮೂಡಲು ಬಾನಲ್ಲಿ 
ಅರ್ಥವಾಯಿತು ಗೆಳತಿ ಅದು ನಾ ಕಂಡ ಕನಸೆಂದು ...!!

Thursday, December 6, 2012

♥ ಅರ್ಥವಾಗದ ಭಾವ ♥



ಏನೆಂದು ಬಣ್ಣಿಸಲಿ ಗೆಳತಿ ನಿನ್ನೀ ಮಧುರ ಪ್ರೀತಿಯ 
ಮನದಲಿ ಅಚ್ಚಳಿಯದೆ ಮೂಡಿದೆ ಹೆಜ್ಜೆಯಾ ಗುರುತು
ತುಟಿಯಂಚಲಿ ಗೀಚಿರುವೆ ನಿನ್ನಯಾ ಹೆಸರಾ 
ನಯನದಲಿ ಬಿಡಿಸಿಹೆ ನಿನ್ನದೇ ಮೋಹಕ ಚಿತ್ತಾರವ 

ಬರಿದಾದ ಹೃದಯದಂಗಳದಲಿ ಪ್ರೀತಿಯ ಚುಕ್ಕಿಯಿಟ್ಟು 
ಅರಿವಿಲ್ಲದೆ ಒಲವಿನಾ ಸುಂದರ ರಂಗೋಲಿಯ ಬರೆದೆ
ಮೌನದಲೇ ನಾ ಸೆರೆಯಾದೆ ನಿನ್ನಯಾ ಕಂಗಳ ಕರೆಗೆ 
ಹೃದಯದಿ ಪ್ರೀತಿಯ ತುಂಬಿ ಹರಿಸೋ ಪ್ರೇಮಿ ನಾನಾದೆ 

ನನ್ನೀ ಮನದಲ್ಲಿ ಅರ್ಥವಾಗದ ಹೊಸ ಭಾವನೆಯ ಬೆಳೆಸಿದೆ 
ಮುಗುಳನಕ್ಕೂ  ಸುಮ್ಮನಾದೆ ಅದರ ಅರ್ಥವಾ ಹೇಳದೇ  
ಹುಡುಕುತಾ ಹೊರಟಿತು ನನ್ನೀ ಮನವು ಭಾವದಾ  ಹಿಂದೆ 
ಸನಿಹದಿ ನೀ ಆವರಿಸಿ ಹರಿಸಿದೆ  ಅಮೃತ ಸುಧೆಯಾ 

ಕದಿಯಬೇಡ ಗೆಳತಿ ನೀ ನನ್ನ  ಇರುಳ ನಿದಿರೆಯ
ಮರೆಯಾಗಿ ಕಾಡದಿರು ನೀ ಮತ್ತೆ ಮತ್ತೆ ನೆನಪಾಗಿ
ಬಾ ನನ್ನೊಲವೇ ಸನಿಹಕೆ ಈ ನೆನಪ ಕರಗಿಸಿ    
ನಡೆಯಲಾರೆ ಏಕಾಂಗಿಯಾಗಿ ಈ ಬಾಳ ಪಯಣದಲಿ ...!!

Monday, October 29, 2012

♥.. ಕಣ್ಣಂಚಿನ ಭಾವ ..♥




ನಿನ್ನಾ ಕಣ್ಣಂಚಿನ ಭಾವವು ಸೆಳೆದಿದೆ ತನುವನು 
ನಸುನಾಚಿಕೆಯ ಕುಡಿನೋಟಕೆ ಸೋತಿದೆ ಮನವು 
ಕಣ್ಣ ರೆಪ್ಪೆಯು ಬಾ ಎಂದು ಕರೆದಿದೆ ಒಲವನ್ನಾ
ಹೃದಯದ ಭಾಷೆ ಅರುಹುತಿದೆ ಅಂತರಾಳದ ಪ್ರೀತಿಯನ್ನಾ.

ಅರಿವಿಲ್ಲದೆ ಹೃದಯದ ಮೌನದಾ ಮಾತುಗಳು
ಹಾಗೆ ಮೆಲ್ಲನೆ ಗುನುಗುತಿದೆ ನಿನ್ನದೇ ಹೆಸರನ್ನಾ
ನಿನ್ನಾ ಸವಿಗೆನ್ನೆಯ ಮೇಲೆ ನಲಿದಾಡುವ ಮುಂಗುರುಳು
ಕೂಗಿ ಕರೆಯುತಿದೆ ನನ್ನಲಿ ಅನುರಕ್ತನಾಗೆಂದು

ಕನಸಲ್ಲಿ ಬಂದು ಮನಸಲ್ಲಿ ಅನುರಕ್ತಳಾದೆ
ತಂಗಾಳಿಯಂತೆ ಬಿಸಿ ನನ್ನುಸಿರಾಗಿ ಹೋದೆ
ಆಗಂತುಕಳಾಗಿ ಬಂದು ಮನದರಸಿಯಾದೆ
ಹೇಗೆ ಮರೆಯಲಿ ಗೆಳತಿ ನನ್ನ ಜೀವಕೆ ಉಸಿರಾದ ಒಲವ

ಭಾವಾಂತರಾಳದ ಭಾವಕು ಮೀರಿದ ಪ್ರೀತಿ ನಿನ್ನದು
ಸಾಲದು ಪದಗಳು ಬಣ್ಣಿಸಲು ನಿನ್ನಾ ಒಲವಿನ ಆಳವ
ಮಾತುಗಳೇ ಮರೆಯಾಗಿವೆ ಮೌನದಾ ಅಲೆಗಳ ನಡುವೆ
ಬಾ ಗೆಳತಿ ಅಪ್ಪಿ ಮುದ್ದಾಡಿಬಿಡು ಒಮ್ಮೆ ಈ
ಜೀವದಾ ಜೀವ ಕಣ್ಮುಚ್ಚಿ ಮರೆಯಾಗುವ ಮುನ್ನಾ..!!

Monday, October 8, 2012

♡♥♡ ಗರಿ ಬಿಚ್ಚಿ ಹಾರು ಬಾ ಗೆಳತಿ ♡♥♡



ಮುಗ್ದ ನಯನಗಳು ನಸುನಾಚಿ ಹುದುಗಿವೆ 
ಆ ನಿನ್ನ ಹೊಂಬಣ್ಣದ ಮುಂಗುರಳ ಮರೆಯಲ್ಲಿ 
ನಿನ್ನಾ ಸವಿಗೆನ್ನೆಯು  ನಾಚಿಕೆಯಿಂದ ರಂಗೇರಿ 
ನನ್ನನ್ನು ಸೆಳೆಯುತಿದೆ  ಅರಿಯದೆ ನಿನ್ನತ್ತ.. 

ನೈದಿಲೆಯು ಕಾತರಿಸಿದಂತೆ ಚಂದ್ರಮನ ಕುಡಿನೋಟಕೆ 
ಪರಿತಪಿಸುತಿದೆ  ಎನ್ನಿ ಮನವು ಹೃದಯದಾ ಚಿಪ್ಪಿನಲ್ಲಿ 
ಸದ್ದಿಲದೆ ಬಂದೊಮ್ಮೆ ಮನದ ಸುಂದರ ಬಯಕೆಗಳ ಇಡೇರಿಸಿ
ಬಿಡಿಸು ಬಾ ಬಣ್ಣದಾ ರಂಗೋಲಿಯ ಭಾವಗಳ ಚಿತ್ತಾರದಲಿ  

ಭಾವ  ಯಾನದಲಿ  ನೆನಪಿನಾ ನೌವ್ಕೆಯನೆರಿ 
ಸುಪ್ತ  ಮನದ ತೀರಕೆ ನಿನ್ನರಸಿ ಬಂದಿಹೆನು
ಎನ್ನೋಲವಿನ ಪಿಸುಮಾತು ಕೇಳಿಸದೆ ನಿನ್ನಾ ಮನಕೆ 
ಮನದ ಮೌನವ ಮರೆಯಾಗಿಸಿ ಹರಿಸು ಬಾ ಪ್ರೀತಿಯ ಒಲವ     

ಕನಸಿನಲೂ ಮನಸಿನಲೂ ಗುನುಗುತಿದೆ ನಿನ್ನದೇ ಸವಿನೆನಪು
ಏನೆಂದು ಅರುಹಲಿ ಭಾವಾನ್ತರಾಳದ ಭಾವದ ತಳಮಳವ
ಗರಿ ಬಿಚ್ಚಿ ಹಾರು ಬಾ  ಗೆಳತಿ ಎನ್ನೆದೆಯ ಬಾಂದಳದಿ 
ಬಿಸಿಯುಸಿರಿಗೆ ಪ್ರೀತಿಯ ತಂಪೆರೆವ ತಂಗಾಳಿಯಂತೆ ..!!

Sunday, September 9, 2012

♥♥.....ಪ್ರೀತಿಯ ಗಾನಲಹರಿಗೆ.....♥♥





ಹೃದಯದಿ ನೀ ಬರೆದೆ ಹೊಸದೊಂದು ಕವಿತೆಯ 
ಮನದ ಮೌನ ಗುನುಗುತಿದೆ ಇಂಪಾದ ರಾಗವ 
ಭಾವವಿಂದು ಮಿಡಿಯುತಿದೆ ಪ್ರೀತಿಯ ಗಾನಲಹರಿಗೆ
ನೆನಪೆಂಬ ನೆಪ ಮಾಡಿ ಒಮ್ಮೆ ಬಾ ಗೆಳತಿ 

ಅಂದು ನಿ ಗೀಚಿದೆ  ಒಲವಿನ ರಂಗೋಲಿಯ 
ಎನ್ನೆದೆಯ ಭಾವನೆಗಳ ಭಾವ ಮಂದಿರದಲ್ಲಿ 
ಮೌನದಾ  ಜೊತೆಗೆ ನಾಚಿಕೆಯ ಕುಡಿನೋಟವ ಬಿರಿ 
ಹುಚ್ಚು ಮನಸಿನ ಸಾಗರದಲಿ ಪ್ರೀತಿಯಾ ಅಲೆ ಎಬ್ಬಿಸಿದೆ 

ಕಂಪಿಸುತಿವೆ ಅಂತರಾಳದ ಭಾವಗಳು ನಿನ್ನೇದೆ ಮಿಡಿತಕೆ 
ಮನದ ಅಂದಕಾರವ ಮರೆಸಿ ಕನಸಿನಾ ಬೆಳಕ ಚೆಲ್ಲಿ 
ನಿಲಾಕಾಶದಲಿ ಹೊಳೆವ ಪೌರ್ಣಮಿಯ ಚಂದ್ರನಂತೆ 
ನನ್ನ ಕನಸಿನ ಕನ್ನಡಿಯಲಿ ನಿನ್ನ ಕಂಗಳ ತೋರಿದೆ  

ನಿನ್ನೊಲವಿನ  ಪದದ ಪಲ್ಲವಿಯ ಕೇಳದೆ 
ಮಂಕಾಗಿದೆ ಮನದ ಮಲ್ಲಿಗೆಯ ಎಸಳುಗಳು 
ಹೃದಯದಲ್ಲಿ ಅರಳಿ ಮನವೆಲ್ಲ ಘಮ್ಮೆನ್ನಿಸಿದ ಪ್ರೀತಿಯಾ ಹೂ 
ಮಾಸಿ ಮರೆಯಾಗುವ ಮುನ್ನ ಬಂದೊಮ್ಮೆ ಸೇರು ಗೆಳತಿ ....!!!!

Tuesday, August 28, 2012

!!! ಕಣ್ಣಂಚಿನ ಹನಿ ಜಾರುವ ಮುನ್ನ !!!



ಏಕೆ ನೀ ಹೀಗೆ ಮೌನವಾಗಿ ಕರಗಿ ಹೋದೆ 
ನನ್ನೀ ಮನದ ದುಗುಡ ಅರಿತು ದೂರಾದೆಯಾ
ಅಂದು ಹೃದಯದಿ ಪ್ರೀತಿಯ ದೀಪ ಹಚ್ಚಿದೆ ನೀ 
ಇಂದು ಮನದ ನೆಮ್ಮದಿಯ ದೋಚಿದೆ ಏಕೆ 

ಹೇಗೆ ಕಳೆಯಲಿ ನಲ್ಲೆ ನೀನಿಲ್ಲದ ವೇಳೆ 
ಜಾತಕಪಕ್ಷಿಯಂತೆ ಕಾದಿಹೆ ನಾ ನಿನ್ನ ಅಗಮನಕಾಗಿ 
ಬೇಕಾಗಿದೆ ನೊಂದ ಮನಕಿಂದು ನಿನ್ನ ತೋಳ ಆಸರೆಯು 
ಬಾ ಗೆಳತಿ ಕಂಪ ಬೀರುವ  ಮನದ ಮಲ್ಲಿಗೆಯಾಗಿ 

ಭಾರವಾಗಿದೆ ನನ್ನೀ ಬಿಸಿಯುಸುರು 
ನಿನ್ನಯ ನೆನಪಿನ ಬೆಗುದಿಯಲಿ ಬೆಂದು 
ಪ್ರೀತಿಯಲಿ ಕುರುಡಾಗಿವೆ ನನ್ನೀ ನಯನಗಳು 
ಆದರು ನಾ ಕತ್ತಲಲಿ ಹುಡುಕುತಿಹೆ ನಿನ್ನ ಪ್ರೀತಿಯ ನೆರಳ 

ನೀನಿಲ್ಲದೆ ಈ  ಮನವಿಂದು ಬರಿದಾಗಿದೆ 
ಮೌನದಲ್ಲೂ ನನ್ನೀ ಪ್ರೀತಿ ಕೂಗಿ ಕರೆದಿದೆ 
ಪ್ರತಿ ಉಸಿರು ನೆನೆಯುತಿದೆ ನಿನ್ನನ್ನೇ 
ನೀನೇ ಬರಿ ನೀನೇ ಜೀವದಾ ಪ್ರತಿ ಹೆಜ್ಜೆ ನೀನೇ

ತಿರುಗಿ ಬಾ ಗೆಳತಿ ನನ್ನೀ ಬಾಳ ಪುಟದಲಿ 
ಹೇಳದೆ ಹುದಿಗಿಹ ಮಾತೊಂದಿದೆ ಭಾವದಲಿ 
ನನ್ನಲಿ ನಾನಿಲ್ಲ ನೀನೆ ಆವರಿಸಿಹೆ ನನ್ನೋಳಗೆಲ್ಲ 
ಹರಿಸು ನೀ ಒಲವ ಸುಧೆಯ ಕಣ್ಣಂಚಿನ ಹನಿ ಜಾರುವ ಮುನ್ನ ....



Wednesday, August 15, 2012

♥♥... ಪ್ರೀತಿಯ ಗೆಳತಿ ...♥♥


ಮನದ ಮರೆಯಲ್ಲಿ ಹುದುಗಿಹುದು 
ಬೆಟ್ಟದಷ್ಟು ಪ್ರೀತಿಯು ಗೆಳತಿ 
ಪದಗಳೇ ಬರುತ್ತಿಲ್ಲ ತುಟಿಯಂಚಲಿ 
ಹೇಗೆ ನಿವೆದಿಸಲಿ ನಾ ನಿನಗೆ ಅದನು 

ಆ ನಿನ್ನ ಕಣ್ಣಂಚಿನ ನಸು ನಾಚಿಕೆಯ ಕುಡಿನೋಟ
ಅರಿಯದೆ ಬಂದು ತಾಕಿದೆ ಎನ್ನೆದೆಯ ಪ್ರೀತಿಯ ಕದವ 
ಹುಚ್ಚೆದ್ದು ಕುಣಿಯುತಿವೆ ನೊರೆಂಟು ಮಧುರ ಭಾವಗಳು 
ಅರಿತು ನೀ ಯಾಕೆ ಹೀಗೆ ಮೌನವಾಗಿ ಕರಗಿ ಹೋದೆ  

ನೀನಿಲ್ಲದೆ ಮಾಸಿ ಹೋಗಿದೆ ನನ್ನಯಾ ಮನವು
ಬಂದು ನೀ ಒಲವಿನ ಬಣ್ಣ ಬಳಿಯುವೇಯಾ
ಖಾಲಿ ಖಾಲಿ ಬಿಳಿ ಹಾಳೆಯಂತಿದೆ ನನ್ನೀ ಜೀವನ 
ಪ್ರೀತಿಯ ಪದ ಗೀಚಿ ಅದಕೊಂದು ಅರ್ಥ ನೀಡೆಯಾ

ಕಣ್ಣ ರೆಪ್ಪೆಯ ಮುಚ್ಚೇ ನಿನ್ನದೇ ಸವಿಗನಸು 
ಕಣ್ತೆರೆದು ನೋಡಿದರೆ  ನಿನ್ನದೇ ಛಾಯೆ
ಕನಸಲ್ಲೂ ಮನಸಲ್ಲೂ  ಎಲ್ಲೆಲ್ಲೂ  ನೀನೇ
ಹೇಗೆ ಮರೆಯಲಿ ಗೆಳತಿ ನಿನ್ನಯಾ  ಪ್ರೀತಿ ...!!!!



Thursday, August 9, 2012

♥♥ ಹೇಗೆ ನಾ ಮರೆಯಲಿ ಗೆಳತಿ ♥♥



ಏಕೋ ನಾ ಅರಿಯೆ  ಗೆಳತಿ 
ಕಣ್ಣಲ್ಲಿ ಮೂಡಿದೆ ನಿನ್ನದೇ ಬಿಂಬ 
ಸುಳಿಯುತಿದೆ ನಿನ್ನದೇ ಹೆಸರು
ನಸುನಾಚುತ ತುಟಿಯಂಚಿನಲಿ 

ಮನದಲ್ಲಿ ಹಾಗೆ ಅಚ್ಚಳಿಯದೆ ನಿಂತಿದೆ 
ಅಂದು ನಿನಾಡಿದ ಸವಿ ಮಾತುಗಳು 
ಉಸಿರಿಲ್ಲ ನನ್ನಲ್ಲಿ ಇಂದು  ಬದಲಾಗಿ 
ನೀ ಆವರಿಸಿಹೆ ಕಣ ಕಣದಲ್ಲೂ  

ಪ್ರೀತಿಯು ಅರಳಿದೆ ಈ ಪುಟ್ಟ  ಹೃದಯದಲಿ   
ಜೀವದಾ ಜೀವ ಸೇರಿದೆ ನಿನ್ನಯಾ ಎದೆ ಬಡಿತದಲಿ
ಹುಚ್ಚು ಮನವಿಂದು ಬಯಸುತಿದೆ ಒಲವಿನ ಆಸರೆಯ 
ಕಾಣದಾಗಿದೆ ಬೇರೇನೂ ನಿನ್ನ ಪ್ರೀತಿಯ ಹೊರತು 

ಮಾತಾಡೋ ಸಮಯದಲಿ ಮೌನಿ ನಾನಾದೆ
ಪ್ರೀತಿ ಮನದಲ್ಲಿ ಅರಳಿದಾಗ ಹೇಳಲು ನಸುನಾಚಿದೆ
ಸನಿಹ ನೀ ಬಂದಾಗ ನನ್ನಲ್ಲೇ ನಾ ಕಳೆದು ಹೋದೆ 
ಹೇಗೆ ನಾ ಮರೆಯಲಿ ಗೆಳತಿ ನನ್ನುಸಿರೇ ನಿನಾಗಿರಲು....!!!




Saturday, July 28, 2012

ಒಲವಿನ ಪ್ರೇಮ ಗೀತೆಯಾ

ಓದು  ಬಾ ಓ  ಗೆಳತಿ 
ಒಲವಿನ ಪ್ರೇಮ ಗೀತೆಯಾ
ಅಂದು ನೀ ಬರೆದು ಬಚ್ಚಿಟ್ಟೆ 
ಸುಮ್ಮನೆ ಎನ್ನೆದೆಯ ಗೂಡಲ್ಲಿ

ಮನವಿಂದು ಗುನುಗುತಿದೆ 
ಸಾಹಿತ್ಯದ ಅರಿವಿಲ್ಲದೆ 
ಹಾಡು ಬಾ ನೀ ಗೆಳತಿ 
ಇಂಪಾದ ದ್ವನಿಯಲ್ಲಿ 

ಹೇಳುತಿದೆ ಮನವಿಂದು 
ಸನಿಹ ನೀನಿರುವೆ ಎಂದು
ಕಾಯುತಿದೆ ಒಲವಿಂದು
ನಿನ್ನ ಸೇರಲೆಂದು ....!!!

Friday, July 20, 2012

!!!! .. ♥♥ ಬಾ ಗೆಳತಿ ♥♥ ..!!!!



ಆಗಸದಿ ಪೌರ್ಣಮಿಯ ಚಂದಿರನು 
ಮೆಲ್ಲಗೆ ಮಂದಹಾಸವ ಚೆಲ್ಲಿಹನು 
ಬೀಸುತಿಹ ಹಿತವಾದ ತಂಗಾಳಿಯು 
ಮಲ್ಲಿಗೆಯ ಕಂಪ ಪಸರಿಸಿಹುದು 

ಏಕೋ ಏನೋ ಅರಿಯೆ ನಾ ಇಂದು 
ನನ್ನೀ ಹೃದಯದ ವೀಣೆ ಮಿಡಿಯುತಿದೆ 
ಕಾಣದ ಕೈ ಮೆಲ್ಲನೆ ಸವರಿ 
ಮೋಹದ ರಾಗ ಕಂಪಿಸುತಿದೆ 

ಅಂತರಂಗದ ಗೊಡಲ್ಲಿ ಅವಿತಿದ್ದ
ಹೊಸ ಭಾವನೆಯು ಗರಿ ಗೆದರಿ 
ಉಲ್ಲಾಸದಿ ಮನದ ತುಂಬೆಲ್ಲ 
ಹಾವ ಭಾವದಿ ಹಾರಿ ನಲಿಯುತಿದೆ 

ಭಾವ ತುಂಬಿ ಹೃದಯ ಬಿಚ್ಚಿ 
ಮನದ ಮೌನದ ಮಾತು 
ತುಟಿಯಂಚಲಿ  ತುಸು ನಸುನಾಚಿ
ಕೈ ಬಿಸಿ ಕರೆಯುತಿದೆ ನಿನ್ನನ್ನೇ 

ಬಾ ಗೆಳತಿ ಬಂದೊಮ್ಮೆ ಬಿಗಿದಪ್ಪು 
ನಿನ್ನೀ ಇನಿಯನ ತೋಳ ತೆಕ್ಕೆಯನು 
ಸಾಗುವ ನಾವು ಬಾಳ ದೋಣಿಯನೇರಿ 
ಪ್ರೀತಿ ಪ್ರೇಮದ ಮಧುರ ಸಾಗರದಿ......... !!!!



Wednesday, July 18, 2012

!!!! ದೂರ ತೀರದ ಯಾನ !!!!





ಮನದಂತರಾಳದಲಿ ಗರಿಗೆದರುತಿದೆ 
ನೊರೆಂಟು ಬಣ್ಣ ಬಣ್ಣದ ಚಿತ್ತಾರಗಳು
ಹೃದಯದಲಿ ಹಾಗೆ ಗೂಡು ಕಟ್ಟಿದೆ
ಪ್ರೀತಿ ಪ್ರೇಮಗಳ ಮಧುರ ಬಾಂಧವ್ಯವು

ಕಂಡು ಕಾಣದೆ ಸುಮ್ಮನೆ
ಮರೆಯಾದ ಸವಿಗನಸುಗಳು
ಹಾಗೆ ಹುದುಗಿ ಹೋಗಿವೆ
ಅಂತರಂಗದ  ಭಾವನೆಗಳಲಿ

ಎಳೆ ಎಳೆಯಾಗಿ ಹರಿದು ಬರುತಿವೆ
ನೆನಪಿನ ಒಡಲಾಳದಿಂದ
ಅಂದು ಮೌನದಲ್ಲೇ ಅಳಿದು ಹೋದ
ಆ ಸುಂದರ ಕಾವ್ಯಗಳು

ಸಾಗುತಿದೆ  ಜೀವನದ ಪಯಣವು
ಸಾಗರದೀ ತೇಲುವ ನಾವೆಯ ಹಾಗೆ
ನಾವಿಕ ನೀನು ಪಯಣಿಗ ನಾನು
ಅರಿಯೆ ನಾನಿಂದು ಎಂದು ಸೇರುವೆನೆಂದು
 ಆ  ದೂರ ತೀರದ ಯಾನವ .....!!!!



Monday, July 9, 2012

ಎನ್ನ ಬಾಳ ಒಲವಿನಾ ಪುಟ ...!!!




ಅದ್ಹೇಗೋ ನನಗರಿವಿಲ್ಲದೆ ಬಂದು ಸೇರಿತು 
ನಿನ್ನಯಾ ಪ್ರೀತಿ ಎನ್ನೆದೆಯ ಮಂದಿರವ 
ಮೂಡಿತು ಹೃದಯಾಂತರಾಳದಲಿ 
ಏನೋ ಹೊಸದೊಂದು ಸುಂದರ  ಅನುಭವ 

ಪೌರ್ಣಮಿಯ ಚಂದಿರನು ನಸುನಾಚಿ ಕರಗಿಹನು 
ನಿನ್ನಾ  ತಾವರೆಯ  ಮೊಗದ ಸೆಳೆತಕೆ 
ಮೆಲ್ಲನೆ ಬೀಸುತಿಹ ತಣ್ಣನೆಯ ತಂಗಾಳಿಯು 
ಹುಚ್ಚೆಬ್ಬಿಸಿದೆ ಅವಿತಿರುವ ಮನದ ಭಾವನೆಗಳ  

ಅದೇಕೋ ಕಾಡುತಿದೆ ಪರಿ ಪರಿಯಾಗಿ 
ಆ ನಿನ್ನ ಕುಡಿನೋಟದ ಮೋಹಕ  ಸೆಳೆತ 
ದೂರದಿ ಹಾಗೇ  ಕೈ ಬೀಸಿ ಕರೆಯುತಿದೆ 
ತುಟಿಯಂಚಿನ ಕಿರು  ಮುಗುಳ್ನಗೆಯು

ಕರಗಿ ಹೋದೆ ನಾನಿಂದು ನನ್ನೇ ನಾ ಮರೆತು
ನಿನ್ನಯ ಪ್ರೀತಿಯ ಕಡಲಾಳದಲ್ಲಿ 
ಹರಿಸು ಬಾ ಗೆಳತಿ ಅಮೃತ  ಸುಧೆಯಾ 
ಎನ್ನ ಬಾಳ ಒಲವಿನಾ ಪುಟದಲಿ ...!!! 

Thursday, June 21, 2012

ಹೊಸದೊಂದು ಭಾವ



ಮನದಲ್ಲಿ ಹಾಗೆ ಗುನುಗುವುದು ಹಿತವಾದ ಹಾಡೊಂದು
ತುಟಿಯಂಚಲಿ ಮೆಲ್ಲನೆ  ಹೊರಬರಲು ನಿನ್ನಯಾ ಹೆಸರು
ಸೆರೆಹಿಡಿದಿರುವೆ ನಾ ನಿನ್ನಯ ಚೆಲುವ  ನನ್ನೀ ಕಂಗಳಲಿ
ಹೇಳದೆ ಮರೆಯಾಗದಿರು ನೀ ಕಣ್ಣೀರ ಹನಿಯ ಜೊತೆಗೆ

ಏಕೋ  ಏನೋ  ಅಂದು ನಿನ್ನಯಾ ಕೈ ಸೋಕಲು
ಹೃದಯದಲಿ ಮೂಡಿದೆ ಹೊಸದೊಂದು ಭಾವ
ನಿಂತಲ್ಲೇ ನಿಲುತಿಲ್ಲ ಮನಸಿನಾ ಭಾವನೆಗಳು
ಅತ್ತಿತ್ತ ಹುಡುಕುತಿವೆ ಎಲ್ಲಿರುವೆ ನೀನೆಂದು ....

ಅಂದು ಸೋತು ಮೌನವಾಯಿತು ನನ್ನೆಲ್ಲ ಮಾತುಗಳು
ಮನದಲ್ಲೇ ಬಚ್ಚಿಟ್ಟೆ ನನ್ನೆಲ್ಲ ಕನಸುಗಳ ನಿನಗಾಗಿ
ಭಾರವಾಗಿದೆ ಮನವಿಂದು ನಿನ್ನಯಾ ಪ್ರೀತಿ ಕಾಣದೆ
ಹೇಳೇ ಗೆಳತಿ ಯಾವಾಗ ನೀ ಬರುವೆ ನನ್ನೀ ಹೃದಯ ಮಂದಿರಕೆ ...!!!!



Sunday, May 27, 2012

ನನ್ನಂತರಂಗದ ಮಾತು...



ಎನ್ನಯಾ ಮುಗ್ದ  ಮನವಿಂದು ತೇಲುತಿದೆ 
ನಿನ್ನಾ ಅನುರಾಗದ ಪ್ರೀತಿಯಾ ಅಲೆಗಳ ಮೇಲೆ 
 ಆ  ನಿನ್ನಯ ತುಟಿಯಂಚಿನಲಿ ಮೂಡಿದ
ಮೋಹದಾ ಮುಗುಳ್ನಗೆಯು ಕೊಲ್ಲುತಿದೆ ಎನ್ನಾ  

ಹೇಳಲು ತವಕಿಸುತಿದೆ ಭಾರವಾದ  ಹೃದಯ
ತನ್ನಲ್ಲಿ  ಹಾಗೆ  ಬಚ್ಚಿಟ್ಟ ಮನದಾಳದ ಒಲವಾ 
ಯಾಕೋ ಏನೋ ತಡೆಯುತಿದೆ  ಭಾವನೆಗಳನು
 ಈ ಕಣ್ಣಂಚಲಿ ಅರಿಯದೆ ಮೂಡಿದ ನಸುನಾಚಿಕೆಯು 

ಇನ್ನು ಅರ್ಥವಾಗದೇ ನನ್ನಂತರಂಗದ ಮಾತು ನಿನಗೆ 
 ಹೇಳು  ಓ ನನ್ನ  ಗೆಳತಿ ಏಕೆ ನೀ ಹೀಗೆ  ಮೌನಿಯಾದೆ....!!!!



Saturday, May 5, 2012

ಹೊಸ ಪರಿಭಾಷ್ಯವ ಗೀಚಿದವಳು ....


ನನ್ನ ಜೀವನದ  ಕಣ್ಣಾಗಿ ಬಾ ಗೆಳತಿ ರೆಪ್ಪೆಯಂತೆ ಸದಾ ಕಾಯುವೆ ನಾ
ಒಲವಾಗು ನೀ ಈ ಜೀವದಾ ಜೀವಕೆ ಉಸಿರಾಗಿ  ಜೊತೆಯಲ್ಲಿ ಬರುವೆ 
ಹೃದಯದ ಗೂಡಲ್ಲಿ ನೀ ಬಿತ್ತಿದಾ ಪ್ರೀತಿಗೆ ತಂಪಾದ ನೀರಾಗಿ ನಾನಿರುವೆ 
ಇಂದು ನಯನಗಳು ಹೇಳುತಿವೆ ಎಸ್ಟೋ ಹೇಳಲಾಗದ ಮನದ  ಮಾತುಗಳ  
ನಿನಲ್ಲವೇ ಗೆಳತಿ ನನ್ನ ಒಲವಿನ ಭಾಷೆಗೆ ಹೊಸ ಪರಿಭಾಷ್ಯವ ಗೀಚಿದವಳು ......


Thursday, May 3, 2012

ಹೃದಯ ವೀಣೆ ಮೀಡಿಯುವುದು........



ಹೆಜ್ಜೆ ಹೆಜ್ಜೆಗೂ ನಯನಗಳು ಕಾತರದಿ  ಹುಡುಕುತಿವೆ ಎಲ್ಲಿರುವೆ ನೀನೆಂದು 
ಹೃದಯ ವೀಣೆ ಮೀಡಿಯುವುದು  ನಿನ್ನಯಾ ನೆನಪುಗಳು ಹರಿದಾಡಿದಾಗ
ನೀನಿಲ್ಲದೆ ಮಧುರ  ಮಾತುಗಳು ಹುದುಗಿ ಮಲಗಿಹುದು ಮೌನದಾ ತೆಕ್ಕೆಯೊಳು  
ಭಾವಸಾಗರದಲಿ  ಬಿಸಿಯುಸಿರು  ಪಿಸುದನಿಯಲಿ ಕರೆವುದು ನಿನ್ನಯ ಹೆಸರಾ
ಕಾಡಬೇಡ ಗೆಳತಿ ಬಂದೊಮ್ಮೆ ಮರೆಸಿಬಿಡು ಚಿಂತೆಯಾ ನಿನ್ನಾಪ್ರೀತಿಸಾಗರದಲೆಗಳ ನಡುವೆ .... 



Friday, April 27, 2012

ಮೂಕ ವೇದನೆಯ ಕರಿ ನೆರಳು




ಭಾರವಾಗುತಿದೆ ಈ ಹೃದಯಾ ಜೀವದಾ ಜೀವ  ಕಣ್ಮರೆಯಾದಾಗ 
ದೂರವಾಗುತಿವೆ ಮನಸು ಮನಸುಗಳ ಮೌನದಾ ಮಾತುಗಳು 
ಅರಿಯದೆ ಕಣ್ಣಂಚಲಿ ಕಾಡುವುದು ಮೂಕ ವೇದನೆಯ ಕರಿ ನೆರಳು  
ಮನದ ಮಂದಿರದ  ಕದ ತಟ್ಟದೆ ಭಾವಾಂತರಾಳದಲಿ ಮುಡಿದಾ ಪ್ರೀತಿ  
ಬಡಿಸೇಯಾ ಗೆಳತಿ  ಒಲವಿನಾ ಸುಧೆಯಾ ನೊಂದ ಈ  ಜೀವಕೆ .....


Tuesday, April 24, 2012

ಅಹಂಕಾರದ ಪರೆಯ ತೆರೆದು


ದೀಪ ತಾ ಹೊತ್ತಿ ಉರಿದರು ಮಂದಹಾಸದಿ ಬೆಳಕ  ಚೆಲ್ಲುವುದು ಲೋಕಕೆಲ್ಲಾ 
ಇರುಳಿನಾ ಭಯವಿಲ್ಲ ,ನಿಸ್ವಾರ್ಥದ ನಿಷ್ಕಲ್ಮಶ  ಪಾವಿತ್ರತೆಯ ಸಾಂಕೇತವದು
ಕತ್ತಲ ಪರಿವೆ ಇಲ್ಲದೆ ತನ್ನ ಮೈಯ್ಯ ಸುಟ್ಟು ಅಂದಕಾರವ ಮೆಟ್ಟಿ ನಿಲುವುದು 
ಸಂತಸದಿ  ದಾರೆಯೇರೆವುದು ತನ್ನಯ ಜೀವವ ಪರರ ಜೀವಕೆ ಜೀವವಾಗಿ
ಬೆಳಗು ನೀ ನಂದಾದೀಪವಾಗಿ  ಮನದ   ಅಹಂಕಾರದ ಪರೆಯ ತೆರೆದು .....


 


Tuesday, April 3, 2012

ಆಂತರ್ಯದ ಪ್ರೀತಿ ....♥♥


ನಿನ್ನಯ ಕಣ್ಣಂಚಿನ ಕುಡಿನೋಟಕೆ ಸೋತಿದೆ ನನ್ನೀ ಮನ 
ಭಾವಾಂತರಾಳದಿ ಮೂಡಿದೆ  ಏನೋ ಪ್ರೀತಿಯ ಹೊಸ ಭಾವ   
ಒಲವಿನ  ಮಿಡಿತ   ಹೇಳಬಯಸಿದೆ ಏನನ್ನೋ  ನಿನ್ನಲ್ಲಿ 
ಮರೆಯಾಗುತಿದೆ  ಮನದಾಳದ ಮಾತು ಮೌನದಾ  ಹಿಂದೆ
ನೋಡಲಾರೆಯಾ  ಗೆಳತಿ ಒಮ್ಮೆ ಹೃದಯದಾ ಕಣ್ತೆರೆದು
ಅರ್ಥವಾದಿತೂ  ನಿನಗೆ ನನ್ನಯ  . ಆಂತರ್ಯದ  ಪ್ರೀತಿ ....♥♥


Saturday, March 31, 2012

ದೂರ ತೀರದ ಯಾನಕೆ


ನೆನಪೆಂಬ ಹೃದಯದಲಿ ಭಾಂದವ್ಯದ ಕನಸುಗಳು ಮರೆಯಾಗುವ ಮುನ್ನಾ
ಸೇರುವಾಸೆ  ಮಧುರ ಜೀವನದ  ಪ್ರೀತಿಯ ದೂರ  ತೀರದ ಯಾನಕೆ
ಮೌನದ ಮಾತು ಅವಿತಿಹುದು ಅಂತರಾಳದಲಿ ಅರುಹಲು ಬಚ್ಚಿಟ್ಟ ಪ್ರೀತಿಯ 
ಬಯಸುತಿದೆ ನಿದ್ರಿಸಲು ನಿನ್ನೆದೆಗೊರಗಿ  ನನ್ನಯಾ  ಮುಗ್ಧ  ಮನವಿಂದು
ಸಿಗುವುದೇ ಗೆಳತಿ ನಿನ್ನಯಾ ಪ್ರೀತಿ ಕಮರಿದಾ ಈ ಬಾಳ ಪಯಣಕೆ .....?? 


Monday, March 5, 2012

ಮನದ ವೇದನೆ



ಅರಿಯದೆ ನೀ ಬರೆದೆ ನಿನ್ನ ಹೆಸರ ನನ್ನ ಉಸಿರ ಮಿಡಿತದಲ್ಲಿ
ಅನುಕ್ಷಣವು ನೆನೆನೆನೆದು ಹೃದಯವು ಕೋಗಿ ಕರೆಯುತಿದೆ ನಿನ್ನಾ
ತುಂತುರು ಮಳೆಯ ಹನಿಯಲ್ಲಿ ಕೂತು ಕಂಬನಿ ಸುರಿದಿವೆ ಕಣ್ಗಳು
ಭಾವನೆಯ ಅಂತರಾಳದಲಿ ಮನದ ವೇದನೆಯು ಹೊಯ್ದಾದುತಿದೆ
ಜಾರುತಿದೆ ಜೀವನವು ನೆನಪುಗಳ ಅಲೆಗಳ ನಡುವೆ ತೇಲುತಾ
ಬರುವೆಯಾ ಗೆಳತಿ ಬಾಡಿದಾ ಜೀವಕೆ ಹೊಸ ಚಿಗುರ ತುಂಬಲು ....?




Thursday, February 16, 2012

ಒಮ್ಮೆ ನೋಡು ಬಾ ಗೆಳತಿ....




ಕಣ್ಮುಚ್ಚಿ ಕುಳಿತರು ಅರಿವಿಲ್ಲದೆ ಮೂಡುವುದು ನಿನ್ನದೇ ಛಾಯೆ 


ದೊರವಾದರು ಕಾಡುವುದು ನಿನ್ನದೇ ನೆನಪುಗಳ ಸಾಲು ಸಾಲು 


ಏಕೋ ಏನೋ ನಿಂತಲ್ಲೇ ನಿಲುತಿಲ್ಲ ನನ್ನಯಾ ಮನವಿಂದು 


ಮಿಡಿಯುತಿದೆ ಹೊಸ ಹೊಸ ಭಾವಗಳು ಮುದ್ದಾದ ಹೃದಯದಲ್ಲಿ


ಹೇ ಒಲವೇ ಹೇಳುತಿದೆ ನನ್ನೀ ಮನವು ಇಲ್ಲೇ ನಿ ಇರುವೆ ಎಂದು 


ಕಣ್ತೆರೆದು ಒಮ್ಮೆ ನೋಡು ಬಾ ಗೆಳತಿ ನನ್ನೊಳಗೆ ನಿನ್ನಾ 


ತುಸು ದೂರ ಸುಮ್ಮನೆ ಜೊತೆಯಲ್ಲಿ ಬಂದು ....!!










Monday, February 13, 2012

ಮನಸ್ಸಿನ ಭಾವನೆಗಳೆ ಈ ಕವನ..!!!


ಇದ್ದೆ ನಾ ತೇಲುತಾ ನೆನಪುಗಳ ಅಲೆಯಲ್ಲಿ ದಡದ ಬರುವಿಕೆಗಾಗಿ              
ಅರಿಯದೆ ಕಾಡುವಾ ನೆನಪು ಮರೆಸಿ ನೀ ತಂದೆ ಸಿಹಿ ಪ್ರೀತಿ ಎದೆಯಲಿ      
ಜೀವದಾ  ಜೀವಕೆ ಉಸಿರ ಎರೆದು ಹೊಸ ಭಾವದ ಮಿಡಿತ ನೀನಾದೆ          
ಬರುವೆಯಾ ಎನ್ನ ಮನದ ಮಂದಿರವ ಬೆಳಗುವ ಜ್ಯೋತಿಯಾಗಿ ನೀ      
ಓ ಒಲವೇ ನಿನಗೆ ನಿವೇದಿಸಲಾಗದ ನನ್ನ ಮನಸ್ಸಿನ ಭಾವನೆಗಳೆ ಈ  ಕವನ..!!!


Saturday, February 11, 2012

ಹುಚ್ಚು ಒಲವೇ.....

ಹುಚ್ಚು ಒಲವೇ ತಿರುತಿರುಗಿ ನೀ ನೋಡದಿರು ಹಿಂಗೇ ,
ಮೋಹದಾ ಮುಗುಳು ನಗೆ ಬಿರಿ ಕಣ್ಣಂಚಲೇ ಮನಸೆಳೆದೆ ,
ಬತ್ತಿ ಬರಿದಾದ ಈ ಮನಕೆ ಪ್ರೀತಿಯಾ ಸಿಂಚನವ ಮಾಡಿದೆ ,
ಅರಿಯದಾ ಹೃದಯದ ಕಣ್ಣಿಗೆ ಕನಸಿನಾ ಅರಮನೆ ತೋರಿದೆ ,
ಮಾಯದಾ ಹೊಂಗನಸು ನನಸಾಗುವ ಮುನ್ನ '
ಮುಗ್ದ ಭಾವದಿ ಒಲವ ಸುಧೆ ಹರಿಸಿ ,
ಓ ಜೀವವೇ ಎಲ್ಲಿ ಮರೆಯಾದೆ ನೀ ಮೌನವಾಗಿ........?

Tuesday, February 7, 2012

ಮಂಜಿನಾ ಹನಿಗಳು ....

ಬಾನಿನಾ ಒಡಲಿಂದ ಜಾರುತಿವೆ ಇಬ್ಬನಿಯ ಹನಿಗಳು ,
ಚಂದಿರನ ಬೆಳದಿಂಗಳು ನುಗ್ಗುತಿವೆ ಮುತ್ತಿಕಲು ಅದನು ,
ಉತ್ಸುಕದಿ ಕಾಯುತಿದೆ ಚಿಗುರೆಲೆಯು ಎದೆಯಲ್ಲಿ ಬಚ್ಚಿಡಲು ,
ಮುಗುಳ್ನಗೆ ಬಿರುತಿದೆ ಮೊಗ್ಗು ಇದ್ದು ಇಲ್ಲದಾ ಮಂಜಿನಾ ನೆರಳಲಿ ,
ನಸು ನಾಚಿ ಮರೆಯಾಗುತಿವೆ ಮುತ್ತಿನಾ ಹನಿಗಳು ,
ಕೇಳುತಿದೆ ಇಳೆಯು ಮತ್ತೆ ಬರುವೆಯಾ ಎಂದೂ.......♥♥

Monday, February 6, 2012

ಒಲವೇ ಹೇಳು ನಿನ್ಯಾರು.......??

ಅರಿವಿಲ್ಲದೆ ಮರೆಯಾಗುವೆ ಮರೆಯಾಗಿಯೂ ನನ್ನ ಕಾಡುವೆ ,
ಕನಸಲು ಕನಸಾಗಿ ಬಂದು ಹೃದಯದ ಕದ ತಟ್ಟಿ ಕರೆಯುತಿಹೆ ,
ಕಣ್ಮುಚ್ಚಿ ಕುಳಿತರು ಕಣ್ಣೊಳಗೆ ಮೂಡುವುದು ನಿನ್ನದೇ ಛಾಯೆ ,
ಮನದ ಮನೆಯಲ್ಲಿ ಗೀಚಿದೆ ಸುಂದರ ಭಾವನೆಗಳ ಚಿತ್ತಾರ ,
ಉಸಿರಲು ಉಸಿರು ಬೆರೆಸುವ ಒಲವೇ ಹೇಳು ನಿನ್ಯಾರು........??

Saturday, February 4, 2012

ಅರಿಯದೆ ಮುಡಿದಾ ಪ್ರೀತಿ....

ನೆನಪಿನ ಅಲೆಗಳಲಿ ಪದೇ ಪದೇ ಕಾಡಿ ಕೊಲ್ಲದಿರು ಎನ್ನಾ ,
ಕನಸು ಕನಸುಗಳ ನಡುವೆ ಕನಸಾಗಿ ಕರಗದಿರು ಎಂದು ,
ಮಾತು ಕೊಟ್ಟು ಮರೆಯದಿರು ಪ್ರೀತಿ ಕೊಟ್ಟು ಕೊರಗದಿರು ,
ಮನಸು ಮನಸುಗಳ ಮುಗ್ಧ ಪ್ರೀತಿಯ ಚಿಲುಮೆಯಾಗು ,
ನೊಂದ ಭಾವಗಳ ಭಾವನೆಯ ಸ್ಪೂರ್ತಿಯ ಸೆಲೆಯಾಗು ನೀ ,
ಮಾಯವಾಗದಿರಲಿ ಎಂದೂ ಈ ಅರಿಯದೆ ಮುಡಿದಾ ಪ್ರೀತಿ........♥♥

Wednesday, February 1, 2012

ಮಾಯದಾ ಕನಸು...

ಮತ್ತೆ ಮತ್ತದೆಕೋ ಗುನುಗುತಿದೆ ಕಿವಿಯಲ್ಲಿ ಹೃದಯದ ಪಿಸು ಮಾತುಗಳು ,
ಕಂಡು ಕಾಣದೆ ಹುಚ್ಚೆದ್ದು ಕುಣಿಯುತಿದೆ ನೂರೆಂಟು ಹೊಸ ಭಾವನೆಗಳು ,
ಅಂತರಂಗದಲ್ಲೆಲ್ಲೋ ಸ್ವಚಂದವಾಗಿ ವಿಹರಿಸುತಿವೆ ಆ ನಿನ್ನ ನೆನಪಿನಾ ಅಲೆಗಳು ,
ಒಮ್ಮೆ ಬರಲಾರೆಯಾ ಬಂದು ಬಿಗಿದಪ್ಪೆಯಾ ನನ್ನಾ ನಿನ್ನಯ ಪ್ರೀತಿಯಾ ಸೆಲೆಯಲ್ಲಿ ,
ಬೆಂಬಿಡದೆ ಕಾಡುವ ಮಾಯದಾ ಕನಸು ಕರಗಿ ಮರೆಯಾಗುವ ಮುನ್ನಾ...............??

Tuesday, January 31, 2012

ಹುಚ್ಚು ಮನಸ್ಸೇ ನೀ ಹಿಂಗ್ಯಾಕೆ

ನನಗರಿವಿಲ್ಲದೆ ಬಂದು ನಿನಾವರಿಸಿಬಿಟ್ಟೆ ನನ್ನಯ ಮನವನ್ನು ,
ಅಣು ಅಣುವಿನಲ್ಲು ಬೆರೆತು ಮೊಡಿಸಿದೆ ಹೊಸ ಚೇತನವ ನೀ ,
ಏಕಾಂತದಲಿ ಮಿಡಿಯುತಿದೆ ಈ ಭಾವ ನೆನಪಿನ ನೌಕೆಯಲಿ ತೇಲಿ ,
ಮನಸೇಕೋ ಹೇಳುತಿದೆ ನಿನ್ನಯ ಪ್ರೀತಿ ನನಗಾಗಿ ಕಾಯುತಿದೆ ಎಂದು ,
ಅದೇನೋ ಆಕರ್ಷಣೆ ಕಾಣದಾ ನಿನಗಾಗಿ ನಿನ್ನಯ ಸನಿಹಕಾಗಿ ,
ಅರಿಯದಾದೆ ನಾ ಹುಚ್ಚು ಮನಸ್ಸೇ ನೀ ಹಿಂಗ್ಯಾಕೆ.........?

Tuesday, January 17, 2012

ಬರಲಾರೆಯ ಗೆಳತಿ

ನನಗರಿವಿಲ್ಲದೆಯೇ ಬಂದು ನೀ ಆವರಿಸಿಬಿಟ್ಟೆ ಎನ್ನೆದೆಯ ಮಂದಿರವ ,
ಒಂದು ಮಾತನು ಹೇಳದೆ ಮೌನವಾಗಿ ಬಂದು ಮನದ ಬಾಗಿಲು ತೆರೆದೆಯಾ ,
ಹೇಗೋ ಏನೋ ಕಣ್ಣಲ್ಲೂ ಮನದಲ್ಲೂ ಎಲ್ಲೆಲ್ಲೋ ಮೂಡಿದೆ ನಿನ್ನದೇ ಛಾಯೆ ,
ನಿನ್ನ ಈ ಮೋಹ ಮಾಯೆಯ ನೋಡುತ ನಾನಿಂದೆ ನನ್ನನೇ ನಾ ಮರೆತು ,
ಕನಸಲ್ಲೂ ಮನಸಲ್ಲೂ ಎಲ್ಲೆಲ್ಲು ಕಾಣುತಿದೆ ನಿನ್ನದೇ ಪ್ರತಿರೂಪ ಏಕೋ ನಾ ಅರಿಯೆ , ಅಲೆಯ ಮಡಿಲ್ಲಲ್ಲಿ ಅಡಗಿ ಸನಿಹ ಬಂದಂತೆ ಕಡಲು ಬರಲಾರೆಯ ಗೆಳತಿ ನನ್ನೊಡನೆ.....♥ ♥

Monday, January 16, 2012

ಮೌನಿಯಾದೆ

♥ ♥..ನಾ ಮೌನಿಯಾದೆ ನಿನ್ನಯ ಮಧುರವಾದ ಮಾತುಗಳ ಕೇಳುತಾ ,
ನೀ ಪ್ರೆಮದೆವತೆಯಾದೆ ನನ್ನಯ ಒಲವಿನ ಹೃದಯ ಮಂದಿರಕೆ ,
ಅದೇಕೋ ಅರಿತು ಅರಿಯದೆಯೇ ಸೆಳೆಯುತಿದೆ ನಿನ್ನಾ ಕಣ್ಣಿನಾ ನೋಟ ,
ಮನಸೇಕೋ ಓಡುತಿದೆ ಕಾಣದ ನಿನಗಾಗಿ ದಣಿವಿನಾ ಅರಿವಿಲ್ಲದೆ ,
ಕೆಳುತಿಹುದೇ ಗೆಳತಿ ಮನದಾಳದ ಭಾವನೆಯ ತುಡಿತಾ ಪ್ರೀತಿಯ ಮಿಡಿತಾ..♥ ♥

Wednesday, January 11, 2012

ನಿನ್ನಯ ಪ್ರೀತಿ

ಮತ್ತೆ ಮತ್ತೆ ಕಾಡುತಿಹುದು ನಿನ್ನಯಾ ಸವಿನೆನಪುಗಳು ನನ್ನ ಮನವನ್ನು ,
ಹಾತೊರೆಯುತಿದೆ ಹೇಳಲು ಮನದಾಳದಿ ಬಚ್ಚಿಟ್ಟ ಆ ಮಾತನೊಂದು ,
ಇಂದಿಗೂ ಕಂಗಳಲಿ ಮಾಸಿಲ್ಲ ಅಂದು ಮೂಡಿದಾ ನಿನ್ನಯ ಸುಂದರ ಛಾಯೆ ,
ಅರಿಯದಾದೆನಾ ಹೀಗೇಕೆ ಕಾಡುತಿಹವು ನಿನ್ನಯ ನೆನಪುಗಳ ಸರಮಾಲೆ ,
ಮೌನವಾಗಿ ಕಾಡದಿರು ನೀ ಹೀಗೆ ದೂರದಿ ಮರೆಯಾಗಿ ನಿಂತು .....,
ಸನಿಹ ಬಂದೊಮ್ಮೆ ಹೇಳಿಬಿಡು ಗೆಳತಿ ನಾ ಇಷ್ಟವೆಂದು ನಿನ್ನಯ ಪ್ರೀತಿ ನನಗೆ ಮಿಸಲೆಂದು ...

Friday, January 6, 2012

ಪವಿತ್ರ ಪ್ರೀತಿ

ನಿನದೆ ಸವಿ ನೆನಪು ಎದೆಯಾ ಕಲಕಿ ಕಲಕಿ ಕಾಡುತಿದೆ ,
ಅಂತರಂಗದ ಪ್ರೀತಿಯ ದನಿಯು ಕೂಗಿ ಕೂಗಿ ಕರೆಯುತಿದೆ ,
ಮನದಾ ಮೂಲೆಯಲಿ ಸೆರೆಯಾಗಿದೆ ನಿನ್ನಯಾ ಮೋಹಕ ಬಿಂಬ ,
ಒಡಲಾಳದ ಭಾವನೆಯ ಭಾವವು ಸಾರಿ ಸಾರಿ ಹೇಳುತಿದೆ ,
ಮರೆತು ಮರೆಯದಿರು ಸಂಗಾತಿಯ ಪವಿತ್ರ ಪ್ರೀತಿಯಾ ಪ್ರೀತಿಸಿದ ಹೃದಯವಾ ....!!!

Sunday, January 1, 2012

ಕಾಣದಾ ಪ್ರೀತಿ

ನಿನ್ನಯಾ ಕಣ್ಣಿನ ನೋಟದಲ್ಲಿ ಉಕ್ಕುತಿದೆ ಮೋಹದಾ ಚಿಲುಮೆ ,
ಮನಸಿನಾ ಕನಸಿನಲಿ ನಲಿಯುತಿದೆ ಮಾಯದಾ ಒಲವಿನಾ ಬೆಸುಗೆ ,
ಮೀಡಿಯುತಿದೆ ಹೃದಯದಲಿ ಏನೋ ಹೊಸಭಾವನೆಯ ಚಿಗುರು ,
ಮನಸೆಂಬ ಚಿಟ್ಟೆ ಹಾರುತಿದೆ ನಿವೇದಿಸಲು ಮನದಾ ಬಯಕೆಯ '
ಅನಿಸುತಿದೆ ಏಕೋ ಏನೋ ಇರಬಹುದೇ ಇದು ಕಾಣದಾ ಪ್ರೀತಿ ಎಂದು.....!!!!